Log In
BREAKING NEWS >
ವೇತನ ಹೆಚ್ಚಳ ಸಹಿತ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 30 ಮತ್ತು 31ರಂದು ಬ್ಯಾಂಕ್‌ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ....

ಪಟಾಕಿ ಅನಾಹುತ: 30ಕ್ಕೂ ಹೆಚ್ಚು ಮಂದಿಗೆ ಗಾಯ

A family celebrating deepawali festival by burning crackers in Bengaluru on Saturday. -Photo by KRISHNAKUMAR P S

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಸಿಡಿಸುವ ಸಂಭ್ರಮದಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, 23 ಮಕ್ಕಳು ಕಣ್ಣುಗಳಿಗೆ ಗಾಯ ಮಾಡಿಕೊಂಡಿದ್ದಾರೆ.

ನಗರದ ನಾರಾಯಣ ನೇತ್ರಾಲಯದಲ್ಲಿ 18 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, 11 ವರ್ಷದ ಆಕಾಶ್‌ ಎಂಬ ಬಾಲಕನ ಎಡಗಣ್ಣಿಗೆ ಗಾಯವಾಗಿದೆ. ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ವರುಣ್ ಮತ್ತು ಕಿಶೋರ್‌ ಎಂಬ ಬಾಲಕರು, ಮೋದಿ ಕಣ್ಣಿನ ಆಸ್ಪತ್ರೆಯಲ್ಲಿ ಶಿರಿಶಾ (3) ಹಾಗೂ ಐಶ್ವರ್ಯ (5) ಎಂಬ ಬಾಲಕಿಯರು, ಸಂಪ್ರತಿ ಆಸ್ಪತ್ರೆಯಲ್ಲಿ ಒಬ್ಬರು ಚಿಕಿತ್ಸೆ ಪಡೆದಿದ್ದಾರೆ.
ಶೇಖರ್‌ ಕಣ್ಣಿನ ಆಸ್ಪತ್ರೆ, ವಾಸನ್‌ ಐ ಕೇರ್, ಅಗರ್‌ವಾಲ್ ಹಾಗೂ ರಂಗಶ್ರೀ ಕಣ್ಣಿನ ಆಸ್ಪತ್ರೆಯಲ್ಲಿ 10 ಮಂದಿ ಪಟಾಕಿಯಿಂದ ಕಣ್ಣಿಗೆ ಹಾನಿ ಮಾಡಿಕೊಂಡು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಅನೇಕ ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದರಿಂದ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.
ಕಣ್ಣಿಗೆ ತೀವ್ರ ಗಾಯ ಮಾಡಿಕೊಂಡಿರುವ ವರುಣ್ ಮಾತ್ರ ಮಿಂಟೊ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.
ತ್ಯಾಜ್ಯದ ರಾಶಿ: ದೀಪಾವಳಿ ಹಬ್ಬದಲ್ಲಿ ಬಾಳೆ ಕಂಬ, ಹೂವು, ಪಟಾಕಿ ಸಿಡಿತದ ಕಾಗದದ ಚೂರುಗಳು ಸೇರಿದಂತೆ ನಗರದ ಹಲವು ಪ್ರದೇಶಗಳಲ್ಲಿ ತ್ಯಾಜ್ಯದ ರಾಶಿ  ಕಂಡುಬಂತು.
ಹಲವು ರಸ್ತೆಗಳು ಮತ್ತು ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ತುಂಬಿರುವುದು ಸಾಮಾನ್ಯವಾಗಿತ್ತು. ಗುಡ್‌ಶೆಡ್‌ ರಸ್ತೆ ಯಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಿದ್ದರು. ಇದರಿಂದ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು.
ನಗರದ ಚಿಕ್ಕಪೇಟೆ ಮುಖ್ಯ ರಸ್ತೆ, ಅವೆನ್ಯೂ ರಸ್ತೆ, ಓಟಿಸಿ ರಸ್ತೆ, ಬಿವಿಕೆ ಅಯ್ಯಂಗಾರ್‌ ರಸ್ತೆ, ಕೆ.ಆರ್‌.ಮಾರು ಕಟ್ಟೆ, ಸಂಜಯ ನಗರ, ಮಲ್ಲೇಶ್ವರ ಮುಂತಾದ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದ ಕಸ ರಸ್ತೆ ಬದಿಯಲ್ಲಿ ಸಂಗ್ರಹವಾಗಿತ್ತು.
No Comments

Leave A Comment