Log In
BREAKING NEWS >
ಅಗಸ್ಟ್ 16ರಿ೦ದ ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ 118ನೇ ಭಜನಾ ಸಪ್ತಾಹ ಆರ೦ಭಗೊಳ್ಳಲಿದೆ....

ಇಂದಿನಿಂದ ದೀಪಾವಳಿ ಸಡಗರ

d7ಉಡುಪಿ: ದೀಪಾವಳಿ ಹಬ್ಬದ ತಯಾರಿ ಆರಂಭವಾಗಿದೆ. ಶುಕ್ರವಾರ ಹಬ್ಬ ಆರಂಭಗೊಳ್ಳಲಿರುವುದು.

ದೀಪಾವಳಿ ಆಚರಣೆ ಮುಂದಿನ ದಿನಾಂಕಗಳಲ್ಲಿ ನಡೆಯಲಿದೆ. ಅ. 28 ಸಂಜೆ ನೀರು ತುಂಬುವುದು, ಅ. 29 ನರಕ ಚತುರ್ದಶಿ ಬೆಳಗ್ಗೆ 5.10ಕ್ಕೆ ತೈಲಭ್ಯಂಗ (ಸ್ನಾನ), ಅ. 31 ಬಲಿಪಾಡ್ಯ ಗೋಪೂಜೆ. ಗದ್ದೆ, ಮನೆಗಳಲ್ಲಿ ದೀಪ ಇಡುವುದು ಮೂಲ್ಕಿ ಶಾಂಭವಿ ನದಿಯ ಉತ್ತರಕ್ಕೆ (ಉಡುಪಿ ಜಿಲ್ಲೆ) ಅ. 30, ದಕ್ಷಿಣಕ್ಕೆ (ದ.ಕ., ಕಾಸರಗೋಡು ಜಿಲ್ಲೆ) ಅ. 31ರಂದು.

ಶ್ರೀಕೃಷ್ಣ ಮಠವೂ ಸೇರಿದಂತೆ ವಿವಿಧ ಮಠ, ದೇವಸ್ಥಾನಗಳು, ಮನೆಗಳಲ್ಲಿ ಅ. 31ರಂದು ತುಳಸಿಪೂಜೆ ಆರಂಭವಾಗಲಿದ್ದು ಉತ್ಥಾನದ್ವಾದಶಿ ವರೆಗೆ 15 ದಿನ ನಡೆಯಲಿದೆ.

ಮಳೆ ಸಾಧ್ಯತೆ: ಬಂಗಾಲಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ತಮಿಳುನಾಡಿನ ಹೆಚ್ಚಿನೆಡೆ ಮತ್ತು ಕರ್ನಾಟಕದ ಕೆಲವೆಡೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ಣಾಟಕದಲ್ಲಿ ಶನಿವಾರದ ಬಳಿಕ ಮಳೆ ಬರುವ ಸಾಧ್ಯತೆ ಇದೆ.

ಬ್ಯಾಂಕ್‌ ವ್ಯವಹಾರ ಇಂದು ಮುಗಿಸಿ
ನರಕ ಚತುರ್ದಶಿ, ರವಿವಾರ, ಬಲಿಪಾಡ್ಯಮಿ, ರಾಜ್ಯೋತ್ಸವ ಒಟ್ಟೊಟ್ಟಿಗೆ ಬಂದಿರುವುದರಿಂದ ಅ. 29ರಿಂದ ನಿರಂತರ ನಾಲ್ಕು ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆದುದರಿಂದ ಎಟಿಎಂ ಅವಲಂಬನೆ ಹೆಚ್ಚಾಗಿ ಎಟಿಎಂಗಳಲ್ಲಿ ಬೇಗನೆ ಹಣ ಖಾಲಿಯಾಗಲಿದೆ. ಹಾಗಾಗಿ ದೀಪಾವಳಿಯ ಸಂದರ್ಭದಲ್ಲಿ ಖರ್ಚಿಗಾಗಿ ಮೊದಲೇ ಅಂದರೆ ಇಂದೇ ಬ್ಯಾಂಕಿನಿಂದ ಹಣ ತೆಗೆದುಕೊಳ್ಳುವುದು ಉತ್ತಮ.ಶುಕ್ರವಾರ ಬಳಿಕ ಮತ್ತೆ ಬ್ಯಾಂಕ್‌ ತೆರೆಯುವುದು ಬುಧವಾರ.

No Comments

Leave A Comment