Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

12 ಬುಡಕಟ್ಟು ಬಾಲಕಿಯರ ಮೇಲೆ ಶಿಕ್ಷಕರಿಂದ ನಿರಂತರ ಅತ್ಯಾಚಾರ: ಮೂವರು ಗರ್ಭಿಣಿಯರು

rapeಬುಲ್‌ದಾಣಾ: 12 ಬುಡಕಟ್ಟು ಅಪ್ರಾಪ್ತ ಬಾಲಕಿಯರ ಮೇಲೆ ಶಾಲಾ ಶಿಕ್ಷಕರೇ ನಿರಂತರವಾಗಿ ಅತ್ಯಾಚಾರ ನಡೆಸಿರುವ ಘಟನೆ ಮಹಾರಾಷ್ಟ್ರದ ಬುಲ್‌ದಾಣಾದಲ್ಲಿ ಬೆಳಕಿಗೆ ಬಂದಿದೆ.

ಬುಡಕಟ್ಟು ಜನಾಂಗದ ಮಕ್ಕಳಿಗಾಗಿರುವ ವಸತಿ ಶಾಲೆ ಹಿವರ್ಖೆಡಾದ ನಿನಬೌ ಪೊಕ್ರೆ ಆಶ್ರಮದ ಶಾಲೆಯಲ್ಲಿ ಶಿಕ್ಷಕರೇ ಬಾಲಕಿಯರ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಿದ್ದು ಇದರಲ್ಲಿ ಮೂವರು ಬಾಲಕಿಯರು ಗರ್ಭಿಣಿಯಾಗಿದ್ದಾರೆ.

ಈ ದುಷ್ಕೃತ್ಯದಲ್ಲಿ ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಭಾಗಿಯಾಗಿದ್ದಾರೆ. ಈ ಸಂಬಂಧ ಏಳು ಶಿಕ್ಷಕರು ಸೇರಿ 11 ಮಂದಿಯನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆದಿದೆ.ದೀಪಾವಳಿ ಹಬ್ಬಕ್ಕೆಂದು ಮೂವರು ಬಾಲಕಿಯರು ಹೋಗಿದ್ದಾರೆ.

ಮನೆಗೆ ಬಂದಿದ್ದ ಮಕ್ಕಳು ಮಂಕಾಗಿರುವುದನ್ನು ಗಮನಿಸಿದ ಪೋಷಕರು ಕಾರಣ ಕೇಳಿದಾಗ, ಹೊಟ್ಟೆ ನೋವು, ಹೊಟ್ಟೆ ಭಾರ ಎನಿಸುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ ಪೋಷಕರು ಮಕ್ಕಳನ್ನು ವೈದ್ಯರಲ್ಲಿಗೆ ಕರೆದುಕೊಂಡು ಹೋದಾಗ ಈ ಮಕ್ಕಳು ಗರ್ಭ ಧರಿಸಿರುವುದಾಗಿ ಗೊತ್ತಾಗಿದೆ. ನಂತರ ಎಲ್ಲ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಘಟನೆ ಬೆಳಕಿಗೆ ಬಂದಿದೆ.

No Comments

Leave A Comment