Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಹಿಜಬ್ ಕಡ್ಡಾಯ: ಏರ್ ಗನ್ ಸ್ಪರ್ಧೆಯಿಂದ ಹಿಂದೆ ಸರಿದ ಹೀನಾ ಸಿಧು

hina-newನವದೆಹಲಿ: ಇರಾನ್ ನಲ್ಲಿ ನಡೆಯುವ ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಹಿಜಬ್ ಧರಿಸುವುದು ಕಡ್ಡಾಯ ಮಾಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸದಿರಲು ಭಾರತದ ಏಸ್ ಶೂಟರ್ ಹೀನಾ ಸಿಧು ನಿರ್ಧರಿಸಿದ್ದಾರೆ.

ಡಿಸೆಂಬರ್ ನಲ್ಲಿ ಟೆಹ್ರಾನ್ ನಲ್ಲಿ ಏಷ್ಯನ್ ಏರ್ ಗನ್ ಶೂಟಿಂಗ್ ಚಾಂಪಿಯನ್ ಶಿಪ್ ನಡೆಯಲಿದೆ. ಮಹಿಳಾ ಸ್ಪರ್ಧಿಗಳೆಲ್ಲ ಡ್ರೆಸ್ ಕೋಡ್ ಪಾಲಿಸಲೇಬೇಕು, ಅದರಂತೆ ಹಿಜಬ್ ಧರಿಸುವುದು ಕಡ್ಡಾಯ ಅಂತಾ ಹೇಳಲಾಗಿದೆ.

ಹಾಗಾಗಿ ಹಿಜಬ್ ಧರಿಸಲು ನಿರಾಕರಿಸಿರುವ ಹೀನಾ, ಸ್ಪರ್ಧೆಯಿಂದ್ಲೇ ಹಿಂದೆ ಸರಿದಿದ್ದಾರೆ.ಹಿಜಬ್ ಧರಿಸಲು ಪ್ರವಾಸಿಗರಿಗೆ ಅಥವಾ ವಿದೇಶಿ ಅತಿಥಿಗಳಿಗೆ ಒತ್ತಾಯಿಸುವುದು ಕ್ರೀಡಾ ಸ್ಪೂರ್ತಿಗೆ ವಿರುದ್ಧವಾದದ್ದು. ಅದು ಇಷ್ಟವಾಗದ ಕಾರಣ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಅಂತಾ ಹೀನಾ ತಿಳಿಸಿದ್ದಾರೆ.

ನಾನು ನನ್ನ ಧರ್ಮದ ಸಂಪ್ರದಾಯವನ್ನು ಪಾಲಿಸುತ್ತೇನೆ, ಒತ್ತಾಯಪೂರ್ವಕವಾಗಿ ಬೇರೆ ಧರ್ಮದ ನಂಬಿಕೆಗಳನ್ನು ಪಾಲಿಸುವಂತೆ ಒತ್ತಾಯಿಸಿದ್ರೆ ಅಲ್ಲಿ ನಾನು ಸ್ಪರ್ಧಿಸುವುದೇ ಇಲ್ಲ ಅಂತಾ ದೃಢವಾಗಿ ಹೇಳಿದ್ದಾರೆಈ ವಿಷಯವನ್ನು ರಾಜಕೀಯಕರಣಗೊಳಿಸಬಾರದು  ಎಂದು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

No Comments

Leave A Comment