Log In
BREAKING NEWS >
ನೇಪಾಳದಲ್ಲಿ ಭಾರತದ 2000, 500, 200 ರೂ. ಮುಖಬೆಲೆಯ ನೋಟು ಬ್ಯಾನ್!.....ರಾಜಸ್ಥಾನ: ಅಶೋಕ್‌ ಗೆಹ್‌ಲೋಟ್‌ ಸಿಎಂ,ಸಚಿನ್‌ ಪೈಲಟ್‌ ಡೆಪ್ಯುಟಿ ಸಿಎಂ

ಒಡಿಶಾ ಮಾಲ್ಕನ್‌ಗಿರಿ; ಎನ್ ಕೌಂಟರ್ ಗೆ 21 ನಕ್ಸಲೀಯರು ಬಲಿ

naxal-attackಭುವನೇಶ್ವರ : ಎಡಪಂಥೀಯ ಉಗ್ರವಾದಿಗಳ ವಿರುದ್ಧದ ಹೋರಾಟಕ್ಕೆ ಸಂದಿರುವ ಅತ್ಯಂತ ಮಹತ್ವದ ವಿಜಯದಲ್ಲಿ, ಒಡಿಶಾ ರಾಜ್ಯದ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಸೋಮವಾರ 21 ಮಾವೋ ಉಗ್ರರನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.

ಒಡಿಶಾ ಹಾಗೂ ಆಂಧ್ರ ಪೊಲೀಸರು ಕೈಗೊಂಡ ಈ  ಜಂಟಿ ಕಾರ್ಯಾಚರಣೆಯಲ್ಲಿ 21 ಮಾವೋ ಉಗ್ರರು ಹತರಾದರೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಗಡಿಗೆ ತಾಗಿಕೊಂಡಿರುವ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿನ ತಮ್ಮ ಇರುವಿಕೆಯನ್ನು ಮತ್ತೆ ಪ್ರಬಲಗೊಳಿಸಲು ಮಾವೋ ಉಗ್ರರು ಯೋಜನೆ ರೂಪಿಸಿಕೊಂಡಿದ್ದಾರೆ; ಅಂತೆಯೇ ಅವರಿಂದ ವ್ಯಾಪಕ ಉಗ್ರ ದಾಳಿ ನಡೆಯುವ ಸಂಭವವಿದೆ ಎಂಬ ಗುಪ್ತಚರ ದಳದ ಮಾಹಿತಿಯನ್ನು ಅನುಸರಿಸಿ ಒಡಿಶಾ ಪೊಲೀಸರು ಕಳೆದ ಒಂದು ತಿಂಗಳಿಂದ ಮಾವೋ ಉಗ್ರ ನಿಗ್ರಹ ಕಾಯಾರಚರಣೆಯನ್ನು ಚುರುಕುಗೊಳಿಸಿದ್ದರು.

ಮಾವೋ ಬೆದರಿಕೆ ಇರುವ ಮಲ್ಕಾನ್‌ಗಿರಿ ಜಿಲ್ಲೆಯಲ್ಲಿ ಜನರ ಜೀವ ರಕ್ಷಣೆಗೆ ಯಾವೆಲ್ಲ ಕ್ರಮಗಳನ್ನು ಸರಕಾರ ತೆಗೆದುಕೊಂಡಿದೆ ಎಂದು ಪ್ರಶ್ನಿಸಿ ಒಡಿವಾ ಮಾನವ ಹಕ್ಕುಗಳ ಆಯೋಗವು ವರದಿಯನ್ನು ಕೇಳಿತ್ತು.

No Comments

Leave A Comment