Log In
BREAKING NEWS >
ಶಿರೂರು ಶ್ರೀಗಳು ಮಠಾಧೀಶರೇ ಅಲ್ಲ, ಸನ್ಯಾಸತ್ವ ತ್ಯಜಿಸಿದ್ದರು: ಪೇಜಾವರ ಶ್ರೀ.....ಮಧ್ವ ಸಂಪ್ರದಾಯದಂತೆ ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಸ್ವಾಮಿಜೀ ಅಂತ್ಯಕ್ರಿಯೆ!

ಹೊಸದಿಲ್ಲಿ : ಯಮುನಾ ಎಕ್ಸ್ ಪ್ರೆಸ್ ವೇನಲ್ಲಿ 20 ವಾಹನಗಳ ಸರಣಿ ಢಿಕ್ಕಿ

yamuna-expressswayಹೊಸದಿಲ್ಲಿ : ದಿಲ್ಲಿ ಸಮೀಪದ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ಇಂದು ಬೆಳಗ್ಗೆ ದಟ್ಟನೆಯ ಮಂಜು ಮುಸುಕಿದ ವಾತಾವರಣದಲ್ಲಿ ಪರಸ್ಪರ ಢಿಕ್ಕಿ ಹೊಡೆದುಕೊಂಡ ಸುಮಾರು 20ಕ್ಕೂ ಹೆಚ್ಚು ಮೋಟಾರು ವಾಹನಗಳು ರಸ್ತೆಯಲ್ಲಿ ರಾಶಿಯಾದ ಘಟನೆ ವರದಿಯಾಗಿದೆ.

ಅನೇಕರು ಗಾಯಗೊಂಡಿರುವ ಈ ಸರಣಿ ಅವಘಡದಲ್ಲಿ ಹಲವಾರು ವಾಹನಗಳು ಪರಸ್ಪರ ಗುದ್ದಿಕೊಂಡು ತೀವ್ರ ಹಾನಿಗೀಡಾಗಿರುವುದು ಕಂಡು ಬಂದಿದೆ.

ದಿಲ್ಲಿಯಲ್ಲಿ ಪ್ರಕೃತ ಭಾರೀ ಪ್ರಮಾಣದ ದಟ್ಟನೆಯ ಮಂಜು, ಧೂಮ ಆಗಸದಲ್ಲಿ ತುಂಬಿಕೊಂಡಿದ್ದು ವಾಯು ಮಾಲಿನ್ಯವು ಪರಾಕಾಷ್ಠೆಯ ಮಟ್ಟವನ್ನು ತಲುಪಿದೆ. ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗುವಷ್ಟು ದೃಕ್‌ ಗೋಚರತೆಯ ಮಟ್ಟ ನಿಕೃಷ್ಟವಾಗಿದೆ.

ಇದಕ್ಕೆ ಈಚಿನ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜನರು ಭಾರೀ ಪ್ರಮಾಣದ ಸುಡುಮದ್ದು ಸುಟ್ಟಿರುವುದು ಪೂರಕವಾಗಿದೆ. ಹಾಗಾಗಿ ಯಮುನಾ ಎಕ್ಸ್‌ಪ್ರೆಸ್‌ ವೇ ತೀವ್ರ ಮಟ್ಟದ ಕಪ್ಪು ಕಂದು ಧೂಮದಿಂದ ಆವೃತ್ತವಾಗಿದ್ದು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ.

ಮೊನ್ನೆ ಸೋಮವಾರವಷ್ಟೇ ದಿಲ್ಲಿ ನೋಯ್ಡಾ ಡೈರೆಕ್ಟ್ ಅಥವಾ ಡಿಎನ್‌ಡಿ ಫ್ಲೈವೇಯಲ್ಲಿ ದಟ್ಟನೆಯ ಮಂಜು, ಧೂಮ ಮುಸುಕಿದ್ದ ಕಾರಣ ಐದು ಕಾರುಗಳು ಪರಸ್ಪರ ಗುದ್ದಿಕೊಂಡಿದ್ದವು. 165 ಕಿ.ಮೀ ಉದ್ದ ಯಮುನಾ ಎಕ್ಸ್‌ಪ್ರೆಸ್‌ ವೇ ದಿಲ್ಲಿ ಸಮೀಪದ ನೋಯ್ಡಾವನ್ನು ಆಗ್ರಾದೊಂದಿಗೆ ಜೋಡಿಸುತ್ತದೆ. ದಟ್ಟನೆಯ ಮಂಜು ಕವಿದಿರುವ ಕಾರಣ ಈ ಎಕ್ಸ್‌ಪ್ರೆಸ್‌ ವೇಯಲ್ಲಿ ಈಚಿನ ದಿನಗಗಳಲ್ಲಿ ನಿರಂತರ ಸಮೂಹ ಅಪಘಾತಗಳು ಸಂಭವಿಸುತ್ತಲೇ ಇವೆ.

ಈ ವರ್ಷ ಜನವರಿಯಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇಯಲ್ಲಿ ದಟ್ಟನೆಯ ಮಂಜಿನ ಕಾರಣ ಸುಮಾರು 50 ಕಾರುಗಳು ಪರಸ್ಪರ ಗುದ್ದಿಕೊಂಡು ಸಂಭವಿಸಿದ್ದ ಸಮೂಹ ಅವಘಡದಲಿ ಓರ್ವ ಮಹಿಳೆ ಮೃತಪಟ್ಟಿದ್ದರು.

No Comments

Leave A Comment