Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ನ್ಯಾಯಕೊಡಿ ..ನ್ಯಾಯಕೊಡಿ .. : ಸಿಎಂ ರಾಜ್ಯೋತ್ಸವ ಭಾಷಣಕ್ಕೆ ಅಡ್ಡಿ

9ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣಕ್ಕೆ ವ್ಯಕ್ತಿಯೊಬ್ಬ ಅಡ್ಡಿ ಪಡಿಸಿದ ಘಟನೆ ಮಂಗಳವಾರ ನಡೆದಿದೆ.

ಮುಖ್ಯಮಂತ್ರಿಗಳು ಭಾಷಣ ಮಾಡುತ್ತಿದ್ದ ವೇಳೆ ಸಭಿಕರ ಸಾಲಿನಲ್ಲಿದ್ದ ವ್ಯಕ್ತಿ ಎದ್ದು ನಿಂತು ವೇದಿಕೆಯ ಮುಂಭಾಗಕ್ಕೆ ಬಂದು ನ್ಯಾಯಕೊಡಿ..ನ್ಯಾಯಕೊಡಿ ..ನನಗೆ ಕೆಪಿಎಸ್‌ಇ ಪರೀಕ್ಷೆಯಲ್ಲಿ ಅನ್ಯಾಯವಾಗಿದೆ ಎಂದು ಘೋಷಣೆ ಕೂಗಿದ್ದಾನೆ.

ಈ ವೇಳೆ ಭಾಷಣ ನಿಲ್ಲಿಸಿದ ಸಿಎಂ ಆತನಿಗೆ ಏನು ನ್ಯಾಯ ಬೇಕು ಹೇಳಿ ಕೊಡಿಸೋಣ..ಎಂದು ಭಾಷಣ ಮುಂದುವರಿಸಿದರು.

ಘೋಷಣೆ ಕೂಗಿದ ಮೈಸೂರಿನ ಕುಕ್ಕರಳ್ಳಿ ನಿವಾಸಿ ಪರಶುರಾಮ ಎನ್ನುವವರನ್ನು ಕೂಡಲೇ ಪೊಲೀಸರು ಹಿಡಿದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

1993 ರಲ್ಲಿ ಕೆಪಿಎಸ್‌ಸಿ ಪರೀಕ್ಷೆ ಬರೆದಿದ್ದು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕೆನ್ನುವ ಅವರ ಅರ್ಜಿ ತಿರಸ್ಕೃತಗೊಂಡಿದೆ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಅವರು ಹೋರಾಟ ಮಾಡಿಕೊಂಡು ಬಂದಿದ್ದಾರೆ.

No Comments

Leave A Comment