Log In
BREAKING NEWS >
ಸೆ.26ರಿ೦ದ ಮಹಾಲಯ ಪಿತೃಪಕ್ಷಾರ೦ಭ....

ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ: ಟ್ರಕ್’ಗೆ ಪ್ರವಾಸಿ ಬಸ್ ಡಿಕ್ಕಿ – 13 ಸಾವು, 31 ಮಂದಿಗೆ ಗಾಯ

california-bus-accidentಪಾಲ್ಮ್ ಸ್ಪ್ರಿಂಗ್ಸ್: ಕ್ಯಾಲಿಫೋರ್ನಿಯಾದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಪ್ರವಾಸಿ ಬಸ್ ವೊಂದು ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ 13 ಮಂದಿ ಸಾವನ್ನಪ್ಪಿ, 31 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.

ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಪ್ರವಾಸಿಗರನ್ನು ಹೊತ್ತು ವೇಗವಾಗಿ ಬಸ್ ಹೋಗುತ್ತಿದ್ದು. ಈ ವೇಳೆ ಬಸ್ ಮೇಲಿದ್ದ ನಿಯಂತ್ರಣ ಕಳೆದುಕೊಂಡ ಚಾಲಕ ಇದ್ದಕ್ಕಿದ್ದಂತೆ ಟ್ರಕ್ ವೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿ ಹೊಡೆದ ರಭಸಕ್ಕೆ ಬಸ್ ನಲ್ಲಿದ್ದ 13 ಪ್ರವಾಸಿಗರು ಸ್ಥಳದಲ್ಲಿಯೇ ದುರ್ಮರಣವನ್ನಪ್ಪಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಯುಎಸ್ಎ ಹಾಲಿಡೇ ಟೂರ್ ಬಸ್ ಇದಾಗಿದ್ದು, ರೆಡ್ ಅರ್ಥ್ ಕ್ಯಾಸಿನೋ ಇಂದ ಲಾಸ್ ಏಂಜಲ್ಸ್ ಗೆ ಹಿಂತಿರುಗಿ ಬರುತ್ತಿತ್ತು. ಘಟನೆ ವೇಳೆ ಚಾಲಕ ಕೂಡ ಸಾವನ್ನಪ್ಪಿದ್ದು, ಟ್ರಕ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕಾಗಮಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

No Comments

Leave A Comment