Log In
BREAKING NEWS >
20ರಿ೦ದ 24ರವರೆಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ವರ್ಷ೦ಪ್ರತಿ ನಡೆಯುವ ಲಕ್ಷದೀಪೋತ್ಸವ ನಡೆಯಲಿದೆ.....ಡಿಸೆ೦ಬರ್ 13ರಿ೦ದ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 90ನೇ ಭಜನಾ ಸಪ್ತಾಹ ಮಹೋತ್ಸವ ಆರ೦ಭಗೊಳ್ಳಲಿದೆ....

ಯೆಮೆನ್ ಮೇಲೆ ಸೌದಿ ಭೀಕರ ವಾಯುದಾಳಿ; ಕನಿಷ್ಟ 60 ಮಂದಿ ಸಾವು

yemenಅಡೆನ್: ಹೌತಿ ಬಂಡುಕೋರರ ವಶದಲ್ಲಿರುವ ಯೆಮೆನ್ ಮೇಲೆ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳು ನಡೆಸಿದ ಭೀಕರ ವಾಯುದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ.

ಯೆಮೆನ್ ನ ಪಶ್ಚಿಮ ಕರಾವಳಿಯಲ್ಲಿರುವ 2 ಕಾರಾಗೃಹಗಳ ಮೇಲೆ ನಿನ್ನೆ ತಡರಾತ್ರಿ ಸೌದಿ ಮಿತ್ರಪಡೆಗಳು ವಾಯು ದಾಳಿ ನಡೆಸಿದ್ದು, ಈ ಭೀಕರ ದಾಳಿಯಲ್ಲಿ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದಾರೆ.  ಸಾವಿಗೀಡಾದವರಲ್ಲಿ ಕಾರಾಗೃಹದ ಸಿಬ್ಬಂದಿಗಳು ಹಾಗೂ ಶಿಕ್ಷೆಗೊಳಗಾಗಿದ್ದ ಖೈದಿಗಳು ಸೇರಿದ್ದರು ಎಂದು ತಿಳಿದುಬಂದಿದೆ.

ಪ್ರಸ್ತುತ ದಾಳಿಗೊಳಗಾಗಿರುವ ಎರಡೂ ಕಾರಾಗೃಹಗಳು ಹೌತಿ  ಬಂಡುಕೋರರ ವಶದಲ್ಲಿತ್ತು ಎಂದು ತಿಳಿದುಬಂದಿದೆ.ಹೌತಿ ಉಗ್ರರ ವಶದಲ್ಲಿರುವ ಹೊಡೈದಾ ನಗರದ ಜೈಲುಗಳ ಮೇಲೆ ದಾಳಿ ಭಾನುವಾರ ಸತತ ಮೂರು ಬಾರಿ ದಾಳಿ ನಡೆಸಲಾಗಿದ್ದು, ಕ್ಷಿಪಣಿ ಮತ್ತು ಬಾಂಬ್ ಗಳಿಂದ ದಾಳಿ ನಡೆಸಲಾಗಿದೆ  ಎಂದು ತಿಳಿದುಬಂದಿದೆ.

ಘಟನೆಯಲ್ಲಿ ಸಿಬ್ಬಂದಿಗಳು ಮತ್ತು ಖೈದಿಗಳು ಸೇರಿದಂತೆ ಕನಿಷ್ಠ 60 ಮಂದಿ ಸಾವನ್ನಪ್ಪಿದ್ದು, 38ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಸಮೀಪದ  ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ.ಹೌತಿ ಬಂಡುಕೋರರ ವಿರುದ್ಧ ಸೌದಿ ಮಿತ್ರಪಡೆಗಳು ನಡೆಸುತ್ತಿರುವ ದಾಳಿ 19ನೇ ತಿಂಗಳಿಗೆ ಮುಂದುವರೆದಿದ್ದು, ಈ ವರೆಗೂ ಸುಮಾರು 400ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

No Comments

Leave A Comment