Log In
BREAKING NEWS >
ಉಗ್ರರ ಬಾ೦ಬ್ ಧಾಳಿಯಲ್ಲಿ ಹತರಾದ ಭಾರತೀಯ ಯೋಧರ ನಿಧನಕ್ಕೆ "ಕರಾವಳಿ ಕಿರಣ ಡಾಟ್ ಕಾ೦" ತೀವ್ರವಾದ ಸ೦ತಾಪವನ್ನು ಸೂಚಿಸಿದೆ.ಮಾತ್ರವಲ್ಲದೇ ಮೃತರ ಮನೆವರರಿಗೆ ದು:ಖವನ್ನು ಸಹಿಸುವ೦ತ ಶಕ್ತಿಯನ್ನು ದೇವರು ಕರುಣಿಸಲೆ೦ದು ಪ್ರಾರ್ಥಿಸುತ್ತದೆ... ...ಪಾಕ್‌ ಉಗ್ರ ನೆಲೆಗಳ ಸಂಪೂರ್ಣ ಧ್ವಂಸ:ವಿಶ್ವ ಹಿಂದೂ ಪರಿಷತ್‌ ಆಗ್ರಹ..

ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಕೆ: ಸಿಎಂ ಸ್ಪಷ್ಟನೆ

hospital-udupiಉಡುಪಿ: ಸರಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಅನಿವಾಸಿ ಭಾರತೀಯ ಉದ್ಯಮಿ ಡಾ| ಬಿ.ಆರ್‌. ಶೆಟ್ಟಿ ಮೇಲ್ದರ್ಜೆಗೇರಿಸಿ ಉಚಿತ ಸೇವೆ ನೀಡಲು ಮುಂದೆ ಬಂದಿದ್ದು, ಇದು ಸರಕಾರಿ ಆಸ್ಪತ್ರೆಯಾಗಿಯೇ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜಿಲ್ಲಾಡಳಿತ, ಆರೋಗ್ಯ ಇಲಾಖೆ, ಬಿಆರ್‌ಎಸ್‌ ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ ಸಹಭಾಗಿತ್ವದಲ್ಲಿ ನಿರ್ಮಾಣವಾಗುತ್ತಿರುವ ಕರ್ನಾಟಕ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ರವಿವಾರ ಆಸ್ಪತ್ರೆ ವಠಾರದಲ್ಲಿ ನೆರವೇರಿಸಿ, ಪುರಭವನದಲ್ಲಿ ನಡೆದ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರಕಾರ ಯಾವತ್ತೂ ಖಾಸಗೀಕರಣ ಪರ ಅಲ್ಲ. ಎಲ್ಲವನ್ನೂ ಸರಕಾರದಿಂದ ಮಾಡಲಿಕ್ಕೆ ಆಗೋದಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಮಾಡುತ್ತಿದ್ದೇವೆ ಎಂದರು.

ರಾಜಕೀಯವೂ ಇರತ್ತೆ
ಇದು ಸರಕಾರದ ಕಾರ್ಯಕ್ರಮ. ಮಾಹಿತಿ ಕೊರತೆಯಿಂದ ಕೆಲವರು ಪ್ರತಿಭಟನೆ ನಡೆಸುತ್ತಾರೆ. ಕೆಲವರಿಗೆ ಮಾಹಿತಿ ಇದ್ದರೂ ರಾಜಕೀಯ ಕಾರಣಕ್ಕೆ ಪ್ರತಿಭಟನೆ ಮಾಡುತ್ತಾರೆ. ಯಾರೋ ಒಬ್ಬರು ಪತ್ರಕರ್ತರು “ಸರಕಾರಕ್ಕೆ ಸಾಮರ್ಥ್ಯ ಇಲ್ಲವೆ?’ ಎಂದು ಕೇಳಿದರು. ಸರಕಾರಕ್ಕೆ ಸಾಮರ್ಥ್ಯವಿದೆ. 1.63 ಲ. ಕೋ. ರೂ. ವರ್ಷಕ್ಕೆ ಖರ್ಚು ಮಾಡುಧಿತ್ತೇವೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಸೇರಿ 6ರಿಂದ 7,000 ಕೋ. ರೂ. ಖರ್ಚು ಮಾಡುತ್ತಿದ್ದೇವೆ. ಇದೆಲ್ಲ ಯಾರಿಗಾಗಿ ಮಾಡುತ್ತಿದ್ದೇವೆ? 70 ಹಾಸಿಗೆಗಳ ಆಸ್ಪತ್ರೆ 200 ಹಾಸಿಗೆಗಳಿಗೆ ವಿಸ್ತರಣೆಯಾಗುವುದಾದರೆ ಏಕೆ ವಿರೋಧ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಇದು ಬೇಡವಾ?
ಬಿ.ಆರ್‌. ಶೆಟ್ಟಿ ಇದೇ ಊರಿನಲ್ಲಿ ಹುಟ್ಟಿ ಬೆಳೆದವರು. ಮಣ್ಣಿನ ಋಣ ತೀರಿಸಲು ತಂದೆ ತಾಯಿ ಹೆಸರು ಇಡುವ ಪ್ರಸ್ತಾವ ಮಾಡಿದರು. 400 ಹಾಸಿಗೆಗಳ ಸೂಪರ್‌ ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ತಾಯಿ ಮಕ್ಕಳ ಆಸ್ಪತ್ರೆಯ ರೋಗಿಗಳಿಗೂ ಉಚಿತಧಿವಾಗಿ ಚಿಕಿತ್ಸೆ ದೊರಕುತ್ತದೆ. ಇದು ಬೇಡವಾ? ಎಂದರು.

ಖಾಸಗಿ ಆಸ್ಪತ್ರೆ ನಿಯಂತ್ರಣಕ್ಕೆ ವರದಿ 
ಖಾಸಗಿ ಆಸ್ಪತ್ರೆಗಳ ಸೌಲಭ್ಯ ಬಡಜನರಿಗೂ ದೊರಕಬೇಕೆಂಬುದು ನಮ್ಮ ಉದ್ದೇಶ. ಖಾಸಗಿ ಆಸ್ಪತ್ರೆಗಳನ್ನು ಹೇಗೆ ನಿಯಂತ್ರಿಸಬೇಕೆಂದು ಎಂಟು ವಾರದೊಳಗೆ ವರದಿ ಕೊಡಲು ನಿವೃತ್ತ ನ್ಯಾಯಾಧೀಶ ನ್ಯಾ| ವಿಕ್ರಮ್‌ ಸೇನ್‌ ನೇತೃತ್ವದ ಸಮಿತಿಗೆ ತಿಳಿಸಿದ್ದೇನೆ. ಸರಕಾರಕ್ಕೆ ಸಾಮರ್ಥ್ಯವಿದೆ. ಆದರೆ ಕಾವೇರಿ ನೀರಿನಂತೆ ಹಣ ಸುರಿಯುವುದಿಲ್ಲ. ಇಲ್ಲಿ ಉತ್ತಮ ಆಸ್ಪತ್ರೆ ಸ್ಥಾಪಿಸಿ ಬಡವರಿಗೆ ಉತ್ತಮ ಸೌಲಭ್ಯ ದೊರಕಲು, ಎಲ್ಲ ಸರಕಾರಿ ವಿಮಾ ಯೋಜನೆಧಿಗಳ ಸೌಲಭ್ಯ ದೊರಕಿಸಿಕೊಡಲು ಇಚ್ಛಿಸಿದ್ದೇವೆ ಎಂದು ಆರೋಗ್ಯ ಸಚಿವ ರಮೇಶ್‌ಕುಮಾರ್‌ ಹೇಳಿದರು.

ಜಿಲ್ಲಾಸ್ಪತ್ರೆಗೆ ಹಾಜಿ ಅಬ್ದುಲ್ಲಾ ಹೆಸರು
ಸರಕಾರ ಯಾವ ಕೆಲಸ ಮಾಡಿದರೂ ಬಡವರ ಪರವಾಗಿ ಮಾಡುತ್ತದೆ. ಕೆಲವರಿಗೆ ಎಷ್ಟು ಹೇಳಿದರೂ ತಿಳಿಯುವುದಿಲ್ಲ. 200 ಬೆಡ್‌ ಆಸ್ಪತ್ರೆ ಒಂದು ವರ್ಷದೊಳಗೆ ನಿರ್ಮಾಣವಾಗಿ ಸಿದ್ದರಾಮಯ್ಯನವರೇ ಉದ್ಘಾಟನೆ ಮಾಡುತ್ತಾರೆ. ಜಿಲ್ಲಾಸ್ಪತ್ರೆಗೆ ಹಾಜಿ ಅಬ್ದುಲ್ಲಾ ಆಸ್ಪತ್ರೆ ಎಂದು ಹೆಸರಿಡಲಾಗುವುದು ಎಂದು ಸಚಿವ ಪ್ರಮೋದ್‌ ಮಧ್ವರಾಜ್‌ ಸ್ವಾಗತ ಭಾಷಣದಲ್ಲಿ ತಿಳಿಸಿದರು.

ತಂದೆ-ತಾಯಿ ಆತ್ಮಕ್ಕೆ ಶಾಂತಿ 
ನನಗೆ ಹಣ ಬೇಡ. ತಂದೆತಾಯಿ ಆತ್ಮಕ್ಕೆ ಶಾಂತಿ ಸಿಕ್ಕಿದರೆ ಸಾಕು. ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಆಸ್ಪತ್ರೆಯ ರೂವಾರಿ ಡಾ| ಬಿ.ಆರ್‌. ಶೆಟ್ಟಿ ಭರವಸೆ ನೀಡಿದರು.

ಮುಖ್ಯಮಂತ್ರಿ ಅವರನ್ನು ಡಾ| ಬಿ.ಆರ್‌. ಶೆಟ್ಟಿ ಕೃಷ್ಣ ವಿಗ್ರಹದ ಸ್ಮರಣಿಕೆ ನೀಡಿ ಗೌರವಿಸಿದರು.
ಶಾಸಕರಾದ ಐವನ್‌ ಡಿ’ಸೋಜಾ, ಅಭಯಚಂದ್ರ ಜೈನ್‌, ಕೆ. ಗೋಪಾಲ ಪೂಜಾರಿ, ಕೆ. ಪ್ರತಾಪಚಂದ್ರ ಶೆಟ್ಟಿ, ನಗರಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹ ಮೂರ್ತಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌, ಚಂದ್ರಕಲಾ ಆರ್‌. ಶೆಟ್ಟಿ, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಗೋವಿಂದರಾಜ್‌, ಜಿಲ್ಲಾಧಿಕಾರಿ ಡಾ| ಟಿ. ವೆಂಕಟೇಶ್‌, ಜಿ.ಪಂ. ಸಿಇಒ ಪ್ರಿಯಾಂಕ ಮೇರಿ ಫ್ರಾನ್ಸಿಸ್‌,
ಎಸ್ಪಿ ಕೆ.ಟಿ. ಬಾಲಕೃಷ್ಣ, ಜಿಲ್ಲಾ ಸರ್ಜನ್‌ ಡಾ|ಮಧುಸೂದನ ನಾಯಕ್‌, ಜಿಲ್ಲಾ ಆರೋಗ್ಯಾ ಧಿಕಾರಿ ಡಾ| ರೋಹಿಣಿ, ಬಿಆರ್‌ಎಸ್‌ ಸಂಸ್ಥೆ ಪರವಾಗಿ ಆರ್ಕಿಟೆಕ್ಟ್ ಶ್ರೀನಾಗೇಶ್‌ ಹೆಗ್ಡೆ, ಪ್ರಧಾನ ವ್ಯವಸ್ಥಾಪಕ ಕುಶಲ್‌ ಶೆಟ್ಟಿ ಉಪಸ್ಥಿತರಿದ್ದರು.
ಕುದಿ ವಸಂತ ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು.

ಅವ್ರು ಕಾಂಗ್ರೆಸ್‌ನಲ್ಲಿದ್ದಾರಾ? 
ನಿಮ್ಮ ಪಕ್ಷದವರು ಪ್ರತಿಭಟನೆ ಮಾಡುತ್ತಿದ್ದಾರೆಂದು ಒಬ್ಬರು ಹೇಳಿದರು. ಅವ್ರು ನಮ್ಮ ಪಕ್ಷದಲ್ಲಿದ್ದಾರಾ ಎಂದು ನೋಡಬೇಕಾಗಿದೆ. ಬಿ.ಆರ್‌. ಶೆಟ್ಟರೇ, ಕೂಡಲೇ ಕಟ್ಟಡ ಕಟ್ಟಿ 200 ಹಾಸಿಗೆಗಳಲ್ಲಿ ಉಚಿತ ಸೇವೆ ನೀಡಿ. ಆಗ ಎಲ್ಲರೂ ಬಾಯಿ ಮುಚ್ಚಿಕೊಳ್ಳುತ್ತಾರೆ.

– ಸಿದ್ದರಾಮಯ್ಯ

ಪ್ರತಿಭಟಿಸುವವರಿಗೆ ಇದೇಕೆ ಕಾಣುವುದಿಲ್ಲ?
ವರ್ಷಕ್ಕೆ ಸುಮಾರು 5,000 ವೈದ್ಯ ಪದವೀಧರರು ರಾಜ್ಯದಲ್ಲಿ ಕಲಿತು ಹೊರಬರುತ್ತಾರೆ. ಇವರಾರೂ ಸರಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಲು ಮುಂದೆ ಬರುತ್ತಿಲ್ಲ. 1 ಲ. ರೂ.,  1.25 ಲ. ರೂ. ವೇತನ ಕೊಡುತ್ತೇನೆಂದು ಹೇಳಿದರೂ ಹಳ್ಳಿಗಳಿಗೆ ಹೋಗಲು ಇವರು ತಯಾರಿಲ್ಲ.
ನಾನು ಇಂದು ಮಂಗಳೂರಿನ ಲೇಡಿಗೋಶನ್‌ ಮತ್ತು ವೆನಾÉಕ್‌ ಆಸ್ಪತ್ರೆಗೆ ಹೋಗಿದ್ದೆ. ಅಲ್ಲಿನ ಸ್ಥಿತಿ ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ನಾವೇನು ಬಿ.ಆರ್‌. ಶೆಟ್ಟಿ ಅವರ ಜೊತೆ ರಾತ್ರಿ ರಿಯಲ್‌ ಎಸ್ಟೇಟ್‌ ವ್ಯಾಪಾರ ಮಾಡಿ ಜಾಗ ಮಾರಾಟ ಮಾಡಿದ್ದೇವಾ? ಹೋರಾಟಕ್ಕಾಗಿ ಹೋರಾಟ ಮಾಡಬಾರದು. 40 ವರ್ಷ ಖಾಸಗಿಯವರ ವಿರುದ್ಧ ಕೆಲಸ ಮಾಡಿಕೊಂಡು ಬಂದವ. ನಮಗೆ ವ್ಯಾಪಾರ ಬೇಕಾ? ಬೆಂಗಳೂರು ಜಯದೇವ ಆಸ್ಪತ್ರೆಯಲ್ಲಿ ಒಂದು ಸ್ಟಂಟ್‌ ಹಾಕಿಸಲು 65,000 ರೂ. ತಗಲಿದರೆ, ಖಾಸಗಿ ಆಸ್ಪತ್ರೆಯಲ್ಲಿ 3 ಲ. ರೂ. ತೆಗೆದುಕೊಳ್ಳುತ್ತಾರೆ. ಒಂದು ವೈದ್ಯಕೀಯ ಸೀಟಿಗೆ 4 ಕೋ. ರೂ. ಶುಲ್ಕವಿದೆ. ಇದನ್ನೆಲ್ಲಾ ಯಾರೂ ಕೇಳುವವರಿಲ್ಲ. ಸಂಘಟನೆಗಳಿಲ್ಲವೆ?
    – ರಮೇಶ್‌ ಕುಮಾರ್‌, ಆರೋಗ್ಯ ಸಚಿವರು

No Comments

Leave A Comment