Log In
BREAKING NEWS >
ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ಶಿರೂರು ಶ್ರೀನಾಮಪತ್ರ ಸಲ್ಲಿಕೆ.....ಏಪ್ರಿಲ್ 22ರ೦ದು ಉಡುಪಿಯ ಕಲ್ಸ೦ಕದ ರಾಯಲ್ ಗಾರ್ಡನ್ ನಲ್ಲಿ ಬೃಹತ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶ-23ರ೦ದು ಪ್ರಮೋದ್ ಮಧ್ವರಾಜ್ ನಾಮಪತ್ರಸಲ್ಲಿಕೆ...

ಜಮ್ಮು ಕಾಶ್ಮೀರ ಪೊಲೀಸರಿಂದ ಎಲ್‌ಇಟಿ ಉಗ್ರ ಉಮರ್‌ ಖಾಲಿಕ್‌ ಸೆರೆ

kashmir-police1-700ಶ್ರೀನಗರ : ಅತ್ಯಂತ ಮಹತ್ವದ ವಿದ್ಯಮಾನವೊಂದರಲ್ಲಿ ಲಷ್ಕರ್‌ ಎ ತಯ್ಯಬ ಸಂಘಟನೆಯ ಉಗ್ರ ಉಮರ್‌ ಖಾಲಿಕ್‌ನನ್ನು ಜಮ್ಮು ಕಾಶ್ಮೀರ ಪೊಲೀಸರು ಇಂದು ಶುಕ್ರವಾರ ಸೋಪೋರ್‌ನಲ್ಲಿ  ಬಂಧಿಸಿದ್ದಾರೆ.

ಪಾಕ್‌ ಸೇನೆ ಗಡಿ ನಿಯಂತ್ರಣ ರೇಖೆ ಹಾಗೂ ಅಂತಾರಾಷ್ಟ್ರೀಯ ಗಡಿಯಲ್ಲಿ ನಿರಂತರ ಕದನ ವಿರಾಮ ಉಲ್ಲಂಘನೆ ಮಾಡುತ್ತಾ ಭಾರತೀಯ ಸೈನಿಕರ ಠಾಣೆಗಳ ಮೇಲೆ ಗುಂಡಿನ ಹಾಗೂ ಮಾರ್ಟರ್‌ ದಾಳಿಯನ್ನು ನಡೆಸುತ್ತಿರುವ ಈ ಸಂದರ್ಭದಲ್ಲೇ ಲಷ್ಕರ್‌ ಉಮರ್‌ ಖಾಲಿಕ್‌ ಸೆರೆಯಾಗಿದ್ದಾನೆ. ಈತನನ್ನು ಸೆರೆ ಹಿಡಿಯಲಾಗಿರುವುದು ಭದ್ರತಾ ಪಡೆಗಳಿಗೆ ಸಿಕ್ಕಿರುವ ಮಹತ್ತರ ಯಶಸ್ಸೆಂದು ತಿಳಿಯಲಾಗಿದೆ.

ಕಳೆದ ಸೆ.28-29ರ ರಾತ್ರಿ ಭಾರತದ ವಿಶೇಷ ಸೇನಾ ಪಡೆ ಸಿಬಂದಿಗಳು ಪಾಕ್‌ ಗಡಿಯೊಳಗೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ಕೈಗೊಂಡು ಎಲ್‌ಇಟಿ ಉಗ್ರರ ಹಲವಾರು ಶಿಬಿರಗಳನ್ನು ನಾಶಪಡಿಸಿತ್ತು. ಇದನ್ನು ಅನುಸರಿಸಿ ಪಾಕ್‌ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ ತೀವ್ರವಾಗಿದೆ. ಪಾಕ್‌ ಉಗ್ರರು ಕಳೆದ ಸೆ.18ರಂದು ಜಮ್ಮು ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 19 ಭಾರತೀಯ ಯೋಧರನ್ನು ಹತ್ಯೆಗೈದಿದ್ದರು. ಇದಕ್ಕೆ ಉತ್ತರವಾಗಿ ಭಾರತೀಯ ಸೇನಾ ಪಡೆ ಪಿಓಕೆಯಲ್ಲಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿತ್ತು.

No Comments

Leave A Comment