Log In
BREAKING NEWS >
Smriti Irani says writing on the wall for Rahul Gandhi...

ಕಾಶ್ಮೀರದಲ್ಲಿ ನಾವು ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ: ಭಾರತಕ್ಕೆ ಹಫೀಜ್ ಸಯ್ಯೀದ್ ಬೆದರಿಕೆ

pak-newಲಾಹೋರ್: ಕಾಶ್ಮೀರ ಉಗ್ರರಿಂದ ಜಮ್ಮು ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ ಎಂದು ಜಮಾತ್-ಉದ್ -ದವಾ ಮುಖ್ಯಸ್ಥ ಹಾಗೂ ಮುಂಬಯಿ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಹಪೀಜ್ ಸಯ್ಯೀದ್ ಭಾರತಕ್ಕೆ ಬೆದರಿಕೆ ಹಾಕಿದ್ದಾನೆ.

ಪಾಕ್ ಆಕ್ರಮಿತ ಕಾಶ್ಮೀರದ ಮೀರ್ ಪುರ್ ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಸಯ್ಯೀದ್ ಪ್ರಧಾನ ಮಂತ್ರ ನರೇಂದ್ರ ಮೋದಿ ಏನು ಮಾಡಿದ್ದಾರೋ ಅದನ್ನೇ ಕಾಶ್ಮೀರದಲ್ಲಿ ಮಾಡಲಾಗುತ್ತದೆ ಎಂದು ಹೇಳಿದ್ದಾನೆ.ಮುಂದಿನ ದಿನಗಳಲ್ಲಿ ಧೀರ್ಘಕಾಲ ನೆನಪಿನಲ್ಲಿ ಉಳಿಯುವಂತ ಸರ್ಜಿಕಲ್ ಸ್ಟ್ರೈಕ್ ಅನ್ನು ಮುಜಾಹಿದ್ದೀನ್ ಮಾಡುತ್ತದೆ.

ಇದು ಪ್ರಪಂಚದ ಗಮನಕ್ಕೆ ಬರುವಂತ ದಾಳಿ ಆಗಿರುತ್ತದೆ ಎಂದು ಆತ ಬೆದರಿಕೆ ಹಾಕಿದ್ದಾನೆ.

ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯ ಸಂಬಂಧ ಪಾಕಿಸ್ತಾನ ‘ಕೂಲ್ ‘ ಎಂಬಂತಹ ಪ್ರತಿಕ್ರಿಯೆ ನೀಡುತ್ತಿದೆ. ಕೇವಲ ಬಾಯಲ್ಲಿ ಹೇಳಿದರೇ ಸಾಲದು ಕಣಿವೆ ಜನಕ್ಕೆ ಪಾಕಿಸ್ತಾನ ವಾಸ್ತವವಾಗಿ ಬೆಂಬಲ ನೀಡಬೇಕು ಎಂದು ಆತ ಆಗ್ರಹಿಸಿದ್ದಾನೆ.ಪಾಕಿಸ್ತಾನ ಸೇನೆಯಿಂದ ಸರ್ಜಿಕಲ್ ಸ್ಟ್ರೈಕ್ ಎದುರಿಸಲು ಸಿದ್ದರಾಗಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಆತ ಎಚ್ಚರಿಕೆ ನೀಡಿದ್ದಾನೆ.

No Comments

Leave A Comment