Log In
BREAKING NEWS >
ಡಿಸೆ೦ಬರ್ 23ರ೦ದು ಕಲ್ಯಾಣಪುರ ಜಿ ಎಸ್ ಬಿ ಸಭಾದ ಆಶ್ರಯದಲ್ಲಿ ದೇವಸ್ಥಾನದ ಬಳಿಯಲ್ಲಿರುವ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪ೦ದ್ಯಾಟವು ಸಮಾಜ ಬಾ೦ಧವರಿಗಾಗಿ ಜರಗಲಿರುವುದಾಗಿ ಪ್ರಕಟಣೆ ತಿಳಿಸಿದೆ

ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿ

mallya-interviewನವದೆಹಲಿ: ಉದ್ಯಮಿ ವಿಜಯ್ ಮಲ್ಯ ಅವರು ವಿದೇಶಿ ವಿನಿಮಯ ನಿಯಂತ್ರ ಕಾಯ್ದೆ (ಫೆರಾ) ಉಲ್ಲಂಘನೆ ಸಂಬಂಧಿಸಿದ ಪ್ರಕರಣದಲ್ಲಿ ಪದೇ ಪದೇ ಸಮನ್ಸ್ ಗಳಿಂದ ತಪ್ಪಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ವೊಂದನ್ನು ಶುಕ್ರವಾರ ಜಾರಿ ಮಾಡಿದೆ.

ವಿಜಯ್ ಮಲ್ಯ ಅವರ ವಿರುದ್ಧ ಸಾಕಷ್ಟು ವಂಚನೆ ಪ್ರಕರಣಗಳಿದ್ದು, ಪ್ರಕರಣ ಸಂಬಂಧ ಮಲ್ಯ ಅವರಿಗೆ ಸಾಕಷ್ಟು ಬಾರಿ ಸಮನ್ಸ್ ನ್ನು ಜಾರಿ ಮಾಡಲಾಗಿದೆ. ಆದರೂ, ಸಮನ್ಸ್ ಗಳಿಂದ ಮಲ್ಯ ಅವರು ತಪ್ಪಿಸಿಕೊಳ್ಳುತ್ತಲೇ ಬಂದಿದ್ದಾರೆ.

ಭಾರತಕ್ಕೆ ಮರಳಿ ಬರುವ ಉದ್ದೇಶ ಮಲ್ಯ ಅವರಿಗೆ ಇಲ್ಲ. ಹೀಗಾಗಿ, ಮಲ್ಯ ವಿರುದ್ಧ ಜಾಮೀನು ರಹಿತ ವಾರಂಟ್ ನ್ನು ಜಾರಿ ಮಾಡುತ್ತಿರುವುದಾಗಿ ನ್ಯಾಯಾಲಯ ಹೇಳಿದೆ.2012ರಲ್ಲೂ ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ವೊಂದು ಜಾರಿಯಾಗಿತ್ತು.

ವಿದೇಶದಲ್ಲಿರುವ ಆಸ್ತಿ ಕುರಿತ ಎಲ್ಲಾ ವಿವರಗಳನ್ನು ನೀಡುವಂತೆ ಮಲ್ಯ ಅವರಿಗೆ ಈ ಹಿಂದೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತ್ತು.

No Comments

Leave A Comment