Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ. ಗಫ‌ೂರ್‌

mಉಡುಪಿ: ಜಿಲ್ಲೆಯ ಹಿರಿಯ ಕಾಂಗ್ರೆಸ್‌ ಕಾರ್ಯಕರ್ತ, ಮುಂದಾಳು ಎಂ.ಎ. ಗಫ‌ೂರ್‌ ಅವರನ್ನು ಕರ್ನಾಟಕ ಅಲ್ಪಸಂಖ್ಯಾಕರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಸರಕಾರ ನೇಮಿಸಿದೆ.

ಸುಮಾರು 30 ವರ್ಷಗಳಿಂದ ತಳಮಟ್ಟದಿಂದ ಕಾರ್ಯಕರ್ತರಾಗಿರುವ ಗಫ‌ೂರ್‌ 12 ವರ್ಷ ಜಿಲ್ಲಾಧ್ಯಕ್ಷರಾಗಿ, ಮೂರು ಬಾರಿ ಜಿ. ಪಂ. ಸದಸ್ಯರಾಗಿ, ಜಿಲ್ಲಾ ಯುವ ಕಾಂಗ್ರೆಸ್‌, ರಾಷ್ಟ್ರೀಯ ಯುವ ಕಾಂಗ್ರೆಸ್‌ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ಈಗ ಕೆಪಿಸಿಸಿ ಕಾರ್ಯದರ್ಶಿಯಾಗಿ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಹೊಂದಿದ್ದಾರೆ. ಬುಧವಾರವೂ ಅವರು ಶಿವಮೊಗ್ಗ ಜಿಲ್ಲೆಯ ಪ್ರವಾಸದಲ್ಲಿದ್ದರು.

ಎರಡು ಬಾರಿ ವಿಧಾನ ಪರಿಷತ್‌ ಸದಸ್ಯ ಸ್ಥಾನ ಸಿಗುತ್ತದೆ ಎನ್ನುವಾಗ, ಕಾಪು ವಿಧಾನಸಭಾ ಕ್ಷೇತ್ರದ ಟಿಕೆಟ್‌ ಸಿಗಲಿದೆ ಎನ್ನುವಾಗ ಕೊನೆ ಗಳಿಗೆಯಲ್ಲಿ ಕೈತಪ್ಪಿತ್ತು. ಈ ಬಾರಿಯೂ ವಿಧಾನ ಪರಿಷತ್‌ ಸದಸ್ಯರ ಪಟ್ಟಿಯಲ್ಲಿ ಇವರ ಹೆಸರಿತ್ತು. ಕಳೆದ ಅವಧಿಯಲ್ಲಿ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಾಗ ಅದನ್ನು ಬಿಟ್ಟು ಅದೇ ಸಮುದಾಯದವರಿಗೆ ದೊರಕಲಿ ಎಂದು ಅದನ್ನು ಅವರಿಗೇ ಕೊಡಿಸಿದ್ದರು. “ನನಗೆ ಎಲ್ಲ ಸಮಾಜದ ಸೇವೆ ಮಾಡುವ ಆಸೆ ಇದೆ. ಈಗ ಅಲ್ಪಸಂಖ್ಯಾಕರ ನಿಗಮದ ಅಧ್ಯಕ್ಷರಾಗಿ ಕೆಲವೇ ಸಮುದಾಯದ ಸೇವೆ ಮಾಡಬೇಕಾಗುತ್ತದೆ’ ಎಂದು ಗಫ‌ೂರ್‌ ತಿಳಿಸಿದ್ದಾರೆ.

No Comments

Leave A Comment