Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ....ಮಾರ್ಚ್ 19ರ೦ದು ಚಾ೦ದ್ರಮಾನ ಯುಗಾದಿ ಹಬ್ಬ....

ಮಾಜಿ ಕೇಂದ್ರ ಸಚಿವೆ ಬಿಜೆಪಿ ನಾಯಕಿ ಜಯವಂತಿಬೆನ್ ಮೆಹ್ತಾ ನಿಧನ

jayavantಮುಂಬೈ: 1996ರಿಂದ 1999ರವರೆಗೆ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸಚಿವೆಯಾಗಿದ್ದ ಜಯವಂತಿಬೆನ್ ಮೆಹ್ತಾ ಸೋಮವಾರ ನಸುಕಿನ ಜಾವ ನಿಧನರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. 
 
ಬಿಜೆಪಿ ಪಕ್ಷದಲ್ಲಿ ಅವರು ಕಾರ್ಪೊರೇಟರ್, ಶಾಸಕ ಮತ್ತು ಸಂಸದರಾಗಿದ್ದರು. ಅವರು ದಿವಂಗತ ಮುರಳಿ ದಿಯೋರಾ ಅವರನ್ನು ದಕ್ಷಿಣ ಮುಂಬೈ ಕ್ಷೇತ್ರದಿಂದ ಸೋಲಿಸಿದ್ದರು.
ಜಯವಂತಿಬೆನ್ ಮೆಹ್ತಾ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅವರನ್ನು ತಳಮಟ್ಟದಿಂದ ಕೆಲಸ ಮಾಡುವ ನಾಯಕಿ ಎಂದು ಬಣ್ಣಿಸಿದ್ದಾರೆ. ಜಯವಂತಿಬೆನ್ ಬಿಜೆಪಿ-ಜನಸಂಘದ ಜನ ಸಮೂಹದ ನಾಯಕಿಯಾಗಿದ್ದು, ಸಾರ್ವಜನಿಕ ಸೇವೆಯಲ್ಲಿ ನಾಯಕತ್ವ ಗುಣಗಳನ್ನು ಕಲಿಸಿದ್ದರು ಎಂದು ಬಿಜೆಪಿ ಸಂಸದ ಕಿರಿತ್ ಸೋಮಯ್ಯ ಹೇಳಿದ್ದಾರೆ.
 
ಮುಂಬೈಯ ಶಿವಾಜಿ ಪಾರ್ಕ್ ಚಿತಾಗಾರದಲ್ಲಿ ಇಂದು ಸಾಯಂಕಾಲ 5.30ರ ವೇಳೆಗೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮಹಾರಾಷ್ಟ್ರ ರಾಜ್ಯ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ ತಿಳಿಸಿದ್ದಾರೆ.
 
ಜಯವಂತಿಬೆನ್ ವಾಜಪೇಯಿ ಸರ್ಕಾರದಲ್ಲಿ ಇಂಧನ ಖಾತೆ ರಾಜ್ಯ ಸಚಿವರಾಗಿದ್ದರು.
No Comments

Leave A Comment