Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ನಾನೇಕೆ ಹೊಸ ಪಕ್ಷ ಕಟ್ಟಬೇಕು? ಅಮರ್‌ ಸಿಂಗ್‌ ಕಾರಣ: ಅಖಿಲೇಶ್

akhilesh-mulಲಕ್ನೋ : ಸಮಾಜವಾದಿ ಪಕ್ಷ ಇಬ್ಟಾಗವಾಗಲು ಬಿಡುವುದಿಲ್ಲ; ನನ್ನ ತಂದೆಯೇ ನನಗೆ ರಾಜಕೀಯ ಗುರು, ಹೊಸ ಪಕ್ಷವನ್ನು ನಾನು ಸ್ಥಾಪಿಸುವುದಿಲ್ಲ’ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಹೇಳಿದ್ದಾರೆ.

ಮುಯ್ಯಿ ತೀರಿಕೆಯ ಸರಣಿ ಉಚ್ಚಾಟನೆಗಳ ಬಳಿಕ ಇಂದು ಲಕ್ನೋದಲ್ಲಿನ ಸಮಾಜವಾದಿ ಪಕ್ಷದ ಕಾರ್ಯಾಲಯಕ್ಕೆ ತೆರಳಿ ಪಕ್ಷ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅಖೀಲೇಶ್‌ ಯಾದವ್‌, “ಹೊರಗಿನವರಾದ ಅಮರ್‌ ಸಿಂಗ್‌ ಅವರೇ ಪಕ್ಷದೊಳಗಿನ ಒಡಕು, ಭಿನ್ನಮತ, ಒಳಜಗಳಗಳಿಗೆ ಕಾರಣರಾಗಿದ್ದಾರೆ’ ಎಂದು ನೇರವಾಗಿ ಆರೋಪಿಸಿದರು.

ಭಾಷಣದ ಉದ್ದಕ್ಕೂ ಅಖೀಲೇಶ್‌ ಅವರು “ಸಮಾಜವಾದಿ ಪಕ್ಷದ ಮುಖ್ಯಸ್ಥರಾಗಿರುವ ನನ್ನ ತಂದೆ ಮುಲಾಯಂ ಸಿಂಗ್‌ ಯಾದವ್‌ ಅವರೇ ನನಗೆ ರಾಜಕೀಯ ಗುರು, ಅಂತೆಯೇ ಕಷ್ಟ-ಸುಖ ಎರಡರಲ್ಲೂ  ನಾನು ನನ್ನ ತಂದೆಯೊಂದಿಗೆ ಜತೆಗಿದ್ದೇನೆ’ ಎಂದರು.

ಪಕ್ಷದೊಳಗೆ ಒಡಕು, ಭಿನ್ನಮತ ಹಾಗೂ ಒಳಜಗಳ ಸೃಷ್ಟಿಸುತ್ತಿರುವ ಹೊರಗಿನವರಾದ ಅಮರ್‌ ಸಿಂಗ್‌ ಸಹಿತ ಯಾರ ವಿರುದ್ಧ ವೂ ಅತ್ಯಂತ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಖೀಲೇಶ್‌ ಗುಡುಗಿದರು.

No Comments

Leave A Comment