Log In
BREAKING NEWS >
ಉಡುಪಿ ನಗರದಲ್ಲಿ ಕುಡಿಯುವ ನೀರಿನ ಅಭಾವ ಸ೦ಭವ...ನೀರನ್ನು ಪೋಲು ಮಾಡದೇ ನೀರನ್ನು ಮಿತವಾಗಿ ಬಳಸುವ೦ತೆ ಸಮಸ್ತ ನಾಗರಿಕರಲ್ಲಿ ಕರಾವಳಿಕಿರಣ ಡಾಟ್ ಕಾ೦ ಬಳಗ ವಿನ೦ತಿ

2047ರ ವೇಳೆ ಮುಸ್ಲಿಂ ರಾಷ್ಟ್ರ: ರುದ್ರೇಶ್‌ ಹಂತಕರ ದುರುದ್ದೇಶ!

58762ಬೆಂಗಳೂರು : ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಹಂತರ ಬೆಚ್ಚಿ ಬಿಳಿಸುವ ಕೆಲ ವಿಚಾರಗಳನ್ನು ವಿಚಾರಣೆಯ ವೇಳೆ ಬಹಿರಂಗ ಪಡಿಸಿದ್ದು, 2047 ರ ಸ್ವಾತಂತ್ರ್ಯೋತ್ಸವದ ವೇಳೆ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ದುರುದ್ದೇಶ ಅವರದ್ದಾಗಿತ್ತು ಎಂದು ಉನ್ನತ ಪೊಲೀಸ್‌ ಮೂಲಗಳು ತಿಳಿಸಿರುವುದಾಗಿ  ಮಾಧ್ಯಮಗಳು ವರದಿ ಮಾಡಿವೆ.

ಬಂಧಿತ ಆರೋಪಿಗಳಾದ ಜೆ.ಸಿ.ನಗರದ ಮೊಹಮ್ಮದ್‌ ಸಾದಿಕ್‌ ಅಲಿಯಾಸ್‌ ಮಹಮದ್‌ ಮಜರ್‌, ಆರ್‌.ಟಿ.ನಗರದ ಮೊಹಮ್ಮದ್‌ ಮುಜೀಬುಲ್ಲಾ ಅಲಿಯಾಸ್‌ ಮೌಲ, ಆಸ್ಟಿನ್‌ ಟೌನ್‌ನ ವಾಸೀಂ ಹಾಗೂ ಕೆ.ಜಿ.ಹಳ್ಳಿಯ ಗೋವಿಂದಪುರದ ಇರ್ಫಾನ್‌ ಅವರನ್ನು ಪೊಲೀಸರು ತೀವ್ರವಾಗಿ ವಿಚಾರಣೆಗೊಳಪಡಿಸುತ್ತಿದ್ದಾರೆ.

ರುದ್ರೇಶ್‌ ಮಾತ್ರವಲ್ಲದೆ ಮೈಸೂರು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಟಾರ್ಗೆಟ್‌ ಆಗಿದ್ದು, 2 ಬಾರಿ ಹತ್ಯೆಗೆ ಪ್ಲ್ರಾನ್‌ ರೂಪಿಸಿದ್ದರು ಎಂದು ತನಿಖೆ ವೇಳೆ ಬಾಯ್‌ ಬಿಟ್ಟಿದ್ದಾರೆ.

ಹಿಂದೂ ಮುಖಂಡರು ಮತ್ತು ಬಿಜೆಪಿ ನಾಯಕರು ಟಾರ್ಗೆಟ್‌ ಆಗಿದ್ದು, ಬೆಂಗಳೂರಿನ ಕೆಲ ವಾರ್ಡ್‌ಗಳಲ್ಲಿ ಬೆಂಬಲಿಗರನ್ನೂ ಹೊಂದಿದ್ದಾರೆ ಎಂದು ಹೇಳಲಾಗಿದ್ದು ಈ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದು ಹಲವರನ್ನು ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

2047 ರ ವೇಳೆಗೆ ಅಂದರೆ 100 ನೇ ಸ್ವಾತಂತ್ರ್ಯ ಸಂಭ್ರಮದ ವೇಳೆ ಆರ್‌ಎಸ್‌ಎಸ್‌ ಮತ್ತು ಹಿಂದೂ ಸಂಘಟನೆಗಳನ್ನು ನಿರ್ನಾಮ ಮಾಡಿ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಗುರಿ ಅವರದ್ದಾಗಿತ್ತು ಎಂದು ವರದಿಯಾಗಿದೆ.

ನಾಲ್ವರೂ ಕಳೆದ 5 ವರ್ಷಗಳಿಂದ ಪಿಎಫ್ಐ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.

No Comments

Leave A Comment