Log In
BREAKING NEWS >
ನಾಡಿನ ಸಮಸ್ತ ಜನತೆಗೆ, ನಮೆಲ್ಲಾ ಓದುಗರಿಗೆ,ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ನಾಗರ ಪ೦ಚಮಿ ಹಾಗೂ 72ನೇ ಸ್ವಾತ೦ತ್ರೋತ್ಸವದ ಶುಭಾಶಯಗಳು....

ಪಾಕ್‌ನಿಂದ ಗಡಿಯಲ್ಲಿ ಭಾರೀ ಗುಂಡಿನ ದಾಳಿ:2 ಮಕ್ಕಳು ಸೇರಿ 7 ಮಂದಿ ಬಲಿ

bsf1ಜಮ್ಮು: ಪಾಕಿಸ್ಥಾನ ಮಂಗಳವಾರವೂ ಕದನವಿರಾಮ ಉಲ್ಲಂಘನೆ ನಡೆಸಿ ಭಾರತೀಯ ಸೇನಾ ಪೋಸ್ಟ್‌ಗಳು ಹಾಗೂ ನಾಗರಿಕ ಪ್ರದೇಶಗಳ ಮೇಲೆ ಭಾರೀ ಗುಂಡಿನ ದಾಳಿ ನಡೆಸಿದ್ದು,ದಾಳಿಗೆ 7 ಮಂದಿ ಭಾರತದ ನಾಗರಿಕರು ಸಾವನ್ನಪ್ಪಿದ್ದು , 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಸಾಂಬಾ ಜಿಲ್ಲೆಯ ರಾಮ್‌ ಘಡ್‌ ನಲ್ಲಿ ನಡೆಸಿದ ದಾಳಿಗೆ ಇಬ್ಬರು ಸಣ್ಣ ಮಕ್ಕಳು ಸೇರಿದಂತೆ 5 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಮಂಗಳವಾರ ಬೆಳ್ಳಂಬೆಳಗ್ಗೆ ನಡೆದ ದಾಳಿಗೆ 18 ವರ್ಷದ ರಾಜಿಂದರ್‌ ಕೌರ್‌ ಎಂಬ ಯುವತಿ ಬಲಿಯಾಗಿದ್ದಳು. ಇದರೊಂದಿಗೆ ಸೆ. 29ರ ಸರ್ಜಿಕಲ್‌ ದಾಳಿ ನಂತರ 8 ಯೋಧರು ಮತ್ತು 10 ನಾಗರಿಕರು ಸೇರಿ 18 ಮಂದಿ ಗಡಿಯಲ್ಲಿನ ಪಾಕಿಸ್ತಾನಿ ದಾಳಿಗೆ ಅಸುನೀಗಿದಂತಾಗಿದೆ.

ಸೋಮವಾರ ಪಾಕ್‌ ನಡೆಸಿದ ದಾಳಿಯಲ್ಲಿ ಓರ್ವ ಭಾರತೀಯ ಸೈನಿಕ ಹುತಾತ್ಮನಾಗಿದ್ದು,ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ದರು. ಪಾಕ್‌ದಾಳಿಗೆ ಭಾರತದ ಸೈನಿಕರು ದಿಟ್ಟ ಪ್ರತ್ಯುತ್ತರ ನೀಡಿ ಭಾರೀ ಪ್ರತಿದಾಳಿ ನಡೆಸಿದ್ದು ಹಲವು ಸೈನಿಕರು ಪ್ರಾಣಕಳೆದುಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

 

No Comments

Leave A Comment