Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಆಸ್ಪತ್ರೆಯಲ್ಲಿ ಮಗು ಹೆತ್ತ ಹುಡುಗಿ: 12ರ ಹುಡುಗನ ವಿರುದ್ಧ ಕೇಸು

child-dಕೊಚ್ಚಿ : ಅತ್ಯಂತ ವಿಲಕ್ಷಣಕಾರಿ ಘಟನೆಯೊಂದರಲ್ಲಿ 18 ವರ್ಷ ಪ್ರಾಯದ ಹುಡುಗಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ  ಹೆಣ್ಣು ಮಗುವಿಗೆ ಜನ್ಮನೀಡಿರುವುದನ್ನು ಅನುಸರಿಸಿ ಇದಕ್ಕೆ ಕಾರಣನಾದ ಆರೋಪದ ಮೇಲೆ  12 ವರ್ಷ ಪ್ರಾಯದ ಹುಡುಗನ ವಿರುದ್ಧ ಕಳಮಸ್ಸೇರಿ ಪೊಲೀಸರು ಕೇಸು ದಾಖಲಿಸಿದ್ದಾರೆ.

ಹುಡುಗಿಯು ಮಗು ಹೆರಲು ಕಾರಣನಾದ ಹುಡುಗನ ವಿರುದ್ಧ  ಬಾಲಾಪರಾಧ ಕಾಯಿದೆಯ ಸೆ.75ರ ಪ್ರಕಾರ ಪೊಲೀಸರು ಕೇಸು ದಾಖಲಿಸಿಕೊಂಡಿರುವ ಬೆನ್ನಿಗೇ,  18 ವರ್ಷ ಪ್ರಾಯವಾಗುವುದಕ್ಕೆ ಎರಡು ತಿಂಗಳ ಮುನ್ನವೇ ಹುಡುಗಿಯು  ಮಗು ಹೆತ್ತಿರುವ ಕಾರಣ, ಈ ವಿಷಯವನ್ನು ಪೊಲೀಸರಿಗೆ ತಿಳಿಸದಿರುವ ಖಾಸಗಿ ಆಸ್ಪತ್ರೆಯ ವಿರುದ್ಧವೂ POCSO ಕಾಯಿದೆಯಡಿ ಕೇಸು ದಾಖಲಿಸಿಕೊಂಡಿದ್ದಾರೆ.

ಆದರೆ ಖಾಸಗಿ ಆಸ್ಪತ್ರೆ ಅಧಿಕಾರಿಗಳು, ಹುಡುಗಿಯು ಹೆರಿಗೆಯ ಸಂದರ್ಭದಲ್ಲಿ  ತಾನು ಹದಿನೆಂಟು ವರ್ಷ ಪ್ರಾಯದವಳೆಂದು ಹೇಳಿಕೊಂಡಿದ್ದು ಅದನ್ನು ಪೊಲೀಸರಿಗೆ ತಿಳಿಸಬೇಕಾಗಿಲ್ಲದ ಕಾರಣ ತಾವೇನೂ ತಪ್ಪು  ಮಾಡಿಲ್ಲ ಎಂದು ಹೇಳಿದ್ದಾರೆ.

“ಆದರೆ ಹುಡುಗಿಗೆ ಹುಟ್ಟಿದ ಹೆಣ್ಣು ಮಗವಿನ ಅಪ್ಪನು 12 ವರ್ಷದ ಹುಡುಗನೆಂದು ಹುಡುಗಿಯ ಸಂಬಂಧಿಕರ ನಮಗೆ ತಿಳಿಸಿದಾಗ ನಾವು ಕೂಡಲೇ ವಿಷಯವನ್ನು “ಚೈಲ್ಡ್‌ ಲೈನ್‌’ಗೆ ತಿಳಿಸಿದೆವು ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿದ್ದಾರೆ.

“ಪ್ರಕರಣವನ್ನು ನಾವು ವರದಿ ಮಾಡುವ ಮೊದಲು ಈ ಹೆರಿಗೆಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ನಾವು, ಹುಡುಗಿಯು ನ.4ರಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆದ ಬಳಿಕ, ಚೈಲ್ಡ್‌ ಲೈನ್‌ಗೆ ಹಸ್ತಾಂತರಿಸಿದೆವು’ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ.

ಚೈಲ್ಡ್‌ ಲೈನ್‌ ಕಾರ್ಯಕರ್ತರು ಈಗ, 18ರ ಹರೆಯದ ಹುಡುಗಿಗೆ 12ರ ಹರೆಯದ ಹುಡುಗನೇ ಗರ್ಭವತಿಯನ್ನಾಗಿ ಮಾಡಿರಲು ಸಾಧ್ಯವೇ ಎಂದು ಶಂಕಿಸಿದ್ದಾರೆ.

ಕಳಮಸ್ಸೇರಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಜಯಕೃಷ್ಣನ್‌ “ಹುಡುಗಿಯು ಮಗುವಿಗೆ ಜನ್ಮನೀಡಿದ ಒಂದು ದಿನದ ತರುವಾಯ ಆಸ್ಪತ್ರೆಯವರು ನಮಗೆ ಮಾಹಿತಿ ನೀಡಿದ್ದಾರೆ. POCSO  ಕಾಯಿದೆಯ ಪ್ರಕಾರ ಆಸ್ಪತ್ರೆಯವರು ನಮಗೆ ಕೂಡಲೇ ವಿಷಯ ತಿಳಿಸಬೇಕಿತ್ತು. ಈ ಲೋಪಕ್ಕಾಗಿ ನಾವು ಆಸ್ಪತ್ರೆಯ ವಿರುದ್ಧವೂ ಕೇಸು ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

ಇದೀಗ ತಾಜಾ ವಿದ್ಯಮಾನದಲ್ಲಿ ಮಗು ಹೆತ್ತ ಹುಡುಗಿಯ ಅಜ್ಜ – ಅಜ್ಜಿ , ಶಿಶು ಕಲ್ಯಾಣ ಆಯೋಗದವರೊಂದಿಗೆ ಮಾತುಕತೆ ನಡೆಸಿ ತಾವು ಮಗುವನ್ನು ಪೋಷಿಸಲು ಬಯಸುವುದಿಲ್ಲ ಎಂದು ಹೇಳಿದ್ದು ತತ್‌ಪರಿಣಾಮವಾಗಿ ಶಿಶು ಕಲ್ಯಾಣ ಮಂಡಳಿಯು ನವಜಾತ ಶಿಶುವನ್ನು ತನ್ನ ಆಸರೆ ಕೇಂದ್ರಕ್ಕೆ ಕಳುಹಿಸಿದೆ.

No Comments

Leave A Comment