Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಇ-ಮೇಲ್‌ ಹಗರಣದಲ್ಲಿ ಹಿಲರಿ ಕ್ಲಿಂಟನ್‌ಗೆ ಎಫ್ ಬಿ ಐ ಕ್ಲೀನ್‌ ಚಿಟ್‌

hilary-clinವಾಷಿಂಗ್ಟನ್‌ : ಬಹು ಚರ್ಚಿತ ಇ-ಮೇಲ್‌ ಹಗರಣದಲ್ಲಿ ಅಮೆರಿಕದ ಎಫ್ ಬಿ ಐ, ಡೆಮೋಕ್ರಾಟಿಕ್‌ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿಯಾಗಿರುವ ಹಿಲರಿ ಕ್ಲಿಂಟನ್‌ಗೆ ಕ್ಲೀನ್‌ ಚಿಟ್‌ ನೀಡಿದೆ. ಈ ವಿದ್ಯಮಾನವು ನಾಳೆ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿಗೆ ಅನುಕೂಲಕರ ಸ್ಥಿತಿಯನ್ನು ಉಂಟುಮಾಡಿದೆ ಎಂದು ತಿಳಿಯಲಾಗಿದೆ.

ಹಿಲರಿ ಕ್ಲಿಂಟನ್‌ ಅವರು ಈ ಹಿಂದೆ ವಿದೇಶ ಸಚಿವೆಯಾಗಿದ್ದಾಗ ತನ್ನ ಖಾಸಗಿ ಇ-ಮೇಲ್‌ ಸರ್ವರ್‌ ಬಳಸಿಕೊಂಡು ನಡೆಸಿದರೆನ್ನಲಾದ ಹಗರಣದ ಬಗ್ಗೆ ಆಕೆ ಕ್ರಿಮಿನಲ್‌ ಅಪರಾಧದ ತನಿಖೆಯನ್ನು ಎದುರಿಸಬೇಕೆಂದು ಆಗ್ರಹಿಸಲಾಗಿತ್ತು.

ಇದನ್ನು ಅನುಸರಿಸಿ FBI, ಹಿಲರಿ ಇ-ಮೇಲ್‌ಗ‌ಳ ಕೂಲಂಕಷ ಅವಲೋಕನ ನಡೆಸಿತ್ತು. ಇದರ ಆಧಾರದಲ್ಲಿ ಹಿಲರಿಗೆ ಕ್ಲೀನ್‌ ಚಿಟ್‌ ನೀಡಿರುವ FBI, ಆಕೆಯ ವಿರುದ್ಧ ಕ್ರಿಮಿನಲ್‌ ಆರೋಪ ಹೂಡದಿರುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು FBI ನಿರ್ದೇಶಕ ಜೇಮ್ಸ್‌ ಕಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ಹಿಲರಿ ಕ್ಲಿಂಟನ್‌ ಅವರ ಉನ್ನತ ಆಪ್ತ ಸಹಾಯಕಿ ಹುಮಾ ಅಬೇದಿನ್‌ ಅವರ ಪರಿತ್ಯಕ್ತ ಪತಿ ಆ್ಯಂಥನಿ ವೀನರ್‌ ಅವರ ಇ-ಮೇಲ್‌ಗ‌ಳ ಪ್ರತ್ಯೇಕ ವಿಚಾರಣೆಯನ್ನು ಎಫ್ಬಿಐ ನಡೆಸಿತ್ತು. ಅಂತೆಯೇ ಕ್ಲಿಂಟನ್‌ ಅವರು ತಮ್ಮ ಖಾಸಗಿ ಇ-ಮೇಲ್‌ ಸರ್ವರ್‌ ಬಳಸಿಕೊಂಡು ವಗೀಕೃತ ಮಾಹಿತಿಗಳ ದುರ್ಬಳಕೆ ಮಾಡಿರುವನ್ನೆಲಾದ ಬಗ್ಗೆ ನಡೆಸಲಾಗಿರುವ ತನಿಖೆಯನ್ನು ಇದರೊಂದಿಗೆ ಜೋಡಿಸಬಹುದಾಗಿದೆ ಎಂದು FBI ನಿರ್ದೇಶಕ ಕಾಮಿ ಅವರು ಸಂಸತ್ತಿಗೆ ತಿಳಿಸುವ ಮೂಲಕ ಬಾಂಬ್‌ಶೆಲ್‌ ಹಾಕಿದ್ದರು ಎಂದು ಸಿಎನ್‌ಎನ್‌ ವರದಿ ಮಾಡಿತ್ತು.

No Comments

Leave A Comment