Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕೇರಳ ಸ್ಫೋಟ: ಘಟನಾ ಸ್ಥಳದಲ್ಲಿ ಸಿಕ್ಕ ಪೆನ್‌ಡ್ರೈವ್‌ನಲ್ಲಿ ಪ್ರಧಾನಿ ಮೋದಿ, ರಾಜಕೀಯ ಮುಖಂಡರ ಚಿತ್ರ

modiತಿರುವನಂತಪುರಂ(ಕೇರಳ): ಮಲಪುರಂ ಕೋರ್ಟ್ ಆವರಣದಲ್ಲಿ ಸಂಭವಿಸಿದ ಲಘು ಸ್ಫೋಟ ಸಂಬಂಧ ತನಿಖೆ ನಡೆಸುತ್ತಿರುವ ಕೇರಳ ಪೊಲೀಸರಿಗೆ ಆಘಾತಕಾರಿ ಮಾಹಿತಿಗಳು ಲಭ್ಯವಾಗಿದೆ.

ಹೌದು ರಾಷ್ಟ್ರದಲ್ಲಿ ವಿದ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ಬೃಹತ್ ಪ್ರಮಾಣದಲ್ಲಿ ಸಂಚು ರೂಪಿಸಿದ್ದಾರೆ.

ಅಲ್ಲದೆ ಉಗ್ರರ ಹಿಟ್ ಲಿಸ್ಟ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರ ಇದ್ದಾರೆ ಎಂಬ ಆಘಾತಕಾರಿ ಸುದ್ದಿಯನ್ನು ಪೊಲೀಸರು ತಿಳಿಸಿದ್ದಾರೆ.ಮಲಪುರಂ ಕೋರ್ಟ್ ಸ್ಫೋಟ ಸಂಭವಿಸಿದ ಜಾಗದಲ್ಲಿ ಪೆನ್ ಡ್ರೈವ್ ವೊಂದನ್ನು ವಶಪಡಿಸಿಕೊಂಡಿರುವ ಪೊಲೀಸರು ಆ ಪೆನ್ ಡ್ರೈವ್ ಒಪನ್ ಮಾಡಿದಾಗ ಅದರಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ರಾಜಕೀಯ ಮುಖಂಡರ ಫೋಟೋಗಳು ಕಾಣಸಿಕ್ಕಿವೆ.

ಇನ್ನು ಸ್ಫೋಟವನ್ನು ತಮಿಳುನಾಡು ಮೂಲದ ಉಗ್ರ ಸಂಘಟನೆ ಅಲ್ ಉಮ್ಮಾದ ಕೈವಾಡ ಇರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಮಲಪುರಂ, ಕೊಲ್ಲಂ, ಮೈಸೂರು ಮತ್ತು ಚಿತ್ತೂರ್ ಗಳಲ್ಲಿ ಸಂಭವಿಸಿದ ಸ್ಫೋಟಗಳು ಒಂದೇ ರೀತಿ ಸಂಭವಿಸಿದ್ದು ಈ ಸ್ಫೋಟಗಳನ್ನು ಒಂದೇ ಉಗ್ರ ಸಂಘಟನೆ ಮಾಡಿದೆ ಎಂದು ತ್ರಿಶೂರ್ ಪ್ರಧಾನ ಇನ್ಸ್ ಪೆಕ್ಟರ್ ಎಂಆರ್ ಅಜಿತ್ ಕುಮಾರ್ ತಿಳಿಸಿದ್ದಾರೆ.

ಸ್ಫೋಟ ನಡೆದ ಜಾಗದಲ್ಲಿ ಸಿಕ್ಕ ಪೆನ್ ಡ್ರೈವ್ ಮುಂದೆ ಆಗಬಹುದಾದ ದೊಡ್ಡ ದುರಂತದ ಕುರಿತು ಮಾಹಿತಿ ನೀಡಿದೆ ಎಂದರು.

No Comments

Leave A Comment