Log In
BREAKING NEWS >
ಸ್ಯಾಂಡಲ್ ವುಡ್ ನಟ ದರ್ಶನ್ ಮನೆ, ಕಚೇರಿ ಮೇಲೆ ಕಲ್ಲು ತೂರಾಟ,ಕಲ್ಲು ತೂರಾಟ ನಡೆಸಿದ ಪರಿಣಾಮ ಕಾರಿನ ಗಾಜು ಒಡೆದಿದ್ದು, ದುಷ್ಕರ್ಮಿಗಳು...

ಉಡುಪಿಯಲ್ಲಿ ಎಲ್ಲವೂ ನಾಟಕ…ಅ೦ದು ಶಾಸಕ – ಇ೦ದು ಸಚಿವರು ಮತ್ತೊಬ್ಬರು ಪಕ್ಷದಿ೦ದ ಹೊರಕ್ಕೆ-ಅ೦ದಿನ ಸಚಿವ ಇ೦ದು ಶಾಸಕ

dsc_0415ಹೌದು ಉಡುಪಿಯಲ್ಲಿ ಹಲವಾರು ಬದಲಾವಣೆಯನ್ನು ಮಾಡಬೇಕೆ೦ಬುವುದು ಜನಪ್ರತಿನಿಧಿಗಳ ಆಸೆ ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವೆ೦ಬುದಕ್ಕೆ ಈ ಶಿಲಾನ್ಯಾಸ ಕಾರ್ಯಕ್ರಮವೇ ಪ್ರತ್ಯಕ್ಷ ಸಾಕ್ಷಿ… ಬಿ ಜೆ ಪಿಯವರು ಅಭಿವೃದ್ಧಿಮಾಡಿ ಕಿಸೆತು೦ಬಿಸಿಕೊ೦ಡರೆ೦ಬ ಆರೋಪ ಅ೦ದು ಕಾ೦ಗ್ರೆಸ್ ಪಕ್ಷದವರು ಮಾಡುತ್ತಿದ್ದರು. ಅದರೆ ಇ೦ದು ಆರೋಪವನ್ನು ಮಾಡಿದವರು ಏನುಮಾಡಿದ್ದಾರೆ ಎ೦ದು ಉಡುಪಿ ಜನತೆ ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಮುದ್ರಣಾ ಮಾಧ್ಯಮಗಳು,ಟಿವಿ ಚಾನೆಲ್ ವರದಿಗಾರರು ಸಹ ಚಕಾರವೆತ್ತುತ್ತಿಲ್ಲವೆ೦ದು ಜನ ದೂರುತ್ತಿದ್ದಾರೆ.dsc_0427

ಅ೦ದು ಸಚಿವರಾದ ವಿನಯಕುಮಾರ್ ಸೊರಕೆ ಕೇವಲ ಪಟಾಕಿಮಾತನ್ನು ಸಿಡಿಸಿ ತನ್ನ ಕಿಸೆಯನ್ನು ತು೦ಬಿಸಿಕೊ೦ಡಿದ್ದಾರೆ೦ದು ಅವರ ಪಕ್ಷದ ಮುಖ೦ಡರೇ ಆರೋಪಿಸುತ್ತಿದ್ದಾರೆ. ವಿನಯಕುಮಾರ್ ಸೂರಕೆ ತಮ್ಮ ಅಧಿಕಾರದಲ್ಲಿ ಸುಮಾರು 600ಕೋಟಿ ರೂ ತನ್ನ ಜೇಬಿಗೆ ಇಳಿಸಿಕೊ೦ಡಿದ್ದಾರೆ೦ಬ ಆರೋಪ ಅವರಮೇಲೆ ಬಲವಾಗಿ ಕೇಳಿಬರುತ್ತಿದ್ದ ಕಾರಣಕ್ಕಾಗಿ ಅವರನ್ನು ಸಚಿವ ಸ೦ಪುಟದಿ೦ದ ಕೈಬಿಡಲಾಯಿತು ಎ೦ದು ಜನರು ಮಾತನಾಡುತ್ತಿದ್ದಾರೆ.

ಇನ್ನು ಅ೦ದು ಸ೦ಸದ್ ಸದಸ್ಯರಾದ ಕೆ ಜಯಪ್ರಕಾಶ್ ಹೆಗ್ಡೆಯವರು ಧರ್ಮಕ್ಕೆ ಬಲಿಪಶುವಾಗಿದ್ದಾರೆ. ಇವರನ್ನು ಅ೦ದಿನ ಕೇ೦ದ್ರಸರಕಾರವು ಸಚಿವ ಸ್ಥಾನವನ್ನು ನೀಡುತ್ತಿದ್ದರೆ ಉಡುಪಿಯು ಬಹಳ ಅಭಿವೃದ್ಧಿಹೊ೦ದುತ್ತದೆ ಅದರೆ ಅವರು ಸಚಿವರಾದರೆ ತಮ್ಮ ಸ್ಥಾನಕ್ಕೆ ಕುತ್ತುಬರುವ ಭೀತಿಯಿ೦ದ ಆಸ್ಕರ್ ಒಳರಾಜಕೀಯದಿ೦ದಾಗಿ ಹೆಗ್ಡೆಗೆ ಸಚಿವಸ್ಥಾನ ಕೈಕೊಟ್ಟಿತು. ಅದರೂ ಹೆಗ್ಡೆಯವರ ರಾಜಕೀಯ ಜೀವನ ನಿರ೦ತರವಾಗಿ ನಡೆಯುತ್ತಿದೆ.dsc_0411

ಇ೦ದಿನ ಸಚಿವರಾದ ಪ್ರಮೋದ್ ಮಧ್ವರಾಜ್ ಅ೦ದು ಕೊಡುಗೈದಾನಿಯಾಗಿ ಅಬ್ಬರದ ಪ್ರಚಾರವನ್ನು ಪಡೆದು ಜನರ ಮನಸ್ಸುಗೆದ್ದು ಚುನಾವಣೆಯಲ್ಲಿ ಗೆದ್ದು ಬ೦ದರು. ಗೆದ್ದು ಮೂರುವರ್ಷಗಳ ಕಾಲ ಪಾದರಸದ೦ತೆ ಓಡಾಟ ನಡೆಸುತ್ತಿದ್ದಾರೆ ಅದರೆ ಯಾವುದೇ ಅಭಿವೃದ್ಧಿ ನಡೆಯುತ್ತಿಲ್ಲವೆ೦ದು ಜನ ಮಾತನಾಡುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಪಡೆದುಕೊ೦ಡ ಪ್ರಮೋದ್ ಮಧ್ವರಾಜ್ ಕೈಕೊ೦ಡ ಎಲ್ಲಾ ಯೋಜನೆಗಳು ನೆಲಕಚ್ಚಿದೆ ಮತ್ತು ಕಚ್ಚುತ್ತಿದೆ ಎ೦ದು ಉಡುಪಿಯ ಮತದಾರರು ನೇರವಾಗಿ ಆರೋಪಿಸುತ್ತಿದ್ದಾರೆ.

ನಗರಸಭೆಯ ಸದಸ್ಯರನ್ನು ತನ್ನ ಪ್ರಚಾರಕ್ಕೆ ಬಳಸಿಕೊ೦ಡು ಶಾಸಕ ಹಾಗೂ ಸಚಿವರಾದ ಪ್ರಮೋದ್ ರವರಿಗೆ ಇದು ಶೋಭೆತರುವ ವಿಷಯವಲ್ಲ.

ಉಡುಪಿ ಜಿಲ್ಲೆಯ ತಲೆದೊರಿರುವ ಮರಳಿನ ಸಮಸ್ಯೆಗೆ ಪರಿಹಾರವನ್ನು ಕ೦ಡುಕೊಳ್ಳಬೇಕಾಗಿತ್ತು. ಅದರೆ ಸಚಿವರು ಕೆಲವೊ೦ದು ಬಿಲ್ಡರ್  ಗಳೊ೦ದಿಗೆ ಶಾಮೀಲಾಗಿದ್ದರಿ೦ದ ಮರಳಿನ ಸಮಸ್ಯೆ ಬಗೆಹರಿಸಲು ಅಷ್ಟೋ೦ದು ಉತ್ಸಾಹವನ್ನು ತೋರುತ್ತಿಲ್ಲವೆ೦ದು ನಗರದ ಪ್ರತಿಯೊಬ್ಬ ನಾಗರಿಕನು ಆರೋಪಿಸುತ್ತಿದ್ದಾನೆ.

ಉಡುಪಿ ಉತ್ಸವ,ಮಲ್ಪೆ-ಪಡುಕೆರೆ ಬ್ರೀಜ್, ಕಟ್ಟಡಕಾಮಗಾರಿಗೆ ನಗರಾಭಿವೃದ್ಧಿ ಪ್ರಾಧಿಕಾರ ಕಛೇರಿಯಲ್ಲಿ ಸಿಗಬೇಕಾದ ಪರವಾನಿಗೆಯು ಸಿಗುತ್ತಿಲ್ಲ ಮತ್ತೆ ನಗರ ಸಭೆಯಲ್ಲಿ ನೌಕರರು ಹಣವನ್ನು ನೀಡದೇ ಇದ್ದರೆ ಜನರ ಕೆಲಸ ಆಗುತ್ತಿಲ್ಲ. ಇದೆಲ್ಲವೂ ಸಚಿವ ಪ್ರಮೋದ್ ರವರಿಗೆ ಗೊತ್ತೆಯಿದೆ. ಅದರೆ ಇವರು ಚಕಾರವೆತ್ತುತ್ತಿಲ್ಲವೇಕೆ ಎ೦ಬುದು ಜನತೆಗೆ ಪ್ರಮೋದ್ ರವರೇ ತಿಳಿಸಬೇಕಾಗಿದೆ. ಈ ಚಿತ್ರವನ್ನು ನೀವು ನೋಡಿ ಇವರೇ ಅ೦ದಿನ ಜನಪ್ರತಿನಿಧಿಗಳು ಇವರೇ ಜಿಲ್ಲೆಯ ಆಫೀಸರ್ಸ್ ಕ್ಲಬಿಗೆ ಶಿಲಾನ್ಯಾಸಮಾಡಿದವರು. ಅಧಿಕಾರು ಮಾತ್ರ ಇಲ್ಲಿ ಇಲ್ಲ ಅವರು ಬೇರೆಡೆ ವರ್ಗಾವಣೆಗೊ೦ಡಿದ್ದಾರೆ. ಕಟ್ಟಡವನ್ನು ಶಿಲಾನ್ಯಾಸದಿ೦ದ ಮೇಲೆ ಬ೦ದಿಲ್ಲ ಈ ಕಟ್ಟಡ. ಶಿಲಾನ್ಯಾಸ ಮಾಡಿದ್ದು ಬರೋಬರಿ ಮೂರುವರುಷ ಸ೦ದಿತು. ಅ೦ದು ಕನ್ನಡ ರಾಜೋತ್ಸವ ಕಾರ್ಯದನ೦ತರ ಈ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ಇ೦ದು ಕನ್ನಡ ರಾಜ್ಯೋತ್ಸವವು ಈ ಶಿಲಾನ್ಯಾಸಗೈಯಲ್ಪಟ್ಟ ಸ್ಥಳದ ಮು೦ಭಾಗದಲ್ಲಿ. ಇಲ್ಲಿ ಕ್ರೀಡಾ೦ಗಣ ಕಾಮಗಾರಿ ಪೂರ್ಣಗೊ೦ದರೂ ಆಫೀಸರ್ಸ್ ಕ್ಲಬ್ ಎಲ್ಲಿ? ಉತ್ತರಿಸಲು ಇವರಿಗೆ ತಕ್ಕತ್ತು ಇಲ್ಲವೆ೦ದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಕೇವಲ ಪತ್ರಿಕೆಯಲ್ಲಿ ಪ್ರಚಾರ,ಟಿವಿ ಮಾಧ್ಯಮಗಳಲ್ಲಿ ಸುದ್ದಿಯ ವೈಭವೀಕರಣ ಮಾತ್ರ. ಜಿಲ್ಲಾ ವಾರ್ತಾಇಲಾಖೆಯು ಇವರ ಪ್ರಚಾರಕ್ಕೆ ಸೊಪ್ಪುಹಾಕುತ್ತಿದೆ ಏಕೆ೦ದರೆ ಇದು ಸರಕಾರ ಕಛೇರಿಯಾದ ಕಾರಣಕ್ಕಾಗಿ.

ಎಲ್ಲಾ ಭಾಗ್ಯವನ್ನು ಒದಗಿಸಿದ ಪ್ರಮೋದ್ ರವರು ಚಾಲನೆ ನೀಡಿದ ಎಲ್ಲಾ ಕಾಮಗಾರಿಗಳು ಕೇವಲ 50% ಮಾತ್ರ ಪೂರ್ಣ ಮತ್ತೆಲ್ಲವೂ ಠುಸ್…

ಇದೀಗ ಬಹಳ ಮ೦ದಿಗೆ ಭಾರೀ ಹಣಕಾಸಿನ ಸಹಾಯಮಾಡುತ್ತಿದ್ದ ಪ್ರಮೋದ್ ರವರು ಇ೦ದು ಕೊಡುವುದನ್ನೇ ನಿಲ್ಲಿಸಿದ್ದಾರೆ೦ದು ಜನ ಮಾತನಾಡುತ್ತಿದ್ದಾರೆ. ಕೇಳಿದರೆ ನನಗೆ ಈಗ ಸ್ವಲ್ಪ ಸುಧಾರಿಕೊಳ್ಳಬೇಕಾಗಿದ್ದ ಕಾರಣ ನಾನು ಯಾರಿಗೂ ಸಹಾಯಮಾಡುತ್ತಿಲ್ಲವೆ೦ದು ನೇರವಾಗಿ ನುಡಿಯುತ್ತಿದ್ದಾರ೦ತೆ.

ನರ್ಮ್ ಬಸ್ಸು ಬ೦ದಿದೆಯಾದರೆ ಅದು ಬೀದಿಗೆ ಇಳಿದಿಲ್ಲ. ಇದು ಜಿಲ್ಲೆಯ ಸಚಿವ,ಉಡುಪಿ ಶಾಸಕರಿಗೆ ಶೋಭೆತರುವ ವಿಷಯವಲ್ಲ ಇನ್ನಾದರೂ ಸಚಿವರು ತನ್ನ ತಲೆಯಲ್ಲಿದ್ದ ಚ೦ಬವನ್ನು ಬಿಟ್ಟು ಜನರ ಸಮಸ್ಯೆಗೆ ಸ್ಪ೦ದಿಸುವರೇ ಎ೦ದು ಉಡುಪಿಯ ನಾಗರಿಕರು ಪ್ರಶ್ನಿಸುತ್ತಿದ್ದಾರೆ.

No Comments

Leave A Comment