Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಉಡುಪಿ ಕ್ಷೇತ್ರ: 12.66 ಕೋಟಿ ರೂ. ಕಾಮಗಾರಿ ಉದ್ಘಾಟನೆ

0211bvr1ಬ್ರಹ್ಮಾವರ: ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ 12.66 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಸಚಿವ ಪ್ರಮೋದ್‌ ಮಧ್ವರಾಜ್‌ ಬುಧವಾರ ಉದ್ಘಾಟಿಸಿದರು.

ಕುಂಜಾಲ-ಹಾಳೆಕಟ್ಟೆ ಅಡಿjàಲು ರಸ್ತೆ ಮತ್ತು ಸೇತುವೆ ಕಾಮಗಾರಿ 305.22 ಲಕ್ಷ ರೂ., ಕೆಂಜೂರು ಕಕ್ಕುಂಜೆಬೈಲು ಧಿಮರಾಠಿ ಕಾಲನಿ ರಸ್ತೆ ಮತ್ತು ಸೇತುವೆ ಕಾಮಗಾರಿ 371.45 ಲಕ್ಷ ರೂ., ಕೊಕ್ಕರ್ಣೆ-ಮದ್ದೂರು ರಸ್ತೆ ಕಾಮಗಾರಿ 262.45 ಲಕ್ಷ ರೂ., ಕೊಕ್ಕರ್ಣೆ ಹೊರ್ಲಾಳಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ 192.45 ಲಕ್ಷ ರೂ., ಆಮ್ರಕಲ್ಲು ನಂಚಾರುನಲ್ಲಿ 143.72 ಲಕ್ಷ ರೂ. ಕಾಮಗಾರಿ ಸೇರಿದಂತೆ ಒಟ್ಟು 12.66 ಕೋಟಿ ರೂ. ವೆಚ್ಚದ ರಸ್ತೆ ಮತ್ತು ಸೇತುವೆ ಕಾಮಗಾರಿಗಳನ್ನು ಸಚಿವರು ಉದ್ಘಾಟಿಸಿದರು.

ಅನಂತರ ಮಾತನಾಡಿದ ಸಚಿವರು, ನಗರಗಳು ಅಭಿವೃದ್ಧಿಯಾದರೆ ಮಾತ್ರ ಅಭಿವೃದ್ಧಿಯಲ್ಲ, ಗ್ರಾಮಗಳೂ ಸಹ ನಗರಗಳಂತೆ ಅಭಿವೃದ್ಧಿಗೊಳ್ಳಬೇಕು. ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ 3ನೇ ಹಂತದ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ 17.62 ಕೋಟಿ ರೂ. ಬಿಡುಗಡೆಯಾಗಿದ್ದು, ಈ ಅನುದಾನದಲ್ಲಿ ರಸ್ತೆ ಮತ್ತು ಸೇತುವೆಗಳನ್ನು ನಿರ್ಮಿಸಲಾಗಿದೆ. 4ನೇ ಹಂತದಲ್ಲಿ 11 ರಸ್ತೆಗಳಿಗಾಗಿ 70.97 ಕಿ. ಮೀ. ರಸ್ತೆ ಮತ್ತು 3 ಸೇತುವೆ ಕಾಮಗಾರಿಗೆ 21 ಕೋಟಿ ರೂ. ಬಿಡುಗಡೆಯಾಗಲಿದ್ದು, 3 ವರ್ಷಗಳ ಅವಧಿಧಿಯಲ್ಲಿ ಇದುವರೆಗೆ 43 ಕೋಟಿ ರೂ. ಗೂ ಹೆಚ್ಚಿನ ಅನುದಾನವನ್ನು ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಲ್ಲಿ ಬಳಸಲಾಗಿದೆ ಎಂದರು.

ಜಿ.ಪಂ. ಸದಸ್ಯ ಮೈರ್ಮಾಡಿ ಸುಧಾಕರ ಶೆಟ್ಟಿ, ತಾ.ಪಂ. ಸದಸ್ಯೆ ಡಾ| ಸುನೀತಾ ಶೆಟ್ಟಿ, ಕೊಕ್ಕರ್ಣೆ ಗ್ರಾ.ಪಂ. ಅಧ್ಯಕ್ಷೆ ಆಶಾಲತಾ, ಉಪಾಧ್ಯಕ್ಷೆ ದೇವಕಿ ಕೋಟ್ಯಾನ್‌, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಅಶೋಕ್‌ ಕುಮಾರ್‌ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ರಾಜೀವ ಶೆಟ್ಟಿ, ಶೋಭಾ, ವಿಜಯಲಕ್ಷಿ  ಕುಮಾರ್‌, ವಸಂತ ನಾಯಕ್‌, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಸತೀಶ್‌, ವಿಜಯಾನಂದ ನಾಯಕ್‌, ತ್ರಿಣೇಶ್ವರ್‌, ದುರ್ಗಾದಾಸ್‌, ಹೇಮಂತ್‌ ಮೊದಲಾದವರು ಉಪಸ್ಥಿತರಿದ್ದರು.ಶಿಕ್ಷಕ ಚಂದ್ರಶೆಟ್ಟಿ ಸ್ವಾಗತಿಸಿದರು.

No Comments

Leave A Comment