Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕೆಜಿ ಬೇಸಿನ್‌ ವಿವಾದ: ಅಂಬಾನಿ ರಿಲಯನ್ಸ್‌ಗೆ 1.55 ಬಿಲಿಯ ಡಾ. ದಂಡ

reliance-700ಹೊಸದಿಲ್ಲಿ : ಸರಕಾರಿ ಒಡೆತನದ ಸಂಸ್ಥೆಯಾಗಿರುವ ಓಎನ್‌ಜಿಸಿಗೆ ಸೇರಿದ ನೈಸರ್ಗಿಕ ಅನಿಲವನ್ನು ವಾಣಿಜ್ಯ ಉದ್ದೇಶಕ್ಕೆ ಎತ್ತಿಕೊಂಡ ಖಾಸಗಿ ಸಂಸ್ಥೆ, ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ಗೆ ಸರಕಾರ 1.55 ಶತಕೋಟಿ ಡಾಲರ್‌ಗಳ ದಂಡವನ್ನು ಹೇರಿ ನೊಟೀಸ್‌ ಜಾರಿ ಮಾಡಿದೆ.

ಪೆಟ್ರೋಲಿಯಂ ಸಚಿವಾಲಯವು ಇಂದು ಶುಕ್ರವಾರ ಬೆಳಗ್ಗೆ ಅಂಬಾನಿ ಸಂಸ್ಥೆಯಾಗಿರುವ ರಿಲಯನ್ಸ್‌ಗೆ ಈ ಬೃಹತ್‌ ಮೊತ್ತದ ದಂಡ ಹೇರುವ ನೊಟೀಸನ್ನು ಜಾರಿ ಮಾಡಿತೆಂದು ಫೈನಾನ್ಶಿಯಲ್‌ ಎಕ್ಸ್‌ಪ್ರೆಸ್‌ ಮೂಲಗಳು ತಿಳಿಸಿವೆ.

ಬಂಗಾಲ ಕೊಲ್ಲಿಯಲ್ಲಿನ ಕೃಷ್ಣಾ – ಗೋದಾವರಿ ಡಿ6 98/2 ಬ್ಲಾಕ್‌ನಿಂದ 2009ರ ಎಪ್ರಿಲ್‌ 1ರಿಂದ 2015ರ ಮಾರ್ಚ್‌ 31ರ ವರೆಗಿನ ಅವಧಿಯಲ್ಲಿ ರಿಲಯನ್ಸ್‌ ಸಂಸ್ಥೆಯು ಸರಕಾರಿ ಒಡೆತನದ ಓಎನ್‌ಜಿಸಿಗೆ ಸೇರಿದ 11.122 ಬಿಲಿಯ ಕ್ಯುಬಿಕ್‌ ಮೀಟರ್‌ ನೈಸರ್ಗಿಕ ಅನಿಲವನ್ನು ಎತ್ತಿಕೊಂಡಿರುವುದಾಗಿ ಅಮೆರಿಕದ ಡಿ’ಗಾಯ್ಲರ್‌ ಮತ್ತು ಮಕ್‌ನಾಟನ್‌ (ಡಿ ಆ್ಯಂಡ್‌ ಎಂ) ಕನ್ಸಲ್ಟೆಂಟ್‌ ಸಂಸ್ಥೆಯು 2015ರ ನವೆಂಬರ್‌ನಲ್ಲಿ ನಡೆಸಿದ್ದ ಅಧ್ಯಯನದಲ್ಲಿ ಪತ್ತೆ ಹಚ್ಚಿ ಬಹಿರಂಗಪಡಿಸಿತ್ತು.

ಕಳೆದ ತಿಂಗಳಲ್ಲಿ  ಪೆಟ್ರೋಲಿಯಂ ಸಚಿವಾಲದ ತಾಂತ್ರಿಕ ಅಂಗವಾಗಿರುವ ಡೈರೆಕ್ಟರ್‌ ಜನರಲ್‌ ಆಫ್ ಹೈಡ್ರೋಕಾರ್ಬನ್ಸ್‌ (ಡಿಜಿಎಚ್‌), ರಿಲಯನ್ಸ್‌ ಸಂಸ್ಥೆಗೆ ಈ ಸಂಬಂಧ ದಂಡ ಹೇರುವಂತೆ ಶಿಫಾರಸು ಮಾಡಿತ್ತು.

ಈ ಬೃಹತ್‌ ಮೊತ್ತದ ದಂಡದವನ್ನು ನಿಗದಿಸುವಲ್ಲಿ ಪೆಟ್ರೋಲಿಯಂ ಸಚಿವಾಲಯವು, ಹೂಡಲ್ಪಟ್ಟ ಬಂಡವಾಳ, ಆರ್‌ಐಎಲ್‌ ಭರಿಸಿರುವ ಕಾರ್ಯನಿರ್ವಹಣಾ ವೆಚ್ಚ ವನ್ನು ಪರಿಗಣಿಸಿ ಅದರೊಂದಿಗೆ ಬಡ್ಡಿ ಮೊತ್ತವನ್ನೂ ಸೇರಿಸಿರುವುದಾಗಿ ಎಫ್ಇ ಮೂಲಗಳು ಹೇಳಿವೆ.

ರಿಲಯನ್ಸ್‌ ಕಂಪೆನಿಯಿಂದ ಈ ಸಂಬಂಧ ತತ್‌ಕ್ಷಣದ ಪ್ರತಿಕ್ರಿಯೆ ಬಂದಿಲ್ಲ.

No Comments

Leave A Comment