Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಮಾಸ್ತಿಗುಡಿ ನಿರ್ಲಕ್ಷ್ಯ,ಈ ಸಾವು ನ್ಯಾಯವೇ? ಮುಗಿಲು ಮುಟ್ಟಿದ ರೋಧನ

deadಬೆಂಗಳೂರು: ತಿಪ್ಪಗೊಂಡನಕೆರೆಯಲ್ಲಿ ಮುಳುಗಿ ಇಬ್ಬರು ಖಳನಟರಾದ ಅನಿಲ್ ಮತ್ತು ಉದಯ್ ವಿಧಿವಶರಾಗಿರುವ ಘಟನೆ ಹಿನ್ನೆಲೆಯಲ್ಲಿ ಮಾಸ್ತಿಗುಡಿ ಚಿತ್ರತಂಡ ಹಾಗೂ ಸಾಹಸ ನಿರ್ದೇಶಕ ರವಿವರ್ಮಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಮಾಸ್ತಿಗುಡಿ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್  ಚಿತ್ರತಂಡ ಸುರಕ್ಷತಾ ಕ್ರಮವನ್ನು ಗಾಳಿಗೆ ತೂರಿದೆ ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲ ನಿರ್ಲಕ್ಷ್ಯವೇ ಇಬ್ಬರು ಖಳನಟರ ಸಾವಿಗೆ ಕಾರಣ ಎನ್ನಲಾಗಿದೆ. ಖಳನಟರಿಬ್ಬರಿಗೂ ಈಜೂ ಕೂಡಾ ಬರುತ್ತಿರಲಿಲ್ಲವಾಗಿತ್ತು, ಡ್ಯೂಪ್ ಕೂಡಾ ಚಿತ್ರತಂಡ ಬಳಸಿಕೊಂಡಿಲ್ಲ!

ಹೆಲಿಕಾಪ್ಟರ್ ನಿಂದ  ಅನಿಲ್, ಉದಯ್ ಹಾಗೂ ನಟ ವಿಜಿ ಜಂಪ್ ಮಾಡಿದ್ದರು.  ನಟ ವಿಜಿ ಸ್ವಲ್ವ ದೂರ ಈಜಿ ಬರುತ್ತಿದ್ದ ವೇಳೆ ತೆಪ್ಪದಲ್ಲಿ ಸಾಗುತ್ತಿದ್ದವರು ರಕ್ಷಿಸಿದ್ದರು. ಅನಿಲ್ ಮತ್ತು ಉದಯ್ ರಕ್ಷಣೆಗೆ ಬೋಟ್ ನಲ್ಲಿ ತೆರಳುತ್ತಿದ್ದಾಗ ಡೀಸೆಲ್ ಖಾಲಿ ಆಗಿ ನಿಂತಿತ್ತು. ಬಳಿಕ ತೆಪ್ಪದಲ್ಲಿ ಹೋಗುವಷ್ಟರಲ್ಲಿ ಅವರು ಮುಳುಗಿ ಹೋಗಿದ್ದರು.

ಲೈಫ್ ಜಾಕೆಟ್ ಹಾಕಿಕೊಂಡಿದ್ದರೆ ಇಬ್ಬರೂ ನಟರು ಸಾವಿಗೀಡಾಗುತ್ತಿರಲಿಲ್ಲ. ಮಾಸ್ತಿಗುಡಿ ಚಿತ್ರ ತಂಡ ನಿಯಮ ಉಲ್ಲಂಘಿಸಿ ಈ ಸಾಹಸಕ್ಕೆ ಕೈಹಾಕಿದ್ದು, ಕೆರೆಯ ಮೇಲೆ ಏರಿಯಲ್ ಶೂಟಿಂಗ್ ಗೆ ಜಲಮಂಡಳಿ ಅನುಮತಿಯೇ ನೀಡಿರಲಿಲ್ಲವಾಗಿತ್ತು.

ಶೂಟಿಂಗ್ ವೇಳೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಈ ದುರಂತ ಸಂಭವಿಸಿದೆ ಎಂದು ಸ್ಯಾಂಡಲ್ ವುಡ್ ಹಿರಿಯ ನಟರು ಪ್ರತಿಕ್ರಿಯೆ ನೀಡಿದ್ದಾರೆ.

ಅನಿಲ್, ಉದಯ್ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ:
ಬೆಂಗಳೂರಿನ ಕದಿರೇನಹಳ್ಳಿ ನಿವಾಸಿ ಅನಿಲ್ ಗೆ ಪತ್ನಿ, 6 ವರ್ಷದ ಗಂಡು ಮಗು, 3 ವರ್ಷದ ಹೆಣ್ಣು ಮಗು, ತಾಯಿ ಇದ್ದಾರೆ. ಮಗನನ್ನು ಕಳೆದುಕೊಂಡ ತಾಯಿ, ಗಂಡನನ್ನು ಕಳೆದುಕೊಂಡ ಪತ್ನಿ, ಮಕ್ಕಳು, ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.  ನಟ ಉದಯ್ ಅವರ ಮನೆಯಲ್ಲಿಯೂ ಆಕ್ರಂದನ ಮುಗಿಲು ಮುಟ್ಟಿದೆ.
 

ಶವಕ್ಕಾಗಿ ಶೋಧ; ತಿಪ್ಪಗೊಂಡನಹಳ್ಳಿ ಕೆರೆ ಬಳಿ ಜನಸಾಗರ

ಮಾಸ್ತಿಗುಡಿ ಕ್ಲೈಮ್ಯಾಕ್ಸ್ ವೇಳೆ ಸಂಭವಿಸಿದ ದುರಂತ ತಿಳಿದು ತಿಪ್ಪಗೊಂಡನಹಳ್ಳಿ ಕೆರೆ ಪ್ರದೇಶದ ಬಳಿ ಸಾವಿರಾರು ಜನರು ಜಮಾಯಿಸತೊಡಗಿದ್ದಾರೆ. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ. ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ನಟರಾದ ಉದಯ್ ಮತ್ತು ಅನಿಲ್ ಶವಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ ಎಂದು ವರದಿ ವಿವರಿಸಿದೆ.

 

No Comments

Leave A Comment