Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಮೈಸೂರಿನಲ್ಲಿ 79 ಕೋಟಿ ರು ಮೌಲ್ಯದ ಬೆಳೆ ನಷ್ಟ: ಜಂಟಿ ಸಮೀಕ್ಷೆ ವರದಿ

mysuru-newಮೈಸೂರು; ರಾಜ್ಯದ ಪರಿಸ್ಥಿತಿ ಅಧ್ಯಯನ ನಡೆಸಲು ಆಗಮಿಸಿರುವ ಕೇಂದ್ರ ಬರ ಅಧ್ಯಯನ ತಂಡ, ಗುರುವಾರ ಮೈಸೂರಿನಲ್ಲಿ ಪರಿಶೀಲನೆ ನಡೆಸಿತು.

ಮಂಡ್ಯ, ಮೈಸೂರು, ಚಾಮರಾಜನಗರ ಹಾಗೂ ಹಾಸನ ಜಿಲ್ಲೆಗಳಲ್ಲಿ ಸತತ 2ನೇ ವರ್ಷವೂ ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಭಾರೀ ಬೆಳೆ ನಷ್ಟ ಅನುಭವಿಸುತ್ತಿವೆ.ಮೈಸೂರು ಜಿಲ್ಲೆ ಶೇ. 44 ರಷ್ಟು ಮಳೆ ಕೊರತೆ ಅನುಭವಿಸುತ್ತಿದ್ದು, 1.18 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆದ ಬೆಳೆ ಮಳೆ ಇಲ್ಲಾದ ಕಾರಣ ನಾಶವಾಗಿದೆ.

ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ ಮೈಸೂರಿನಲ್ಲಿ ಸುಮಾರು 79 ಕೋಟಿ ರೂ ಮೌಲ್ಯದ ಬೆಳೆ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ.ಮೈಸೂರು ಜಿಲ್ಲೆಯಲ್ಲಿ ಸರಾಸರಿ 723.6 ಮಿಮಿ ಮಳೆಯಾಗುತ್ತಿತ್ತು.

ಆದರೆ ಈ ವರ್ಷದ ಅಕ್ಟೋಬರ್ 25 ರವರೆಗೆ ಕೇವಲ 408 ಮಿಮಿ ಮಾತ್ರ ಮಳೆಯಾಗಿದೆ. ರೈತರು ರಾಗಿ, ಜೋಳ, ಧಾನ್ಯ ಮತ್ತು ತಂಬಾಕು ಬೆಳೆ ಕೃಷಿ ಮಾಡಿದ್ದರು, ಆದರೆ ಮಳೆಯಿಲ್ಲದ ಕಾರಣ ಬಿತ್ತಿದ್ದ ಬೆಳೆಯಲ್ಲಾ ನಾಶವಾಗಿದೆ.

No Comments

Leave A Comment