Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಪಡುಬಿದ್ರಿ:ಜಿಎಸ್‌ಬಿ ವಿಶ್ವ ಸಮ್ಮೇಳನ: ಪೂರ್ವಭಾವಿ ಸಭೆ

gsbಪಡುಬಿದ್ರಿ: ಜಿಎಸ್‌ಬಿ ವಿಶ್ವ ಸಮ್ಮೇಳನವನ್ನು ಯಶಸ್ವಿಗೊಳಿಸುವ ದೃಷ್ಟಿಯಿಂದ ವಿವಿಧ ವಲಯಗಳ ಸುಮಾರು 1,500 ಪ್ರತಿನಿಧಿಗಳ ಪೂರ್ವಭಾವಿ ಸಭೆ  ಹೆಜಮಾಡಿಯ ಬಿಲ್ಲವರ ಸಭಾಂಗಣದಲ್ಲಿ ರವಿವಾರ ನಡೆಯಿತು.

ನಿವೃತ್ತ ವೈಸ್‌ ಅಡ್ಮಿರಲ್‌ ಬಿ. ರಾಧಾಕೃಷ್ಣ ರಾವ್‌ ಸಭೆ ಉದ್ದೇಶಿಸಿ ಮಾತಾಡಿ, ಜಿಎಸ್‌ಬಿ ಸಮಾಜದಿಂದ ಭಾರತ ಮಾತೆಯ ಸೇವೆಗಾಗಿ ಸೇನೆ ಸೇರಿರುವ ಯೋಧರಿದ್ದಾರೆ.ತಮ್ಮ ತ್ಯಾಗ, ಬಲಿದಾನಗಳಿಂದ ಈ ದೇಶವನ್ನು ವೈರಿಗಳಿಂದ ಸದಾ ರಕ್ಷಿಸುತ್ತಿರುವ ಯೋಧರ ಕುಟುಂಬದ ಕ್ಷೇಮಾಭಿವೃದ್ಧಿಯ ದೃಷ್ಟಿಯಿಂದ ಆರ್ಮಿ ವೆಲ್‌ಫೇರ್‌ ಫಂಡ್‌ಗೆ ಜಿಎಸ್‌ಬಿ ಸಮಾಜದ ಮೂಲಕ ದೇಣಿಗೆಯನ್ನು ನೀಡಲು ಮುಂದಾಗೋಣ. ಅದನ್ನು ಜಿಎಸ್‌ಬಿ ವಿಶ್ವ ಸಮ್ಮೇಳನ ನಡೆಯಲಿರುವ ಡಿ. 25ರಂದು ಹಸ್ತಾಂತರಿಸೋಣ ಎಂದರು.

ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಸಂಚಾಲಕ ಆರ್‌. ವಿವೇಕಾನಂದ ಶೆಣೈ ಸಮಾಜದ 10,000 ಮಂದಿ ತಲಾ 365 ರೂ. ಗಳಂತೆ 36.5 ಲಕ್ಷ ರೂ.ಗಳನ್ನು ಹೆಮ್ಮೆಯ ಈ ಉದ್ದೇಶಕ್ಕಾಗಿ ನೀಡಲಿರುವರು ಎಂದರು.

ನಿವೇಶನ ದೇಣಿಗೆ: ಪಾಂಗಾಳ ನಾಯಕ್‌ ಕುಟುಂಬವನ್ನು ಪ್ರತಿನಿಧಿ ಸಿದ ಹನುಮಾನ್‌ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಪಾಂಗಾಳ ವಿಲಾಸ್‌ ನಾಯಕ್‌ ಮಾತನಾಡಿ, ತನ್ನ ಮುತ್ತಜ್ಜ ದಿ| ಯು.ಎಸ್‌. ನಾಯಕ್‌ ಅವರು ಮೈಸೂರು ರಾಜ್ಯದಲ್ಲಿ ಶಾಸಕರಾಗಿದ್ದ ವೇಳೆ ತಮ್ಮ ಮನೆ ಅಡವಿಟ್ಟು ಒಗ್ಗೂಡಿಸಿದ್ದ 1.05 ಲಕ್ಷ ರೂ. ಗಳನ್ನು ಉಡುಪಿ ಅಜ್ಜರಕಾಡು ಆಸ್ಪತ್ರೆ ನಿರ್ಮಿಸಲು ದೇಣಿಗೆಯಾಗಿ ನೀಡಿದ್ದರೂ ಇಂದು ಅವರ ಹೆಸರನ್ನು ನಾವಾರೂ ಅಲ್ಲಿ ಕಾಣುತ್ತಿಲ್ಲ. ಅವರ ಹೆಸರನ್ನು ಶಾಶ್ವತವಾಗಿಸಲು ಮಣಿಪಾಲದಲ್ಲಿ ತಾನು 20 ಸೆಂಟ್ಸ್‌ ಜಾಗವನ್ನು ವಿಶ್ವ ಜಿಎಸ್‌ಬಿ ಭವನ ನಿರ್ಮಾಣಕ್ಕೆ ದಾನವಾಗಿ ನೀಡುವೆನು ಎಂದು ಘೋಷಿಸಿದರು. ಇದಕ್ಕೆ ದನಿಗೂಡಿಸಿದ ಬೆಂಗಳೂರಿನ ಉದ್ಯಮಿ ರವೀಂದ್ರ ನಾಯಕ್‌ ಈ ಭವನದ ಸಂಪೂರ್ಣ ವಿದ್ಯುದೀಕರಣದ ಹೊಣೆಯನ್ನು ತಾನು ಹೊರುವುದಾಗಿ ಹೇಳಿದರು.

ವಿವಿಧ ಗಣ್ಯರು ವಿಶ್ವ ಜಿಎಸ್‌ಬಿ ಸಮ್ಮೇಳನಕ್ಕಾಗಿ ತಮ್ಮ ದೇಣಿಗೆಗಳನ್ನು ಘೋಷಿಸಿದರು. ವೇದಿಕೆಯಲ್ಲಿ ವಿಶ್ವ ಜಿಎಸ್‌ಬಿ ಸಮ್ಮೇಳನ ಸಮಿತಿಯ ನಂದಗೋಪಾಲ್‌ ಶೆಣೈ, ಪ್ರದೀಪ್‌ ಜಿ. ಪೈ, ಎಸ್‌.ಎಸ್‌. ನಾಯಕ್‌, ವೆಂಕಟೇಶ್‌ ಬಾಳಿಗಾ, ಬದ್ರಿನಾಥ್‌ ಕಾಮತ್‌, ಉಲ್ಲಾಸ್‌ ಗಡಿಯಾರ್‌ ಹೆಜಮಾಡಿ, ಹಾಲಾಡಿ ಲಕ್ಷ್ಮೀದೇವಿ ಕಾಮತ್‌, ಪಿ. ಸುರೇಶ್‌ ಶೆಣೈ ಮಂಗಳೂರು, ಗಿರಿರಾಜ್‌ ಭಂಡಾರ್ಕರ್‌, ರಘುವೀರ್‌ ಶೆಣೈ ನಂದ್ಯಾಲ್‌, ಮಹೇಶ್‌ ಕಾಮತ್‌ ಮೈಸೂರು, ಗಣೇಶ್‌ ಕಾಮತ್‌, ವಸಂತಿ ಆರ್‌. ನಾಯಕ್‌ ಹಾಗೂ ಜಿಎಸ್‌ಬಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಜಿ. ಸತೀಶ್‌ ಹೆಗ್ಡೆ, ಸಾಣೂರು ನರಸಿಂಹ ಕಾಮತ್‌ ಉಪಸ್ಥಿತರಿದ್ದರು.

No Comments

Leave A Comment