Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆoಕಟೇಶ ದೇವಸ್ಥಾನದಲ್ಲಿ ನಡೆಯುತ್ತಿರುವ 118ನೇ ಭಜನಾ ಸಪ್ತಾಹ ಮಹೋತ್ಸವದ ನೇರ ಚಿತ್ರ-ವರದಿಯು ಕರಾವಳಿಕಿರಣ ಡಾಟ್ ಕಾoನಲ್ಲಿ ಪ್ರಸಾರ ಮಾಡಲಾಗುತ್ತಿದೆ

ಮದುವೆ ವಾರ್ಷಿಕೋತ್ಸವದ ಉಡುಗೊರೆ ಕೇಳಿದರೆ “ತಲ್ಲಾಖ್” ಕೊಟ್ಟ ಇಮ್ರಾನ್ ಖಾನ್!

imran-khan-rehamಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಹಿರಿಯ ರಾಜಕಾರಣಿ ಇಮ್ರಾನ್ ಖಾನ್ ವಿರುದ್ಧ ಅವರ ಮಾಜಿ ಪತ್ನಿ ವಾಗ್ದಾಳಿ ನಡೆಸಿದ್ದು, ಮದುವೆ ವಾರ್ಷಿಕೋತ್ಸವದ  ಉಡುಗೊರೆ ಕೇಳಿದರೆ ವಿಚ್ಛೇದನ ಕೊಟ್ಟರು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ತೆಹ್ಕೀಕ್ ಇ ಇನ್ಸಾಫ್ ಅಧ್ಯಕ್ಷ ಇಮ್ರಾನ್ ಖಾನ್ ಅವರ ಮಾಜಿ ಪತ್ನಿ ರೆಹಾಮ್ ಅವರು,  ಪಾಕಿಸ್ತಾನ ಸರ್ಕಾರದ ದುರಾಡಳಿತದ ವಿರುದ್ಧ ಇದೇ ನವೆಂಬರ್ 2ರಂದು ಇಮ್ರಾನ್ ಖಾನ್ ಅವರು ಪಾಕಿಸ್ತಾನ ಬಂದ್ ಗೆ ಕರೆ ನೀಡಿದ್ದು, ಇದರ ಹಿನ್ನಲೆಯಲ್ಲಿ ಪಾಕಿಸ್ತಾನದ ಜಿಯೋ  ಟಿವಿಯೊಂದಿಗೆ ಮಾತನಾಡಿದರು.

ಮಾತಿನ ಭರದಲ್ಲಿ ವಿಚ್ಛೇಧನಕ್ಕೆ ಕಾರಣ ಏನು ಎಂದು ಕೇಳಿದಾಗ, ಮದುವೆ ವಾರ್ಷಿಕೋತ್ಸವದ ಉಡುಗೊರೆ ಕೇಳಿದ್ದೆ, ಉಡುಗೊರೆ ಬದಲಾಗಿ ತಲ್ಲಾಖ್ ಕೊಟ್ಟರು ಎಂದು ತಮಾಷೆಯಾಗಿ ಹೇಳಿದರು.”ಕಳೆದ ಅಕ್ಟೋಬರ್ 31ರಂದು ನಮ್ಮ ಮದುವೆ ವಾರ್ಷಿಕೋತ್ಸವವಿತ್ತು.

ಅಂದು ನಾನು ವಾರ್ಷಿಕೋತ್ಸವದ ಉಡುಗೊರೆ ಕೇಳಿದ್ದೆ. ಆದರೆ ಅವರು ಉಡುಗೊರೆ ಬದಲಾಗಿ ತಲ್ಲಾಖ್ ನೀಡಿದರು.  ನನ್ನೊಂದಿಗೆ ಆದದ್ದು ಪಾಕಿಸ್ತಾನಕ್ಕೆ ಆಗದಿರಲಿ ಎಂದು ಆಶಿಸುತ್ತೇನೆ ಎಂದು ರೆಹಾಮ್ ಹೇಳಿದ್ದಾರೆ. “ನನ್ನ ಮತ್ತು ಇಮ್ರಾನ್ ಖಾನ್ ವಿಚ್ಛೇದನಕ್ಕೇ ಬೇರಾರೂ ಕಾರಣರಲ್ಲ. ನಮ್ಮ ನಿರ್ಧಾರಕ್ಕೆ ನಾವೇ ಹೊಣೆ. ಪರಸ್ಪರ ಚರ್ಚೆ ನಡೆಸಿಯೇ ನಮ್ಮ 10 ತಿಂಗಳ  ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದೆವು ಎಂದು ರೆಹಾಮ್ ಹೇಳಿದ್ದಾರೆ.

ಇದೇ ವೇಳೆ ತಲ್ಲಾಖ್ ಪದ್ಧತಿಯನ್ನು ಪರೋಕ್ಷವಾಗಿ ವಿರೋಧಿಸಿರುವ ರೆಹಾಮ್, ಈ ದೇಶದ ಪ್ರಭಾವಿ ಪುರುಷನನ್ನು ವರಿಸಿದರೂ ಮಹಿಳಾ ನಿಂದನೆ ಮಾತ್ರ ನಿಲ್ಲುವುದಿಲ್ಲ ಎಂದು ರೆಹಾಮ್  ಹೇಳಿದರು.

ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿದ ರಾಜಕಾರಣದತ್ತ ಮುಖ ಮಾಡಿ ಪಾಕಿಸ್ತಾನ ತೆಹ್ರೀಕ್ ಇ ಇನ್ಸಾಫ್ ಪಕ್ಷ ಸ್ಥಾಪನೆ ಮಾಡಿರುವ ಇಮ್ರಾನ್ ಖಾನ್ ಅವರು, ಕಳೆದ ವರ್ಷವಷ್ಟೇ ಟಿವಿ ನಿರೂಪಕಿ  ರೆಹಾಮ್ ರನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಕೇವಲ 10 ತಿಂಗಳಲ್ಲೇ ಅಂದರೆ ಕಳೆದ ಅಕ್ಟೋಬರ್ ನಲ್ಲಿ ತಮ್ಮ ವೈವಾಹಿಕ ಸಂಬಂಧವನ್ನು ಮುರಿದುಕೊಂಡಿದ್ದರು.

No Comments

Leave A Comment