Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಸಂಹಿತೆ ಪಾಲಿಸಿ: ಸುದ್ದಿವಾಹಿನಿಗೆ ಆಯುಕ್ತ ಮೇಘರಿಕ್‌ ಮನವಿ

ns-meghaಬೆಂಗಳೂರು: ಆರೆಸ್ಸೆಸ್‌ ಕಾರ್ಯಕರ್ತ ರುದ್ರೇಶ್‌ ಹತ್ಯೆ ಪ್ರಕರಣ ಹಾಗೂ ಟಿಪ್ಪು ಸುಲ್ತಾನ್‌ ಜಯಂತಿ ಆಚರಣೆಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಸಾರ ಮಾಡುವಾಗ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳನ್ನು ಪಾಲಿಸಬೇಕು ಎಂದು ನಗರ ಪೊಲೀಸ್‌ ಆಯುಕ್ತ ಎನ್‌.ಎಸ್‌. ಮೇಘರಿಕ್‌, ಸುದ್ದಿ ವಾಹಿನಿಗಳಿಗೆ ಮನವಿ ಮಾಡಿದ್ದಾರೆ.

ಈ ಎರಡೂ ವಿಷಯಗಳು ತುಂಬಾ ಸೂಕ್ಷ್ಮವಾದವುಗಳಾಗಿವೆ. ಈ ವಿಷಯಗಳ ಬಗ್ಗೆ ಪ್ರಚೋದನಕಾರಿಯಾದ ವರದಿ ಮತ್ತು ಕಾರ್ಯಕ್ರಮಗಳು ಶಾಂತಿ ಕದಡುವ ಹಾಗೂ ಕೋಮುಗಳ ನಡುವೆ ವೈಮನಸ್ಸು ಉಂಟುಮಾಡುವ ಸಾಧ್ಯತೆಗಳಿವೆ. ಅದು ಮುಂದೆ ಕಾನೂನು ಮತ್ತು ಸುವ್ಯವಸ್ಥೆಯ ಧಕ್ಕೆಗೆ ಕಾರಣವಾಗಬಹುದು.

ಈ ಹಿನ್ನೆಲೆಯಲ್ಲಿ ಎರಡೂ ವಿಷಯಗಳ ಕುರಿತು ಸುದ್ದಿ ಪ್ರಸಾರ ಮಾಡುವಾಗ “ಕೇಬಲ್‌ ಟೆಲಿವಿಜನ್‌ ನೆಟ್‌ವರ್ಕ್‌ (ರೆಗ್ಯುಲೇಷನ್‌) 1995′ ಅಡಿ ಕಾರ್ಯಕ್ರಮ ಮತ್ತು ಜಾಹೀರಾತು ಸಂಹಿತೆಗಳನ್ನು ಪಾಲಿಸಬೇಕು. ಈ ನಿಯಮ ಉಲ್ಲಂ ಸಿದರೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಎಚ್ಚರಿಸಿದ್ದಾರೆ.

ರುದ್ರೇಶ್‌ ಹತ್ಯೆ ಪ್ರಕರಣ ಹಾಗೂ ನವೆಂಬರ್‌ 10ರಂದು ನಡೆಯಲಿರುವ ಟಿಪ್ಪು ಜಯಂತಿ ಆಚರಣೆ ಕುರಿತು ಸುದ್ದಿ ಅಥವಾ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಾಗ ಹಾಗೂ ಆ ವರದಿಗಳಿಗೆ ಸಂಬಂಧಿಸಿದ ಪದಗಳನ್ನು ಬಳಸುವಾಗ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

No Comments

Leave A Comment