Log In
BREAKING NEWS >
ಮಾರ್ಚ್ 23 ರಿಂದ ಏಪ್ರಿಲ್ 6 ವರಗೆ SSLC ಪರೀಕ್ಷೆ ನಡೆಯಲಿದೆ. ಪರೀಕ್ಷೆ ದಿನಾ ಬೆಳಿಗ್ಗೆ 9 ರಿಂದ 1:30 ರ ವರೆಗೆ ನಡೆಯಲಿದೆ........ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

ಆಂತರಿಕ ಕಲಹ- ಉತ್ತರ ಪ್ರದೇಶ: ಕಾಂಗ್ರೆಸ್ ಎಸ್‌ಪಿ ಮೈತ್ರಿ ಸನ್ನಿಹಿತ?

Meerut: Samajwadi Party members prepare a model of cycle, party symbol, for UP Chief Minister Akhilesh Yadav's Rath Yatra, in Meerut on Wednesday. The rath yatra with begin on Thursday from Lucknow. PTI Photo  (PTI11_2_2016_000198A)

ನವದೆಹಲಿ:  ಮುಲಾಯಂ ಸಿಂಗ್‌ ಯಾದವ್ ಕುಟುಂಬದ ಆಂತರಿಕ ಕಲಹ ಎಷ್ಟು ಬೇಗ ಶಮನವಾಗುತ್ತದೆ ಎನ್ನುವುದರ ಮೇಲೆ ಕಾಂಗ್ರೆಸ್ ಹಾಗೂ ಎಸ್‌ಪಿ ನಡುವಣ ಮೈತ್ರಿ ಸಾಧ್ಯವಾಗಲಿದೆಯೇ ಎಂಬುದು ನಿರ್ಧಾರವಾಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಚುನಾವಣಾ ತಂತ್ರಚತುರ ಪ್ರಶಾಂತ್ ಕಿಶೋರ್ ಅವರು  ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರನ್ನು ಭೇಟಿಯಾದ ಮರುದಿನ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವು ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರಗಳನ್ನು ನೀಡಲು ಸಿದ್ಧವಿದೆ ಎನ್ನುವುದನ್ನು ಪಕ್ಷ ತಿಳಿಯಬಯಸುತ್ತದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.

ಕಿಶೋರ್ ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾದ ‘ಏಕಾಂಗಿ ಸ್ಪರ್ಧೆ’ ನಿರ್ಧಾರವನ್ನು ಒಪ್ಪದ ನಾಯಕರು, ಇದಕ್ಕೆ ಪಕ್ಷದ ವರಿಷ್ಠರ ಅನುಮೋದನೆ ಇಲ್ಲ ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ 27 ವರ್ಷಗಳಿಂದ ಅಧಿಕಾರದಿಂದ ದೂರವುಳಿದಿರುವ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಶೀಲಾ ದೀಕ್ಷಿತ್ ಅವರನ್ನು ಘೋಷಿಸಿರುವುದು ಹಾಗೂ ರಾಹುಲ್ ಗಾಂಧಿ ಅವರು ಕೈಗೊಂಡ ಯಾತ್ರೆಗಳು ನಿರೀಕ್ಷಿತ ಲಾಭ ತಂದುಕೊಡುವ ಸಾಧ್ಯತೆಯಿಲ್ಲ ಎಂಬುದನ್ನು ಪಕ್ಷ ಅರ್ಥಮಾಡಿಕೊಂಡಿದೆ.

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತ ಸೇನೆ ಕೈಗೊಂಡ ನಿರ್ದಿಷ್ಟ ದಾಳಿ ಹಾಗೂ ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಅದರ ಗರಿಮೆಯನ್ನು ತಾನು ಪಡೆದುಕೊಂಡಿದ್ದು   ಉತ್ತರಪ್ರದೇಶ ರಾಜ್ಯದ ಚುನಾವಣೆಯ ಮನಸ್ಥಿತಿಯನ್ನು ಬದಲಿಸಿದೆ ಎಂಬ ಅಭಿಪ್ರಾಯ ಪ್ರಿಯಾಂಕಾ ವಾದ್ರಾ ಅವರು ಭಾಗಿಯಾಗಿದ್ದ ಕಾರ್ಯತಂತ್ರ ಸಭೆಯಲ್ಲಿ ವ್ಯಕ್ತವಾಗಿತ್ತು.

ಕಾಂಗ್ರೆಸ್ ಶಾಸಕರ ಜತೆ ರಾಹುಲ್ ಗಾಂಧಿ ನಡೆಸಿದ್ದ ಸಭೆಯಲ್ಲಿ ಕೂಡಾ ಅಖಿಲೇಶ್ ನೇತೃತ್ವದ ಸಮಾಜವಾದಿ ಪಕ್ಷದ ಜತೆ ಮೈತ್ರಿಗೆ ಒಲವು ವ್ಯಕ್ತವಾಗಿತ್ತು.

ರಾಹುಲ್ ಹಾಗೂ ಅಖಿಲೇಶ್ ನಡುವಣ ವೈಯಕ್ತಿಕ ಸಂಬಂಧ ಕೂಡಾ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯ. ಅಖಿಲೇಶ್ ಜತೆ ಮೈತ್ರಿ ಬೆಳೆಸಲು ಮುಕ್ತವಾಗಿರುವ ಸೂಚನೆಯನ್ನು ಕಾಂಗ್ರೆಸ್ ಮುಖಂಡರು ನೀಡಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂಸಿಂಗ್ ಅವರು ಉತ್ತರಪ್ರದೇಶದಲ್ಲೂ ಮಹಾಮೈತ್ರಿಕೂಟ ರಚಿಸುವ ಸಾಧ್ಯತೆ ಇದೆ.

ಸಮಾಜವಾದಿ ಪಕ್ಷದ ಆಂತರಿಕ ಕಲಹಗಳನ್ನು ಗಮನಿಸಿದರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಹಾಗೂ ಬಿಎಸ್‌ಪಿ ನಡುವೆ ಮುಖ್ಯ ಸ್ಪರ್ಧೆ ನಡೆಯಲಿದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

No Comments

Leave A Comment