Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಸಾಂಪ್ರದಾಯಿಕ ಕಂಬಳಕ್ಕೂ ಹೈಕೋರ್ಟ್‌ ಅನುಮತಿ

kambala-650ಉಡುಪಿ: ಜೋಡುಕರೆ ಕಂಬಳದ ಬಳಿಕ ಸಂಪ್ರದಾಯಬದ್ಧ ಕಂಬಳ ನಡೆಸುವುದಕ್ಕೂ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ. ಜಿಲ್ಲಾ ಸಂಪ್ರದಾಯಬದ್ಧ ಕಂಬಳ ಸಮಿತಿಯವರು ಜನಪದ ಕ್ರೀಡೆಯಾದ ಕಂಬಳ ನಡೆಸಲು ಜಿಲ್ಲಾಧಿಕಾರಿ ಅವರಿಗೆ ಅವಕಾಶ ನೀಡುವಂತೆ ಮಾಡಿದ ಮನವಿಗೆ ಅವಕಾಶ ನಿರಾಕರಿಸಿರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಸಲ್ಲಿಸಿದ ರಿಟ್‌ ಅರ್ಜಿ ಕುರಿತ ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ  ಬೋಪಣ್ಣ ಅವರು 2015ರ ಡಿಸೆಂಬರ್‌ 17ರಂದು ಸರಕಾರದ ಆದೇಶದಂತೆ ಸಂಪ್ರದಾಯಬದ್ಧ ಕಂಬಳ ನಡೆಸಲು ಆದೇಶ ನೀಡಿದರು.

ಜಿಲ್ಲಾಡಳಿತದ ಆದೇಶವನ್ನು ಮಾಜಿ ಸಚಿವ ಕೆ. ಜಯಪ್ರಕಾಶ್‌ ಹೆಗ್ಡೆ ಅವರ ಮಾರ್ಗದರ್ಶನದಂತೆ ಸಂಪ್ರದಾಯಬದ್ಧ ಕಂಬಳ ಸಮಿತಿ ಪ್ರಧಾನ ಕಾರ್ಯದರ್ಶಿ ಚೇರ್ಕಾಡಿ ಅಶೋಕ ಕುಮಾರ್‌ ಹೆಗ್ಡೆ (ಮಾಡ) ಪ್ರಶ್ನಿಸಿ ರಿಟ್‌ ಅರ್ಜಿ ಸಲ್ಲಿಸಿದ್ದರು. ನ್ಯಾಯವಾದಿ ಶಶಿಕಿರಣ್‌ ಶೆಟ್ಟಿ ವಾದಿಸಿದರು. ನ್ಯಾಯಾಲಯದ ತೀರ್ಪಿಗೆ ಸಮಿತಿ ಅಧ್ಯಕ್ಷ ಹೆರಂಜೆ ಸುಧಾಕರ ಹೆಗ್ಡೆ, ಜಿಲ್ಲಾ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಬಾರಕೂರು ಶಾಂತರಾಮ ಶೆಟ್ಟಿ, ಪದಾಧಿಕಾರಿಗಳಾದ ಮಡಾಮಕ್ಕಿ ಶಶಿಧರ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಪೃಥ್ವಿರಾಜ್‌ ಶೆಟ್ಟಿ, ಜೋಡುಕರೆ ಕಂಬಳ ಸಮಿತಿ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲೆಯಲ್ಲಿಯೂ ಕಂಬಳ ನಡೆಸಲು ಹೈಕೋರ್ಟ್‌ ಅಸ್ತು
ಮಂಗಳೂರು:
ಕಂಬಳ ಕ್ರೀಡೆ ನಿಷೇಧಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದ್ದು, ಇದರೊಂದಿಗೆ ಕರಾವಳಿ ಪ್ರದೇಶದಲ್ಲಿ ಕಂಬಳ ನಡೆಸಲು ಹಾದಿ ಸುಗಮವಾಗಿದೆ. ಉಡುಪಿ ಜಿಲ್ಲಾಧಿಕಾರಿ ಕಂಬಳ ನಿಷೇಧಿಸಿ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ಈ ಹಿಂದೆಯೇ ತಡೆಯಾಜ್ಞೆ ನೀಡಿತ್ತು. ಕಂಬಳ ನಡೆಸಲು ಅನುಮತಿ ನಿರಾಕರಿಧಿಸಿದ್ದ ದ.ಕ. ಜಿಲ್ಲಾಧಿಕಾರಿ ಕ್ರಮವನ್ನು ಪ್ರಶ್ನಿಸಿ ಜಿಲ್ಲಾ ಕಂಬಳ ಸಮಿತಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು.

No Comments

Leave A Comment