Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಬೆಂಗಳೂರಿನ ಪ್ರೇಮಿಗಳು ಹಾಸನದ ಲಾಡ್ಜಿನಲ್ಲಿ ಆತ್ಮಹತ್ಯೆಗೆ ಶರಣು

nenuಹಾಸನ: ಬೆಂಗಳೂರಿನ ಪ್ರೇಮಿಗಳಿಬ್ಬರು ಹಾಸನದ ಖಾಸಗಿ ಲಾಡ್ಜ್ ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ನಡೆದಿದೆ.
 
ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು ದೊಮ್ಮಲೂರು ಬಡಾವಣೆಯ ಅರುಣ್ ಕುಮಾರ್(21) ಮತ್ತು ವಿಜಯಲಕ್ಷ್ಮಿ(24) ಎಂದು ಗುರುತಿಸಲಾಗಿದೆ. ಕೆಲವು ದಿನಗಳ ಹಿಂದೆ ಈ ಇಬ್ಬರು ಕಾಣೆಯಾಗಿದ್ದು, ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು.
 
ಐದು ವರ್ಷಗಳ ಹಿಂದೆಯೇ ವಿಜಯಲಕ್ಷ್ಮಿಗೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆದರೆ ಅರುಣ್ ಅವಿವಾಹಿತ ಎನ್ನಲಾಗಿದೆ.
 
ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
No Comments

Leave A Comment