Log In
BREAKING NEWS >
ಕೇಂದ್ರ ಸಚಿವ ಅನಂತ್ ಕುಮಾರ್ ನಿಧನ; ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ರಜೆ 3 ದಿನ ಶೋಕಾಚರಣೆ........20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಬಾಂಗ್ಲಾದಲ್ಲಿ 15 ದೇವಾಲಯಗಳ ಮೇಲೆ ದಾಳಿ; 7-8 ವಿಗ್ರಹ ಧ್ವಂಸ!

bangladesh-3ಢಾಕಾ: ಬಾಂಗ್ಲಾದೇಶದ ಬ್ರಹ್ಮನ್ ಬರಿಯಾ ಜಿಲ್ಲೆಯಲ್ಲಿ ಉದ್ರಿಕ್ತ ದುಷ್ಕರ್ಮಿಗಳ ಗುಂಪೊಂದು 15 ದೇವಾಲಯಗಳನ್ನು ಧ್ವಂಸಗೊಳಿಸಿದ್ದು, ನೂರಾರು ಹಿಂದೂಗಳ ಮನೆಯನ್ನು ಲೂಟಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಮ್ ಗೆ ಗೌರವ ತೋರದ ಪೋಸ್ಟ್ ಪ್ರಕಟವಾಗಿದ್ದ ಪರಿಣಾಮವಾಗಿ ಈ ದುರ್ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪೊಲೀಸರು 1,000 ಕ್ಕೂ ಹೆಚ್ಚು ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳ ವರದಿಗಳ ಮೂಲಕ ತಿಳಿದುಬಂದಿದೆ.

ನೂರಾರು ಜನರ ಗುಂಪೊಂದು ಶಸ್ತ್ರಗಳನ್ನು ಹಿಡಿದು ಬ್ರಹ್ಮನ್ ಬರಿಯಾದ ನಸೀರ್ ನಗರ್ ನಲ್ಲಿರುವ ಹಿಂದೂ ಸಮುದಾಯದ ಕುಟುಂಬಗಳ ಮೇಲೆ ಹಾಗೂ ದೇವಾಲಯದ ಮೇಲೆ ದಾಳಿ ನಡೆಸಿದೆ.

ಫೇಸ್ ಬುಕ್ ನಲ್ಲಿ ಮುಸ್ಲಿಮರ ಪವಿತ್ರ ಸ್ಥಳವನ್ನು ಲೇವಡಿ ಮಾಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ನಸೀರ್ ನಗರ್ ಪೊಲೀಸ್ ಠಾಣೆ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಕನಿಷ್ಠ 7-8 ವಿಗ್ರಹಗಳಿಗೆ ಹಾನಿಯುಂಟಾಗಿದ್ದು, ಅಪರಾಧಿಗಳನ್ನು ಶೀಘ್ರವೇ ಬಂಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

No Comments

Leave A Comment