Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ರಿಲಯನ್ಸ್‌ 4ಜಿ ಲೈಫ್ ಫೋನ್‌ ಸ್ಫೋಟ, ಚಿತ್ರಗಳು ವೈರಲ್‌

reliance-4g-life-700ಹೊಸದಿಲ್ಲಿ : ಆಘಾತಕಾರಿ ಘಟನೆಯೊಂದರಲ್ಲಿ ಆರ್‌ಐಎಲ್‌ ಕಂಪೆನಿಯ ಚಿಲ್ಲರೆ ಮಾರಾಟ ಸಂಸ್ಥೆಯಾಗಿರುವ ರಿಲಯನ್ಸ್‌ ರಿಟೇಲ್‌ ಮಾರಿರುವ 4ಜಿ ಲೈಫ್ ಸ್ಮಾರ್ಟ್‌ ಫೋನ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಉರಿದಿದೆ.

ತನ್ವಿರ್‌ ಸಾದಿಕ್‌ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ “ನನ್ನ ರಿಲಯನ್ಸ್‌ 4ಜಿ ಲೈಫ್ ಸ್ಮಾರ್ಟ್‌ ಫೋನ್‌ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಉರಿದಾಗ ನನ್ನ ಮನೆಯವರು ಸ್ವಲ್ಪದರಲ್ಲೇ ಪಾರಾದರು’ ಎಂದು ತಿಳಿಸಿದ್ದಾರೆ. ಈ ಘಟನೆ ನಿನ್ನೆ ಭಾನುವಾರ ನಡೆದಿದೆ.

ಸ್ಫೋಟಗೊಂಡು ಬೆಂಕಿಯಲ್ಲಿ ಕರಟಿಹೋಗಿರುವ ತಮ್ಮ ರಿಲಯನ್ಸ್‌ 4ಜಿ ಲೈಫ್ ಸ್ಮಾರ್ಟ್‌ ಫೋನ್‌ನ ಫೋಟೋವನ್ನು ಸಾದಿಕ್‌ ಅವರು ಅಪ್‌ಲೋಡ್‌ ಮಾಡಿದ್ದಾರೆ. ಮತ್ತು ತನ್ನಂತಹ ಅಮಾಯಕ ಗ್ರಾಹಕರು ಎಚ್ಚರಿಕೆಯಿಂದಿರುವಂತೆ ಸೂಚಿಸಿದ್ದಾರೆ. ತನ್ವೀರ್‌ ಅವರ ಈ ಪೋಸ್ಟ್‌ ಭಾರೀ ವೈರಲ್‌ ಆಗಿದ್ದು ಅನೇಕ ಟ್ವೀಟ್‌ಗಳು ಇದಕ್ಕೆ ಸ್ಪಂದಿಸಿವೆ.

ಈ ಬಗ್ಗೆ ತಾವು ತನಿಖೆ ಮಾಡುವುದಾಗಿ ರಿಲಯನ್ಸ್‌ ಕಂಪೆನಿ ಹೇಳಿದೆ. ರಿಲಯನ್ಸ್‌ 4ಜಿ ಲೈಫ್ ವಕ್ತಾರ ಈ ಘಟನೆಗೆ ಪ್ರತಿಕ್ರಿಯೆ ನೀಡಿದ್ದು, “ಸಾಮಾಜಿಕ ಜಾಲ ತಾಣದಲ್ಲಿ ಪ್ರಕಟಗೊಂಡಿರುವ ಈ ಘಟನೆಯ ಬಗ್ಗೆ ನಮಗೆ ಅತೀವ ಕಾಳಜಿ ಇದೆ; ನಾವಿದನ್ನು ಗಂಭೀರವಾಗಿ ಪರಗಣಿಸಿದ್ದು ಫೋನ್‌ ಸೆಟ್‌ ಸ್ಫೋಟಗೊಳ್ಳಲು ಕಾರಣವೇನೆಂಬುದನ್ನು ತಿಳಿಯಲು ತನಿಖೆಗೆ ಮುಂದಾಗಿದ್ದೇವೆ’ ಎಂದು ತಿಳಿಸಿದ್ದಾರೆ.

 

No Comments

Leave A Comment