Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಭೀಕರ ವಾಯುಮಾಲಿನ್ಯ: ದಿಲ್ಲಿ ಶಾಲೆಗಳಿಗೆ ರಜೆ

delhi-airಹೊಸದಿಲ್ಲಿ: ದಿಲ್ಲಿಯಲ್ಲಿ 17 ವರ್ಷಗಳಲ್ಲೇ ಭೀಕರವಾದ ವಾಯುಮಾಲಿನ್ಯ ಕಾಣಿಸಿಕೊಂಡಿದ್ದು, ರಾಷ್ಟ್ರ ರಾಜಧಾನಿಯ 3 ಮಹಾನಗರ ಪಾಲಿಕೆಗಳು ನಡೆಸುತ್ತಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

ದಿಲ್ಲಿಯ ನೆರೆಹೊರೆಯ ರಾಜ್ಯಗಳಾದ ಪಂಜಾಬ್‌, ಹರ್ಯಾಣ ಹಾಗೂ ರಾಜಸ್ಥಾನದಲ್ಲಿ ಫ‌ಸಲು ಕಟಾವು ಮಾಡಿದ ರೈತರು ಜಮೀನಿನಲ್ಲಿ ಉಳಿದ ಕಸಕ್ಕೆ ಬೆಂಕಿ ಹಾಕುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಹೊಗೆ ಎದ್ದಿದೆ. ಜತೆಗೆ ದಿಲ್ಲಿಯಲ್ಲಿ ವಾಹನಗಳು ಉಗುಳುವ ಹೊಗೆ, ಧೂಳು, ಕೈಗಾರಿಕಾ ಮಾಲಿನ್ಯದೊಂದಿಗೆ ಪಟಾಕಿಯ ಹೊಗೆಯೂ ಸೇರಿಕೊಂಡು ಮಾಲಿನ್ಯ ವಿಪರೀತ ಮಟ್ಟಕ್ಕೆ ಹೋಗಿದೆ.

ಬೆಳಗ್ಗೆ ಹೊತ್ತು ಮಲಿನ ಗಾಳಿ ಹಾಗೂ ಮಂಜಿನ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ, ಉತ್ತರ ಹಾಗೂ ಪೂರ್ವ ದಿಲ್ಲಿ ಮಹಾನಗರಪಾಲಿಕೆಗಳು ತಾವು ನಡೆಸುತ್ತಿರುವ ಶಾಲೆಗಳಿಗೆ ರಜೆ ಘೋಷಿಸಿವೆ. ಈ ಶಾಲೆಗಳಲ್ಲಿ 10 ಲಕ್ಷ ಮಂದಿ ವ್ಯಾಸಂಗ ಮಾಡುತ್ತಿದ್ದಾರೆ.

ಹಸಿರು ನ್ಯಾಯಾಧಿಕರಣ ತರಾಟೆ: ಮಾಲಿನ್ಯ ಮಿತಿಮೀರಿದ್ದರೂ ಸರಕಾರಗಳು ಸುಮ್ಮನಿರುವ ಹಿನ್ನೆಲೆಯಲ್ಲಿ ಹಸಿರು ನ್ಯಾಯಾಧಿಕರಣ ಕಿಡಿಕಾರಿದೆ. ಸರಕಾರಗಳಿಗೆ ದಿಲ್ಲಿ ಬಗ್ಗೆ ಚಿಂತೆ ಇಲ್ಲದಿರಬಹುದು. ಆದರೆ ನಮಗಿದೆ.

ನಮ್ಮಿಂದ ಏನು ಆಗುತ್ತದೋ ಅದನ್ನು ನಾವು ಮಾಡಿಯೇ ಮಾಡುತ್ತೇವೆ ಎಂದು ನ್ಯಾಯಾಧಿಕರಣದ ಮುಖ್ಯಸ್ಥ ಸ್ವತಂತ್ರ ಕುಮಾರ್‌ ತಿಳಿಸಿದ್ದಾರೆ. ಜೊತೆಗೆ ವಾಯುಮಾಲಿನ್ಯಕ್ಕೆ ನೆರೆಯ ರಾಜ್ಯಗಳಲ್ಲಿ ರೈತರು ಕಸಕ್ಕೆ ಹಾಕಿರುವ ಬೆಂಕಿ ಕಾರಣ ಎಂಬ ವಾದವನ್ನೂ ನ್ಯಾಯಾಧಿಕರಣ ತಳ್ಳಿಹಾಕಿದೆ.

No Comments

Leave A Comment