Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಈ ಸಲ 61 ಮಂದಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ

161030kpn75ಬೆಂಗಳೂರು: ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ಪಾಟೀಲ್‌, ಮ್ಯಾಗೆಸ್ಸೆ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಬೇಜವಾಡ ವಿಲ್ಸನ್‌, ಜಾನಪದ ತಜ್ಞ ಡಾ.ಎಂ.ಎನ್‌.ವಾಲಿ, ಸ್ವಾತಂತ್ರ್ಯ ಹೋರಾಟಗಾರ ಮಹದೇವ ಶಿವಬಸಪ್ಪ ಪಟ್ಟಣ, ಹಿರಿಯ ಪತ್ರಕರ್ತ ಈಶ್ವರ ದೈತೋಟ ಸೇರಿದಂತೆ ವಿವಿಧ ಕ್ಷೇತ್ರದಲ್ಲಿನ 61 ಸಾಧಕರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’ ಸಂದಿದೆ.

ಇದು 61ನೇ ಕನ್ನಡ ರಾಜ್ಯೋತ್ಸವವಾಗಿರುವುದರಿಂದ 61 ಮಂದಿ ಸಾಧಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಮುಖ್ಯಮಂತ್ರಿಗಳ ನೇತೃತ್ವದ ಉನ್ನತ ಮಟ್ಟದ ಸಮಿತಿ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. ನ. 1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಒಂದು ಲಕ್ಷ ನಗದು ಮತ್ತು 20 ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

ಕನ್ನಡ ರಾಜ್ಯೋತ್ಸವ ಆಯ್ಕೆ ಪ್ರಕ್ರಿಯೆಗೆ ಮಾರ್ಗಸೂಚಿಗಳನ್ನು ರಚನೆ ಮಾಡುವ ಕುರಿತ ವಿಚಾರ ಹೈಕೋರ್ಟ್‌ ಮೆಟ್ಟಿಲೇರಿದ್ದರಿಂದ ಈ ವರ್ಷದ ರಾಜ್ಯೊತ್ಸವ ಪ್ರಶಸ್ತಿ ಆಯ್ಕೆ ಸಾಕಷ್ಟು ಕುತೂಹಲ ಮೂಡಿಸಿತ್ತು. ಹೈಕೋರ್ಟ್‌ ಸೂಚನೆ ಮೇರೆಗೆ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರ ಅಧ್ಯಕ್ಷತೆಯ ತಜ್ಞರ ಸಮಿತಿ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ಸುಮಾರು 25ಕ್ಕೂ ಹೆಚ್ಚು ಕರಡು ಮಾರ್ಗಸೂಚಿ ರಚಿಸಿ ಅ.5ರಂದು ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ, ಕಾಲಾವಕಾಶದ ಕೊರತೆಯಿಂದಾಗಿ ಈ ಮಾರ್ಗಸೂಚಿ ಅನ್ವಯ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸಿಲ್ಲ. ಹಳೆಯ ಪದ್ಧತಿಯಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಕಂಡಂತಿದೆ:

ಸ್ವಾತಂತ್ರ್ಯ ಹೋರಾಟಗಾರರು ಮಹದೇವ ಶಿವಬಸಪ್ಪ ಪಟ್ಟಣ (ಬೆಳಗಾವಿ)

ನ್ಯಾಯಾಂಗ ನ್ಯಾಯಮೂರ್ತಿ ಶಿವರಾಜ ಪಾಟೀಲ್‌ (ಬೆಂಗಳೂರು)

ಹೊರನಾಡು ಬೇಜವಾಡ ವಿಲ್ಸನ್‌-ದೆಹಲಿ ಸಾಹಿತ್ಯ
ರಂ.ಶಾ.ಲೋಕಾಪುರ (ಬೆಳಗಾವಿ), ಬಿ.ಶಾಮಸುಂದರಂ (ಮೈಸೂರು), ಕೆ.ಟಿ.ಗಟ್ಟಿ (ದಕ್ಷಿಣ ಕನ್ನಡ), ಡಾ.ಸುಕನ್ಯಾ ಮಾರುತಿ (ಧಾರವಾಡ).

ರಂಗಭೂಮಿ
ಮೌಲಾಸಾಬ್‌ ಇಮಾಂಸಾಬ್‌ ನದಾಫ್ ಅಣ್ಣಿಗೇರಿ (ದಾವಣಗೆರೆ), ಟಿ.ಎಚ್‌.ಹೇಮಲತಾ (ತುಮಕೂರು), ರಾಮೇಶ್ವರಿ ವರ್ಮ (ಮೈಸೂರು). ಉಮಾರಾಣಿ ಬಾರಿಗಿಡದ (ಬಾಗಲಕೋಟೆ), ಚಂದ್ರಕುಮಾರ್‌ ಸಿಂಗ್‌ (ಬೆಂಗಳೂರು).

ಸಿನಿಮಾ-ಕಿರುತೆರೆ
ರೇವತಿ ಕಲ್ಯಾಣ ಕುಮಾರ್‌-ನಟಿ (ಬೆಂಗಳೂರು), ಜ್ಯೂಲಿ ಲಕ್ಷ್ಮೀ -ನಟಿ (ಚನ್ನೈ)  ಜಿ.ಕೆ.ಶ್ರೀನಿವಾಸ ಮೂರ್ತಿ- ನಟ (ಬೆಂಗಳೂರು ಗ್ರಾಮಾಂತರ), ಸಾ.ರಾ.ಗೋವಿಂದು- ನಿರ್ಮಾಪಕ, (ಬೆಂಗಳೂರು), ಸೈಯ್ಯದ್‌ ಸತ್ಯಜಿತ್‌- ನಟ (ಧಾರವಾಡ).

ಸಂಗೀತ-ನೃತ್ಯ
ಕೆ.ಮುರಳೀಧರ ರಾವ್‌ (ದಕ್ಷಿಣ ಕನ್ನಡ), ದ್ವಾರಕೀ ಕೃಷ್ಣಸ್ವಾಮಿ -ಕೊಳಲು (ಬೆಂಗಳೂರು), ಹೈಮಾವತಮ್ಮ -ಗಮಕ (ಬೆಂಗಳೂರು), ಪಂಡಿತ್‌ ನಾರಾಯಣ ಢಗೆ (ರಾಯಚೂರು), ವ್ಹಿ.ಜಿ.ಮಹಾಪುರುಷ-ಸಿತಾರ್‌ (ಬಾಗಲಕೋಟೆ).

ಜಾನಪದ
ತಿಮ್ಮಮ ¾-ಸೋಬಾನೆ ಪದ (ಮಂಡ್ಯ), ಶಾರದಮ್ಮ -ತತ್ವಪದ (ಚಿಕ್ಕಮಗಳೂರು), ಮಲ್ಲಯ್ಯ ಹಿಡಕಲ್‌ -ಭಜನೆ (ಬಾಗಲಕೋಟೆ), ಅಡಿವೆಪ್ಪ ಸಣ್ಣಬೀರಪ್ಪ ಕುರಿಯವರ -ಏಕತಾರಿ (ಹಾವೇರಿ), ಸೋಭಿನಾ ಮೋತೇಸ್‌ ಕಾಂಬ್ರೆಕರ್‌ -ಡಮಾಮಿ (ಉತ್ತರ ಕನ್ನಡ), ಚಿಕ್ಕಮರಿಗೌಡ-ಪೂಜಾ ಕುಣಿತ (ರಾಮನಗರ).

ಯಕ್ಷಗಾನ ಬಯಲಾಟ
ಎಂ.ಆರ್‌.ರಂಗನಾಥ ರಾವ್‌ -ಗೊಂಬೆಯಾಟ (ಬೆಂಗಳೂರು ಗ್ರಾಮಾಂತರ), ಪೇತ್ರಿ ಮಾಧವನಾಯ್ಕ (ಉಡುಪಿ), ಕನ್ನಿಗೋಳಿ ಮುಖ್ಯಪ್ರಾಣ ಶೆಟ್ಟಿಗಾರ (ಉಡುಪಿ), ಸುಜಾತಮ್ಮ- ಪಾರಿಜಾತ (ಬಳ್ಳಾರಿ), ದ್ಯಾನ್ಲಪ್ಪ  ಜಾಂಪ್ಲೆಪ್ಪ ಲಮಾಣಿ-ದೊಡ್ಡಾಟ (ಗದಗ)

ಸಮಾಜ ಸೇವೆ
ತುಳಸಮ್ಮ ಕೆರೂರ (ಗದಗ), ಜಿ.ಎಂ.ಮುನಿಯಪ್ಪ (ಕೋಲಾರ), ಸೋಮಣ್ಣ ಹೆಗ್ಗಡದೇವನಕೋಟೆ (ಚಾಮರಾಜನಗರ), ನಜೀರ್‌ ಅಹಮದ್‌ ಯು.ಶೇಖ್‌ (ಉತ್ತರ ಕನ್ನಡ).

ಸಂಕೀರ್ಣ
ಡಾ.ಎಂ.ಎನ್‌.ವಾಲಿ -ಜಾನಪದ ತಜ್ಞ  (ವಿಜಯಪುರ), ಆರ್‌.ಜೈಪ್ರಸಾದ್‌-ತಾಂತ್ರಿಕ ಸಲಹೆಗಾರರು (ಬೆಂಗಳೂರು), ಡಾ.ಶಕುಂತಲಾ ನರಸಿಂಹನ್‌- ಸಂಗೀತ ತಜ್ಞೆ (ಬೆಂಗಳೂರು), ದೇವರಾಜ ರೆಡ್ಡಿ -ಅಂತರ್ಜಲ ತಜ್ಞ (ಚಿತ್ರದುರ್ಗ)

ಶಿಲ್ಪಕಲೆ-ಚಿತ್ರಕಲೆ
ಧೃವ ರಾಮಚಂದ್ರ ಪತ್ತಾರ -ಶಿಲ್ಪಕಲೆ (ವಿಜಯಪುರ), ಕಾಶೀನಾಥ ಶಿಲ್ಪಿ -ಶಿಲ್ಪಕಲೆ (ಶಿವಮೊಗ್ಗ), ಬಸವರಾಜ್‌ ಎಲ್‌.ಜಾನೆ-ಚಿತ್ರಕಲೆ (ಕಲಬುರಗಿ), ಪಾರ್ವತಮ್ಮ-ಕೌದಿ ಕಲೆ (ಯಾದಗಿರಿ).

ಕೃಷಿ-ಪರಿಸರ
ಎಲ್‌.ಸಿ.ಸೋನ್ಸ್‌-ಪರಿಸರ (ದಕ್ಷಿಣ ಕನ್ನಡ), ಪ್ರೊ.ಜಿ.ಕೆ.ವಿರೇಶ್‌ (ಹಾಸನ), ಕೆ.ಪುಟ್ಟಯ್ಯ (ಮೈಸೂರು), ಡಾ.ಎಂ.ಎ.ಖಾದ್ರಿ (ಬೀದರ್‌).

ಮಾಧ್ಯಮ
ಎಂ.ಎಂ. ಮಣ್ಣೂರ (ಕಲಬುರಗಿ), ಭವಾನಿ ಲಕ್ಷ್ಮೀನಾರಾಯಣ (ಚಿಕ್ಕಬಳ್ಳಾಪುರ), ಈಶ್ವರ ದೈತೋಟ (ಬೆಂಗಳೂರು), ಇಂಧೂಧರ ಹೊನ್ನಾಪುರ (ಬೆಂಗಳೂರು). ಸಂಘ-ಸಂಸ್ಥೆ ಟೀಂ ಯುವ (ಬೀದರ್‌)

ವಿಜ್ಞಾನ-ತಂತ್ರಜ್ಞಾನ
ಜೆ.ಆರ್‌.ಲಕ್ಷ್ಮಣ ರಾವ್‌ (ಮೈಸೂರು),ಪ್ರೊ.ಕೆ.ಮುನಿಯಪ್ಪ (ಚಿಕ್ಕಬಳ್ಳಾಪುರ).

ವೈದ್ಯಕೀಯ
ಡಾ.ಹೆಬ್ರಿ ಸುಭಾಷ್‌ ಬಲ್ಲಾಳ್‌ (ಉಡುಪಿ)ಕ್ರೀಡೆ ಸುರ್ಜಿತ್‌ ಸಿಂಗ್‌ -ಪ್ಯಾರಾಲಂಪಿಕ್‌ (ಬೆಂಗಳೂರು), ಎಸ್‌.ವಿ.ಸುನೀಲ್‌ -ಹಾಕಿ (ಕೊಡಗು). ಕೃಷ್ಣ ಅಮೋಗೆಪ್ಪಾ ನಾಯೊRàಡಿ -ಸೈಕ್ಲಿಂಗ್‌ (ವಿಜಯಪುರ).

ಶಿಕ್ಷಣ
ತೇಜಸ್ವಿ ಕಟ್ಟಿàಮನಿ (ಕೊಪ್ಪಳ).

ಈ ವರ್ಷವೂ ಪ್ರಶಸ್ತಿಯಿಲ್ಲ.
ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿ ಬಯಸಿ ಎರಡು ಬಾರಿ ಕಾನೂನು ಹೋರಾಟ ನಡೆಸಿದ ಹೊರತಾಗಿಯೂ ಈ ವರ್ಷವೂ ಸಾಹಿತಿ ಬಿ.ವಿ.ಸತ್ಯನಾರಾಯಣ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದಿಲ್ಲ.

2014 ಮತ್ತು 2015ನೇ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲಿಸಿದ್ದರೂ ಪ್ರಶಸ್ತಿ ದೊರೆತಿರಲಿಲ್ಲ. 2014ರಲ್ಲಿ ಈ ಕುರಿತು ಸತ್ಯನಾರಾಯಣ ಹೈಕೋರ್ಟ್‌ ಮೆಟ್ಟಿಲೇರಿದಾಗ, ಪ್ರಶಸ್ತಿ ಆಯ್ಕೆ ಸಂದರ್ಭದಲ್ಲಿ ಅವರ ಹೆಸರು ಪರಿಗಣಿಸುವಂತೆ ಕೋರ್ಟ್‌ ಆದೇಶಿಸಿತ್ತು. ಆದರೆ, 2015ರಲ್ಲೂ ಹೆಸರು ಇಲ್ಲದ ಕಾರಣ ಮತ್ತೆ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ತಮಗೆ ಪ್ರಶಸ್ತಿ ದಕ್ಕಿಸಿಕೊಡುವುದರ ಜತೆಗೆ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಗೆ ನಿರ್ದಿಷ್ಟ ಮಾರ್ಗಸೂಚಿ ರಚಿಸುವಂತೆ ಸರ್ಕಾರಕ್ಕೆ ಆದೇಶಿಸಲು ಕೋರಿದ್ದರು.

ಹೈಕೋರ್ಟ್‌ ಸೂಚನೆಯಂತೆ ಮಾರ್ಗಸೂಚಿಗಳನ್ನು ರಚಿಸಿದ್ದು, ಅವುಗಳಿಗೆ ಸರ್ಕಾರ ಅನುಮೋದನೆ ನೀಡದ ಕಾರಣ ಅದು ಅನುಷ್ಠಾನಕ್ಕೆ ಬಂದಿಲ್ಲ. ಹೀಗಾಗಿ ಹಳೆಯ ಮಾನದಂಡ ಆಧರಿಸಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿತ್ತು. ಆಯ್ಕೆ ವೇಳೆ ಸತ್ಯಾನಾರಾಯಣ ಅವರ ಹೆಸರನ್ನು ಪರಿಶೀಲಿಸಲಾಗಿದೆ ಎಂದು ಸರ್ಕಾರ ಕೋರ್ಟ್‌ಗೆ ಹೇಳಿತ್ತು. ಆದರೆ, ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಇಲ್ಲ.
Read more at http://www.udayavani.com/kannada/news/state-news/176039/this-time-61-people-kannada-award#sTUtikSBG4xWvEJv.99

No Comments

Leave A Comment