Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಸನ್ಯಾಸ್ಯತ್ವಕ್ಕೆ ಗುಡ್ ಬೈ; ಕೇರಳ ಯುವತಿ ಜೊತೆ ಪ್ರಣವಾನಂದ ವಿವಾಹ

pranvaಕಲಬುರಗಿ:ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಅರೆಮಲ್ಲಾಪುರದ ಶರಣಬಸವೇಶ್ವರ ಮಠದ ಪೀಠಾಧಿಪತಿ ವಿವಾದಿತ ಪ್ರಣವಾನಂದ ಸ್ವಾಮೀಜಿ ಸನ್ಯಾಸ್ಯತ್ವಕ್ಕೆ ತಿಲಾಂಜಲಿ ನೀಡಿ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ. ಕೇರಳ ಮೂಲದ ಯುವತಿ ಜೊತೆ ಪ್ರಣವಾನಂದ ಸ್ವಾಮೀಜಿ ಸೋಮವಾರ ಹಸೆಮಣೆ ಏರಿದ್ದಾರೆ.

ಶರಣಬಸವೇಶ್ವರ ದೇವಸ್ಥಾನದಲ್ಲಿ ಇಂದು 11.45ರಿಂದ 12.30ರ ಮುಹೂರ್ತದಲ್ಲಿ ಕೇರಳ ಮೂಲದ ಮೀರಾ ಎಂಬಾಕೆ ಜೊತೆ ಕಾವಿ ವಸ್ತ್ರಧಾರಿಯಾಗಿಯೇ ಪ್ರಣವಾನಂದ ಸಪ್ತಪದಿ ತುಳಿದಿದ್ದಾರೆ.

ನನ್ನ ಮಠದ ಪರಂಪರೆಯಲ್ಲಿ ಗೃಹಸ್ಥರಾಗಲು ಅವಕಾಶವಿದೆ. ಆದರೆ ನಾನು ಗೃಹಸ್ಥನಾದರು ಸಮಾಜ ಸೇವೆ ಬಿಡಲ್ಲ ಎಂದು ಪ್ರಣವಾನಂದ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಮದುವೆ ಸಮಾರಂಭದಲ್ಲಿ ಹಲವು ಗಣ್ಯರು ಭಾಗವಹಿಸಿ ವಧು, ವರರನ್ನು ಆಶೀರ್ವದಿಸಿದರು.

 

No Comments

Leave A Comment