Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

099
ನವದೆಹಲಿ:
ಭಾರತ-ಚೀನಾ ಗಡಿಯಲ್ಲಿ ಯೋಧರಿಗೆ ಸಿಹಿ ಹಂಚುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಳಕಿನ ಹಬ್ಬ ದೀಪಾವಳಿಯನ್ನು ಭಾನುವಾರ ಆಚರಿಸಿದ್ದಾರೆ.30modi-itbp3

ಹಿಮಾಚಲ ಪ್ರದೇಶದ ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದ ಭಾರತ-ಚೀನಾ ಗಡಿಯಲ್ಲಿರುವ ಮಾಣಾ ಎಂಬ ಕುಗ್ರಾಮಕ್ಕೆ ಪ್ರಧಾನಮಂತ್ರಿ ನರೇಂದಿಯವರು ಇಂದು ಭೇಟಿ ನೀಡಿದರು. ಈ ವೇಳೆ ಯೋಧರಿಗೆ ಸಿಹಿ ಹಂಚಿ, ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ಬಾರಿಯ ದೀಪಾವಳಿಯನ್ನು ವಿಶ್ವದ ಅತೀ ಎತ್ತರದ ಯುದ್ಧಭೂಮಿಯಾಗಿರುವ ಸಿಯಾಚಿನ್ ನಲ್ಲಿ ಯೋಧರೊಂದಿಗೆ ಆಚರಿಸಿದ್ದರು. ಎರಡನೇ ಬಾರಿಯ ದೀಪಾವಳಿಯನ್ನು ಪಂಜಾಬ್ ನ ಪಾಕಿಸ್ತಾನ ಗಡಿಯಲ್ಲಿ ಆಚಸಿದ್ದರು.995

ಇದೀಗ ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಕೊನೆಯ ಊರು ಮಾಣಾ ಎಂಬ ಕುಗ್ರಾಮದಲ್ಲಿ ಆಚರಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೊಂದಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಜೋವಲ್ ಅವರು ಇದ್ದರು.ಯೋಧರೊಂದಿಗಿನ ಸಂತಸದ ಕ್ಷಣಗಳನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಟ್ವಿಟರ್ ನಲ್ಲಿ ಜನತೆಯೊಂದಿಗೆ ಹಂಚಿಕೊಂಡಿದ್ದಾರೆ.

ಧೈರ್ಯಶಾಲಿ ಐಟಿಬಿಪಿ ಅಧಿಕಾರಿಗಳು ಹಾಗೂ ಯೋಧರೊಂದಿಗೆ ಸಮಯವನ್ನು ಕಳೆದ. ಜೈ ಜವಾನ್! ಜೈ ಕಿಸಾನ್! ಎಂದು ಹೇಳಿದ್ದಾರೆ.

No Comments

Leave A Comment