Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಶೋಪಿಯಾನ್‌: ಹಿಜ್ಬುಲ್‌ ಉಗ್ರನ ಹತ್ಯೆ, ಇಬ್ಬರು ಸೇನಾ ಜವಾನರು ಜಖಂ

shopian-enಶೋಪಿಯಾನ್‌ : ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯಲ್ಲಿ  ಭದ್ರತಾ ಪಡೆಗಳ ಮತ್ತು ಉಗ್ರರ ನಡುವಿನ ಗುಂಡಿನ ಕಾಳಗದಲ್ಲಿ ಓರ್ವ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಹತನಾಗಿದ್ದು ಇಬ್ಬರು ಸೇನಾ ಜವಾನರು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಉಗ್ರರ ಅಡಗಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿಗಳು ದೊರಕಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಶೋಪಿಯಾನ್‌ ಜಿಲ್ಲೆಯ ವಂಗಾಂ ಎಂಬಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ಏರ್ಪಟ್ಟಿತು.

ಸದಾಂ ಹುಸೇನ್‌ ಮೀರ್‌ ಎಂಬ ಹಿಜ್ಬುಲ್‌ ಉಗ್ರ ಈ ಎನ್‌ಕೌಂಟರ್‌ನಲ್ಲಿ ಹತನಾದ. ಈ ಶೋಪಿಯಾನ್‌ ಛತ್ರಿಪೋರಾ ಎಂಬಲ್ಲಿನ ನಿವಾಸಿ ಎಂದು ತಿಳಿದುಬಂದಿದೆ.

ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಸೇನಾ ಜವಾನರು ಗಾಯಗೊಂಡರು. ಉಗ್ರರ ಬಳಿ ಇದ್ದ ಒಂದು ಅಸಾಲ್ಟ್ ರೈಫ‌ಲ್‌, ಐದು ಎಕೆ 47 ಮ್ಯಾಗಝೀನ್‌, 119 ಎಕೆ 47 ಸುತ್ತುಗಳ ಮದ್ದುಗುಂಡು ಮತ್ತು ಒಂದು ಹ್ಯಾಂಡ್‌ ಗ್ರೆನೇಡನ್ನು ಭದ್ರತ ಪಡೆಗಳು ವಶಪಡಿಸಿಕೊಂಡರೆಂದು ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment