Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಪೂರ್ವ ಕಾಂಗೊದಲ್ಲಿ ಸ್ಫೋಟ: 32 ಭಾರತೀಯ ಶಾಂತಿದೂತರಿಗೆ ಗಾಯ

un-indiಕಿನ್ಶಾಸ: ಪೂರ್ವ ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊ ನಗರದ ಗೊಮದಲ್ಲಿ ಉಂಟಾದ ಸ್ಫೋಟದಿಂದ ಮಗುವೊಂದು ಮೃತಪಟ್ಟು 32 ಮಂದಿ ಭಾರತೀಯ ಶಾಂತಿದೂತರು ಗಾಯಗೊಂಡಿದ್ದಾರೆ. ಪಶ್ಚಿಮ ಗೊಮಾ ನೆರೆಯ ಪ್ರದೇಶ ಕಿಶೆರೊದಲ್ಲಿ ಶಾಂತಿದೂತರು ಬೆಳಗಿನ ವಾಕ್ ಹೋಗುತ್ತಿದ್ದಾಗ ಸ್ಫೋಟ ಸಂಭವಿಸಿತ್ತು. ಈ ಸಂದರ್ಭದಲ್ಲಿ ಸ್ಫೋಟ ತಾಗಿ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ನಿಯೋಗ ತಿಳಿಸಿದೆ. ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.

ಪಕ್ಕದ ಮಸೀದಿಯಲ್ಲಿ ಇಮಾಮ್ ಆಗಿರುವ ಇಸ್ಮಾಯಿಲ್ ಸಲೂಮು ಮಾತನಾಡಿ, ಮೂವರು ಶಾಂತಿದೂತರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ನಮಗೆ ಹಠಾತ್ತಾಗಿ ಸ್ಫೋಟ ಕೇಳಿಬಂದು ನಂತರ ಆಕ್ರಂದನ ಕೇಳಿಸಿತು. ಆಗ ನಾವು ಏನೆಂದು ಓಡಿಹೋಗಿ ನೋಡಿದೆವು ಎಂದು ರಾಯ್ ಟರ್ಸ್ ಸುದ್ದಿ ಸಂಸ್ಥೆಗೆ ವಿವರ ನೀಡಿದರು.

ಸುಮಾರು 18 ಸಾವಿರ ಮಂದಿ ವಿಶ್ವ ಸಂಸ್ಥೆ ಭದ್ರತಾ ಸಿಬ್ಬಂದಿ ಕಾಂಗೊದಲ್ಲಿ ಕೆಲಸ ಮಾಡುತ್ತಿದ್ದು, 1996ರಿಂದ 2003ರವರೆಗೆ ಲಕ್ಷಾಂತರ ಮಂದಿ ಸ್ಥಳೀಯ ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಮತ್ತು ಹತ್ತಾರು ಮಂದಿ ಸೇನಾ ಪಡೆ ಕಾರ್ಯನಿರ್ವಹಿಸುತ್ತಿದೆ.

No Comments

Leave A Comment