Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಬೆಳಗಾವಿಯಲ್ಲಿ ಎಂಇಎಸ್‌ ಪುಂಡಾಟ,ಕರಾಳ ದಿನ:ಮೇಯರ್‌ ಭಾಗಿ

65ಬೆಳಗಾವಿ : ಕರ್ನಾಟಕ ರಾಜ್ಯಾದ್ಯಂತ 61 ನೇ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದರೆ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌)ಕರಾಳ ದಿನವನ್ನು ಆಚರಿಸಿ ಪುಂಡಾಟ ಮೆರೆದಿದ್ದು, ನಾಡ ದ್ರೋಹದ ಕಾರ್ಯದಲ್ಲಿ  ಮೇಯರ್‌ ಮತ್ತು ಉಪಮೆಯರ್‌ ಪಾಲ್ಗೊಂಡಿದ್ದರು.

ಸಂಭಾಜಿ ಉದ್ಯಾನವನದಿಂದ ಹುತಾತ್ಮ ಚೌಕದ ವರೆಗೆ ನೂರಾರು ಎಂಇಎಸ್‌ ಕಾರ್ಯಕರ್ತರು ಕಪ್ಪು ಭಾವುಟಗಳನ್ನು ಹಿಡಿದು, ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೆರವಣಿಗೆ ನಡೆಸಿ ನಾಡ ದ್ರೋಹದ ಘೋಷಣೆಗಳನ್ನು ಕೂಗಿದರು. ಮೆರವಣಿಗೆಯಲ್ಲಿ  ಮೇಯರ್‌ ಸರಿತಾ ಪಾಟೀಲ್‌, ಉಪಮೇಯರ್‌ ಸಂಜಯ್‌ ಶಿಂಧೆ ಪಾಲ್ಗೊಂಡಿದ್ದರು.

ಮೇಯರ್‌ ಮತ್ತು ಉಪಮೇಯರ್‌ ವಿರುದ್ಧ ಕನ್ನಡ ಪರ ಸಂಘಟನೆಗಳು ಕಿಡಿಕಾರಿದ್ದು ಕೂಡಲೇ ಇಬ್ಬರನ್ನೂ ವಜಾ ಮಾಡಿ ಸದಸ್ಯತ್ವದಿಂದ ಅನರ್ಹ ಮಾಡುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಸರಕಾರಕ್ಕೆ ವರದಿ 

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಎನ್‌ ಜಯರಾಮು ಅವರು ಮೆರವಣಿಗೆಯ ವಿಡಿಯವೋ, ಭಾವಚಿತ್ರಗಳನ್ನು ಸಂಗ್ರಹಿಸಿ ಪರಿಶೀಲಿಸಿ ನಗರಾಭಿವೃದ್ದಿ ಇಲಾಖೆಗೆ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.

2011 ರಲ್ಲೂ  ಕರಾಳ ದಿನ ಆಚರಣೆ ಮಾಡಿದ್ದಕ್ಕಾಗಿ ಮಹಾನಗರ ಪಾಲಿಕೆಯನ್ನೇ ಸೂಪರ್‌ ಸೀಡ್‌ ಮಾಡಲಾಗಿತ್ತು. ಇದೀಗ ಮೇಯರ್‌ ಮತ್ತು ಉಪಮೇಯರ್‌ ಅನರ್ಹಗೊಳ್ಳುವ ಸಾಧ್ಯತೆಗಳಿವೆ.

No Comments

Leave A Comment