Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ತಾರಕ್ಕೇರಿದ ಟರ್ಕಿ ಆಂತರಿಕ ಕಲಹ; 1 ಲಕ್ಷಕ್ಕೂ ಅಧಿಕ ಸರ್ಕಾರಿ ನೌಕರರ ವಜಾ!

turkey-crackdownಇಸ್ತಾನ್ ಬುಲ್: ಟರ್ಕಿ ಆಂತರಿಕ ಕಲಹ ತಾರಕಕ್ಕೇರಿದ್ದು, ಅಧ್ಯಕ್ಷ ಟಯ್ಯೀಪ್ ಎರ್ಡೋಗನ್ ಅವರ ಪ್ರಮುಖ ಎದುರಾಳಿ ಎಂದು ಬಿಂಬಿಸಲಾಗುತ್ತಿರುವ ಪಾದ್ರಿ ಫತೇಉಲ್ಲಾ ಗುಲೆನ್ ಪರ ಪ್ರಚಾರ  ಮಾಡಿದರು ಎಂಬ ಆರೋಪದ ಮೇರೆಗೆ ಸ್ಥಳೀಯ ಸರ್ಕಾರ ಬರೊಬ್ಬರಿ 1 ಲಕ್ಷಕ್ಕೂ ಅಧಿಕ ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ.

ಕೇವಲ ಇದು ಮಾತ್ರವಲ್ಲದೇ ಸರ್ಕಾರದ ವಿರುದ್ಧ ಸುದ್ದಿ ಪ್ರಸಾರ ಮಾಡಿದ ಸುಮಾರು 15 ಮಾಧ್ಯಮ ಸಂಸ್ಥೆಗಳಿಗೆ ಬೀಗ ಜಡಿಯಲಾಗಿದೆ. ಟರ್ಕಿ ಇದೀಗ ಆಂತರಿಕ ಕಲಹದ ಬೇಗುದಿಯಲ್ಲಿ  ಬೇಯುತ್ತಿದ್ದು, ಸರ್ಕಾರಿ ವಿರೋಧಿ ಮನೋಭಾವದಿಂದ ಇರುವ ಸುಮಾರು 37 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಬಂಧಿತರ ಪೈಕಿ ಪ್ರಮುಖ ಮಾಧ್ಯಮ ಸಂಸ್ಥೆಗಳ  ಸಂಪಾದಕರು, ಪತ್ರಕರ್ತರೂ ಹಾಗೂ ಲೇಖಕರು, ಶಿಕ್ಷಕರು ಸೇರಿದ್ದಾರೆ ಎಂದು ಹೇಳಲಾಗುತ್ತಿದೆ.

ಇದಲ್ಲದೆ ಲಕ್ಷಾಂತರ ಶಿಕ್ಷಕರು, ಲೇಖಕರು, ಸಾಮಾಜಿಕ ಕಾರ್ಯಕರ್ತರನ್ನು ಗೃಹಬಂಧನದಲ್ಲಿ  ಇರಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಗುಲೆನ್ ಪರ ಅಭಿಪ್ರಾಯಗಳನ್ನು ಹೊಂದಿರುವ ಸರ್ಕಾರಿ ಲ್ಯಾಬ್ ಗಳ ವಿಜ್ಞಾನಿಗಳು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯಗಳ ತಜ್ಞರನ್ನು  ವಜಾ ಮಾಡಲಾಗಿದ್ದು, ಎಲ್ಲರೂ ಇದೀಗ ಎರ್ಡೋಗನ್ ವಿರುದ್ಧ ಪ್ರತಿಭಟನೆಯಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಸ್ತುತ ಟರ್ಕಿ ಅಕ್ಷರಶಃ ಆಂತರಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದ್ದು,  ಸರ್ಕಾರದ ವಿರುದ್ಧ ವಿಮರ್ಶೆಗಳನ್ನು ಮಾಡುವವರೆಲ್ಲರನ್ನೂ ಬಂಧಿಸಲಾಗುತ್ತಿದೆ.ಸರ್ಕಾರದ ಈ ಟೀಕಾರ್ಹ ನಡೆಯಿಂದಾಗಿ ಟರ್ಕಿಯಲ್ಲಿ ಆಡಳಿತ ಯಂತ್ರ ಕುಸಿದು ಬಿದ್ದಿದ್ದು, ಅರಾಜಕತೆ ತಾಂಡವವಾಡುತ್ತಿದೆ.

No Comments

Leave A Comment