Log In
BREAKING NEWS >
2020 ಮು೦ದಿನ ಪರ್ಯಾಯ ಮಹೋತ್ಸವವನ್ನು ನೆರವೇರಿಸಲಿರುವ ಶ್ರೀಅದಮಾರು ಮಠದ ಪರ್ಯಾಯಕ್ಕೆ ಶುಕ್ರವಾರದ೦ದು ಬಾಳೆ ಮಹೂರ್ತ-ಬೆಳಿಗ್ಗೆ 7.30ಕ್ಕೆ

ಸಮಸ್ಯೆ ಬಗೆಹರಿಸದಿದ್ರೆ ಪ್ಯಾಕ್ ಅಪ್ ಮಾಡಿಸ್ತೇನೆ: ಆದಿಚುಂಚನಗಿರಿ ಶ್ರೀಗಳಿಗೆ ಡಿಕೆಶಿ ಧಮ್ಕಿ

dks-newಬೆಂಗಳೂರು: ಒಕ್ಕಲಿಗರ ಸಂಘದಲ್ಲಿ ಮೂಡಿರುವ ಸಮಸ್ಯೆಯನ್ನು ಬಗೆ ಹರಿಸಬೇಕು, ಇಲ್ಲದಿದ್ದರೇ ಪ್ಯಾಕ್ ಅಪ್ ಮಾಡಿಸುವುದು ಹೇಗೆಂದು ನನಗೆ ಗೊತ್ತಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಆದಿ ಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮಿಜಿಗಳಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಶ್ರೀಗಂಧ ಕಾವಲ್ ನಲ್ಲಿ ನಡೆದ ಆಸ್ಪತ್ರೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಒಕ್ಕಲಿಗರ ಸಂಘದಲ್ಲಿ ಹಲವು ದಿನಗಳಿಂದ ಸಮಸ್ಯೆ ಉಂಟಾಗಿದೆ.

ಅದೂ ಇನ್ನೂ ಬಗೆಹರಿದಿಲ್ಲ, ಸಮಸ್ಯೆ ಬಗೆಹರಿಸಲು ಸ್ವಾಮಿಜಿಗಳು ಮುಂದಾಗಬೇಕು, ಇಲ್ಲದಿದ್ದರೇ ಅವರನ್ನು ಹೇಗೆ ಪ್ಯಾಕ್ ಅಪ್ ಮಾಡಿಸಬೇಕು ಎಂದು ತನಗೆ ಚೆನ್ನಾಗಿ ತಿಳಿದಿದೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಕೆಲವು ಟೀವಿ ಮಾಧ್ಯಮಗಳು ವರದಿ ಮಾಡಿವೆ.

No Comments

Leave A Comment