Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಗಡಿಯಲ್ಲಿ ಮತ್ತೆ ಪಾಕ್ ಪುಂಡಾಟ: ಅಪ್ರಚೋದಿತ ಗುಂಡಿನ ದಾಳಿಗೆ ಓರ್ವ ಯುವತಿ ಸಾವು, 2 ಗಾಯ/19-year-old girl killed in Pak shelling, border on fire as BSF retaliates

22firing

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ಸೇನೆ ಮತ್ತೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪಾಕಿಸ್ತಾನ ಸೈನಿಕರ ಅಪ್ರಚೋದಿತ ಗುಂಡಿನ ದಾಳಿಗೆ 19 ವರ್ಷದ ಯುವತಿ ಸಾವನ್ನಪ್ಪಿ, ಇಬ್ಬರು ನಾಗರಿಕರಿಗೆ ಗಾಯವಾಗಿರುವ ಘಟನೆ ಮಂಗಳವಾರ ನಡೆದಿದೆ.

ಜಮ್ಮು ಮತ್ತು ಕಾಶ್ಮೀರದ ನೌಶೆರಾ, ಅರ್ನಿಯಾ ಮತ್ತು ರಾಮ್ಗರ್ಹ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮವನ್ನು ಉಲ್ಲಂಘಿಸಿದ್ದು, ಗಡಿಯಲ್ಲಿರುವ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಪ್ರಚೋದಿತ ಗುಂಡಿನ ದಾಳಿ ಹಾಗೂ ಶೆಲ್ ಗಳ ದಾಳಿಯನ್ನು ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ದಾಳಿಗೆ ರಾಮ್ಗರ್ಹ್ ಸೆಕ್ಟರ್ ನ 19 ವರ್ಷದ ಯುವತಿಯೊಬ್ಬಳು ಮೃತಪಟ್ಟಿದ್ದಾಳೆಂದು ಹೇಳಲಾಗುತ್ತಿದೆ. ಇದರಂತೆ ಸಾಂಬಾ ಜಿಲ್ಲೆಯಲ್ಲಿಯೂ ಇಬ್ಬರು ನಾಗರೀಕರಿಗೆ ಗಾಯವಾಗಿರುವುದಾಗಿ ವರದಿಗಳು ತಿಳಿಸಿವೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಪಾಕಿಸ್ತಾನ ಸೇನೆ ದಾಳಿಗೆ ಭಾರತೀಯ ಸೇನೆ ಕೂಡ ದಿಟ್ಟ ಉತ್ತರವನ್ನು ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಬಂಡೀಪುರದ ಅಜರ್ ಗ್ರಾಮದಲ್ಲಿ ಉಗ್ರರು ಅಡಗಿ ಕುಳಿತಿರುವುದಾಗಿ ತಿಳಿದುಬಂದಿದ್ದು, ಯೋಧರು ಕಾರ್ಯಾಚರಣೆ ನಡೆಸುತ್ತಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

A 19-year-old girl has been killed and two civilians have been injured as Pakistan Rangers violated the ceasefire in Nowshera, Arnia and Ramgarh sectors of Jammu and Kashmir on Tuesday morning.

The Pakistani forces started unprovoked shelling, targeting posts as well as civilian areas in Ramgarh and Arnia areas at around 6 am.

The girl was killed in the Ramgarh sector of Samba district while the two civilians sustained injuries in the Arnia sector. The injured have been admitted to the nearby hospital for immediate medical aid.

Dr Naseeb Chand Dhingra told ANI in Jammu that three patients have been brought from the RS Pura sector, adding that they have sustained sprinter injuries.

The Border Security Force is strongly retaliating to the unprovoked firing from the other side of the border in Samba sector.

Meanwhile, an encounter is currently underway between the security forces and terrorists in Bandipora’s Ajar village.

On Monday, an army jawan and a woman were killed as Pakistani troops resorted to heavy mortar shelling along the LoC in the Rajouri and Mendhar sectors.

The Indian Army on Saturday launched retaliatory fire assaults at Pakistan army positions, inflicting massive damage across the border by destroying four posts across the LoC in the Keran sector of Jammu and Kashmir’s Kupwara district.

The Indian forces retaliated after Pakistani Rangers violated the ceasefire repeatedly in Kathua and RS Pura sectors along the International Border on Saturday. A Border Security Force soldier was killed in Pakistani firing in Machil sector.

An Indian soldier was killed on Friday and his body was mutilated by terrorists in an attack near the LoC in Jammu and Kashmir.

Nearly half a dozen people and four BSF soldiers have been killed so far and over 30 others injured in the recent skirmishes along the International Border.

No Comments

Leave A Comment