Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ಕಾಶ್ಮೀರದಲ್ಲಿ ಪಾಕ್ ದಾಳಿ: ಓರ್ವ ಯೋಧ ಹುತಾತ್ಮ

kashmir-indian-army-4ಜಮ್ಮು: ಕಾಶ್ಮೀರದ ಕೃಷ್ಣ ಘಟಿ ಸೆಕ್ಟರ್ ನಲ್ಲಿ ಪಾಕಿಸ್ತಾನ ನಡೆಸಿರುವ ಅಪ್ರಚೋದಿತ ಶೆಲ್ ದಾಳಿಗೆ ಓರ್ವ ಭಾರತೀಯ ಯೋಧ ಹುತಾತ್ಮನಾಗಿದ್ದಾನೆ.

22 ಸಿಖ್ ರೆಜಿಮೆಂಟ್ ನ ಗುರ್ ಸೇವಕ್ ಸಿಂಗ್ ನ.6 ರಂದು ಹುತಾತ್ಮನಾಗಿರುವ ಯೋಧನಾಗಿದ್ದಾರೆ ಎಂದು ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಕನಿಷ್ಟ 4 ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು ಪಾಕಿಸ್ತಾನ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ ವಿರುದ್ಧ ದಾಳಿ ನಡೆಸುತ್ತಿದ್ದು, ಶೆಲ್ ದಾಳಿ ಮುಂದುವರೆದಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಬೆಳಿಗ್ಗೆ 8:40 ರ ವೇಳೆಗೆ  ಪಾಕಿಸ್ತಾನ ದಾಳಿ ನಡೆಸಲು ಪ್ರಾರಂಭಿಸಿದ್ದು, ಕಾಶ್ಮೀರದ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಶೆಲ್ ದಾಳಿ ನಡೆಸುತ್ತಿದೆ. ಪಾಕ್ ಸೇನೆಯ ಅಪ್ರಚೋದಿತ ದಾಳಿಯನ್ನು ಭಾರತೀಯ ಸೇನೆ ಸಮರ್ಥವಾಗಿ ಎದುರಿಸಿದ್ದು, ಶೆಲ್ ಹಾಗೂ ಗುಂಡಿನ ದಾಳಿ ಮೂಲಕ ಪ್ರತ್ಯುತ್ತರ ನೀಡುತ್ತಿದೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

No Comments

Leave A Comment