Log In
BREAKING NEWS >
ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ರುದ್ರೇಶ್ ಹತ್ಯೆ ಹಿಂದೆ ಕಾಂಗ್ರೆಸ್ ಸಚಿವ, ಯಾರವರು, ಶೋಭಾ ಆರೋಪವೇನು?

shobha-karಬೆಂಗಳೂರು: ಆರ್ ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಗೆ ಕಾಂಗ್ರೆಸ್ ಮುಖಂಡ, ಸಚಿವ ರೋಷನ್ ಬೇಗ್ ಕೈವಾಡ ಇದ್ದಿದ್ದು, ಬೇಗ್ ಅವರು ಸುಫಾರಿ ಕೊಟ್ಟು ರುದ್ರೇಶ್ ಅವರ ಹತ್ಯೆ ಮಾಡಿಸಿರುವುದಾಗಿ ಬಿಜೆಪಿ ಸಂಸದೆ, ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಗಂಭೀರವಾಗಿ ಆರೋಪಿಸಿದ್ದಾರೆ.

ಟಿವಿ9 ಜೊತೆ ಮಾತನಾಡಿದ ಕರಂದ್ಲಾಜೆ ಅವರು, ಶಿವಾಜಿನಗರದಲ್ಲಿ ರುದ್ರೇಶ್ ಬೆಳವಣಿಗೆ ಸಹಿಸದೇ ಈ ಕೊಲೆ ಕೃತ್ಯ ಎಸಗಲಾಗಿದೆ ಎಂದು ದೂರಿದ್ದಾರೆ. ಕರ್ನಾಟಕದ ಪೊಲೀಸರಿಂದ ರುದ್ರೇಶ್ ಹತ್ಯೆ ತನಿಖೆ ಬೇಡ ಎಂದು ಹೇಳಿದರು. ರುದ್ರೇಶ್ ಹತ್ಯೆ ಹಿಂದೆ ಸಚಿವರ ಕೈವಾಡ ಇರುವ ಬಗ್ಗೆ ಶಿವಾಜಿನಗರದ ಜನತೆ, ಅಧಿಕಾರಿಗಳು ಚರ್ಚಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಚಿವ ರೋಷನ್ ಬೇಗ್ ಅವರೇ ನೇರವಾಗಿ ಶಾಮೀಲಾಗಿದ್ದಾರೆ. ಈ ಬಗ್ಗೆ ಹಲವು ಅಧಿಕಾರಿಗಳಿಗೆ ಗುಮಾನಿ ಇದೆ. ಹಾಗಾಗಿ ರೋಷನ್ ಬೇಗ್ ಕೈವಾಡದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ಸಿಗರು ಸುಪಾರಿ ನೀಡಿ ರುದ್ರೇಶ್ ಕೊಲೆ ಮಾಡಿಸಿದ್ದಾರೆ. ಕೂಡಲೇ ರೋಷನ್ ಬೇಗ್ ಅವರನ್ನು ತನಿಖೆಗೊಳಪಡಿಸಬೇಕು ಎಂದು ಶೋಭಾ ಒತ್ತಾಯಿಸಿದ್ದಾರೆ.

No Comments

Leave A Comment