Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಕನ್ನಡ ಮಾಧ್ಯಮ ಜಾರಿಗೆ ಸಂವಿಧಾನ ತಿದ್ದುಪಡಿಯಾಗಬೇಕು:ಸಿದ್ದರಾಮಯ್ಯ

sidduಬೆಂಗಳೂರು : ‘ಪ್ರಾಥಮಿಕ  ಶಿಕ್ಷಣವನ್ನು ಆಯಾ ರಾಜ್ಯಗಳ ಮಾತೃಭಾಷೆಯಲ್ಲಿ ನೀಡಲು ಸಂವಿಧಾನ ತಿದ್ದುಪಡಿಯೊಂದೇ ಉಳಿದಿರುವ ದಾರಿ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. 

ಕಂಠೀರವ ಕ್ರೀಡಾಂಗಣದಲ್ಲಿ ನಡೆದ 61 ನೇ ಕರ್ನಾಟಕ ರಾಜ್ಯೋತ್ಸವ ಭಾಷಣದಲ್ಲಿ ಮಾತನಾಡಿ ‘ರಾಜ್ಯದಲ್ಲಿ ಶಿಕ್ಷಣ ಮಾಧ್ಯಮ ನೀತಿ ಘೋಷಣೆ ಮಾಡಿದ್ದೇವೆ.ಆದರೆ ನ್ಯಾಯಾಲಯದಲ್ಲಿ ನಮಗೆ ಹಿನ್ನಡೆಯಾಗಿದೆ. ಸುಪ್ರೀಂ ತೀರ್ಪು ಅಂತಿಮ.ಅದನ್ನು ಪ್ರಶ್ನಿಸುವಂತಿಲ್ಲ’ ಎಂದರು. 

‘ಈಗ ಕನ್ನಡ ಮಾಧ್ಯಮ  ಶಿಕ್ಷಣ ಜಾರಿಗೆ ಮಾಡಲು  ಸಂವಿಧಾನ ತಿದ್ದುಪಡಿಯೊಂದೇ ಉಳಿದಿರುವ ದಾರಿ.ಭಾಷಾ ಮಾಧ್ಯಮದ ವಿಚಾರವಾಗಿ ಪ್ರಧಾನಿಗೆ ಪತ್ರ ಬರೆದಿದ್ದೆ ,ಈಗಲೂ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ  ಸಭೆ ಕರೆಯಲು ಮತ್ತೂಮ್ಮೆ ಮನವಿ ಮಾಡುವೆ’ ಎಂದರು. 

No Comments

Leave A Comment