Log In
BREAKING NEWS >
````````ಸಮಸ್ತ ಓದುಗರಿಗೆ,ಜಾಹೀರಾತುದಾರರಿಗೆ ಮತ್ತು ಅಭಿಮಾನಿಗಳಿಗೆ " ಮಕರ ಸ೦ಕ್ರಮಣ" ಶುಭಾಶಯಗಳು ```````

ಭೋಪಾಲ್; ಜೈಲ್ ನಿಂದ ಎಸ್ಕೇಪ್ ಆದ 8 ಸಿಮಿ ಉಗ್ರರು ಎನ್ ಕೌಂಟರ್ ಗೆ ಬಲಿ/8 SIMI terrorists who escaped Bhopal Central Jail killed in encounter

master
ಭೋಪಾಲ್:
ಬಿಗಿ ಭದ್ರತೆ ಹೊಂದಿದ್ದ ಮಧ್ಯಪ್ರದೇಶದ ಭೋಪಾಲ್ ನ ಕೇಂದ್ರ ಕಾರಾಗೃಹದ ಭದ್ರತಾ ಗಾರ್ಡ್ ಅನ್ನು ಹತ್ಯೆಗೈದು ಭಾನುವಾರ ಬೆಳಗಿನ ಜಾವ ಪರಾರಿಯಾಗಿದ್ದ ಎಂಟೂ ಮಂದಿ ಸಿಮಿ ಉಗ್ರರು ಐಂತಗೇಡಿ ಬಳಿ ಎನ್ ಕೌಂಟರ್ ಗೆ ಬಲಿಯಾಗಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.master

ಕೇಂದ್ರ ಕಾರಾಗೃಹದ ಗಾರ್ಡ್ ರಮಾಶಂಕರ್ ಅವರನ್ನು ಹತ್ಯೆಗೈದ ಸಿಮಿ ಉಗ್ರರು ಬೆಟ್ ಶೀಟ್, ಹಗ್ಗ ಬಳಸಿ ಬೆಳಗ್ಗಿನ ಜಾವ 3.30ರ ಸುಮಾರಿಗೆ ಜೈಲಿನಿಂದ ಪರಾರಿಯಾಗಿದ್ದರು, ಪರಾರಿಯಾದ ಉಗ್ರರ ಬೆನ್ನತ್ತಿ 12 ಗಂಟೆಯೊಳಗೆ ಎಲ್ಲಾ ಉಗ್ರರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆಂದು ಭೋಪಾಲ್ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.

ಜೈಲಿನಿಂದ ಎಸ್ಕೇಪ್ ಆಗಿ ಎನ್ ಕೌಂಟರ್ ಗೆ ಬಲಿಯಾದ ಉಗ್ರರನ್ನು ಅಮ್ಜದ್, ಝಾಕೀರ್ ಹುಸೈನ್ ಸಾದಿಖ್, ಮೊಹಮ್ಮದ್ ಸಾದಿಕ್, ಮುಜೀಬ್ ಶೇಖ್, ಮೆಹಬೂಬ್ ಗುಡ್ಡು, ಮೊಹಮ್ಮದ್ ಖಾಲಿದ್ ಅಹ್ಮದ್, ಅಖ್ವೀಲ್ ಹಾಗೂ ಮಜೀದ್ ಎಂದು ಗುರುತಿಸಲಾಗಿದೆ.

ನಿಷೇಧಿತ ಉಗ್ರಗಾಮಿ ಸಂಘಟನೆ ಸಿಮಿ(ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್)ಯ ಎಂಟು ಮಂದಿ ಉಗ್ರರು ಬಿಗಿ ಭದ್ರತೆ ಹೊಂದಿದ್ದ ಜೈಲಿನಿಂದಲೇ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದಿದೆ ಎಂದು ಈ ಮೊದಲು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು.

ಭೋಪಾಲ್ ನ ಹೈ ಸೆಕ್ಯುರಿಟಿ ಹೊಂದಿರುವ ಜೈಲಿನಲ್ಲಿದ್ದ 8 ಮಂದಿ ಸಿಮಿ ಉಗ್ರರು ಜೈಲಿನ ಗಾರ್ಡ್ ನ ಕುತ್ತಿಗೆಯನ್ನು ಸ್ಟೀಲ್ ಪ್ಲೇಟ್ ನಿಂದ ಕತ್ತರಿಸಿ ಭಾನುವಾರ ರಾತ್ರಿ ಪರಾರಿಯಾಗಿದ್ದಾರೆಂದು ಮಾಧ್ಯಮದ ವರದಿ ತಿಳಿಸಿತ್ತು.

ಈ ಎಂಟು ಮಂದಿ ಉಗ್ರರಿಗೆ ಇಂಡಿಯನ್ ಮುಜಾಹಿದ್ದೀನ್ ಜೊತೆ ಸಂಪರ್ಕ ಇದ್ದಿದ್ದು, ಇವರೆಲ್ಲರ ವಿರುದ್ಧ ಮಹಾರಾಷ್ಟ್ರ, ಗುಜರಾತ್, ಕೇರಳ, ಒಡಿಶಾ, ಉತ್ತರ ಪ್ರದೇಶ, ಚತ್ತೀಸ್ ಗಢ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ದೂರು ದಾಖಲಾಗಿತ್ತು.

ಎಂಟು ಮಂದಿ ಸಿಮಿ ಉಗ್ರರು ಭಾನುವಾರ ಮಧ್ಯರಾತ್ರಿ 2ರಿಂದ 3ಗಂಟೆ ಸುಮಾರಿಗೆ ಜೈಲ್ ನ ಭದ್ರತಾ ಸಿಬ್ಬಂದಿಯ ಕತ್ತು ಸೀಳಿ ಪರಾರಿಯಾಗಿದ್ದರು ಎಂದು ಭೋಪಾಲ್ ಡಿಐಜಿ ರಮಣ್ ಸಿಂಗ್ ಮಾಧ್ಯಮಕ್ಕೆ ತಿಳಿಸಿದ್ದರು.

Eight alleged members of the outlawed Students Islamic Movement of India (SIMI) were killed in an encounter by Madhya Pradesh police on Monday, said officials.

The eight men had earlier escaped from the Bhopal Central Jail in Madhya Pradesh’s capital city Bhopal early morning on Monday.

The SIMI activists also killed security guard Ramashankar Yadav by slitting his throat.

“Eight inmates related to the SIMI escaped from Bhopal Central Jail between 2 to 3 a.m. today. They used their blankets to make a rope and crossed the bigger wall of the jail. They also killed one security guard Ramashankar Yadav. All of them were accused of various crimes such as bank robbery, murder, and sedition,” Bhopal Inspector General of Police Yogesh Choudhary told reporters.

According to a police officer posted in Bhopal, the SIMI men “overpowered” two security guards who were exchanging their shifts at around 3 a.m.

According to some unconfirmed reports, six out of the eight escaped SIMI activists were identified as Sheikh Mujeeb, Muhammad Khalid Akil, Jakir Hussain Sadiq, Mohammad Salik, Mehaboob Malik and Amjad Khan.

Three of those who escaped from Bhopal jail are the same who escaped from Khandwa prison in 2013. They were later caught by the Telangana police. The Madhya Pradesh government has announced Rs. five lakh as reward for information about the escaped prisoners.

No Comments

Leave A Comment