Log In
BREAKING NEWS >
ಉಡುಪಿಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ನವರಾತ್ರೆಯ "ಚ೦ಡಿಕಾ ಹೋಮ " ಕಾರ್ಯಕ್ರಮವು 19-10-2018ರ೦ದು ಜರಗಲಿದೆ....

ಅಪ್ಪ, ಮಗನ ಜಗಳ ತಾರಕಕ್ಕೆ;ಮತ್ತೆ ಶಿವಪಾಲ್ ಸೇರಿ ಕೆಲವರಿಗೆ ಗೇಟ್ ಪಾಸ್

23-akhilesಲಕ್ನೋ:ಉತ್ತರಪ್ರದೇಶದ ಸಮಾಜವಾದಿ ಪಕ್ಷದ ಆಂತರಿಕ ಸಂಘರ್ಷ ಭಾನುವಾರ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಈಗ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮತ್ತೆ ತಮ್ಮ ಚಿಕ್ಕಪ್ಪ, ಉತ್ತರಪ್ರದೇಶದ ಎಸ್ಪಿಯ ಅಧ್ಯಕ್ಷ ಶಿವಪಾಲ್ ಯಾದವ್ ಹಾಗೂ ಅಮರ್ ಸಿಂಗ್ ಅವರ ಬೆಂಬಲಿಗ ಸಚಿವರುಗಳನ್ನು ಕ್ಯಾಬಿನೆಟ್ ನಿಂದ ಗೇಟ್ ಪಾಸ್ ಕೊಡುವ ನಿರ್ಧಾರ ಕೈಗೊಂಡಿರುವುದಾಗಿ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಪಕ್ಷದ ಆಂತರಿಕ ಸಂಘರ್ಷದಿಂದಾಗಿ ಸಿಎಂ ಅಖಿಲೇಶ್ ಯಾದವ್ ಬೆಂಬಲಿಗ ಶಾಸಕ ಉದಯವೀರ್ ಸಿಂಗ್ ಅವರನ್ನು ಪಕ್ಷದಿಂದ ವಜಾ ಮಾಡಿದ್ದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಸಮಾಜವಾದಿ ಪಕ್ಷ ಇಬ್ಭಾಗದತ್ತ ಸಾಗುತ್ತಿರುವ ಅನುಮಾನವನ್ನು ಮತ್ತಷ್ಟು ಬಲಪಡಿಸಿದೆ.

ಅಮರ್ ಸಿಂಗ್ ಅವರಿಗೆ ಆಪ್ತರಾಗಿರುವವರಿಗೆ ನನ್ನ ಸಂಪುಟದಲ್ಲಿ ಜಾಗವಿಲ್ಲ ಎಂದು ಮುಖ್ಯಮಂತ್ರಿ ಅಖಿಲೇಶ್ ಇಂದು ನಡೆದ ಸಭೆಯಲ್ಲಿ ತಿಳಿಸಿರುವುದಾಗಿ ಸಚಿವ ರಾಜು ಯಾದವ್ ಹೇಳಿದ್ದಾರೆ. ಪಕ್ಷದಿಂದ ಆರು ವರ್ಷಗಳ ಕಾಲ ಅಮಾನತುಗೊಂಡಿದ್ದ ಅಮರ್ ಸಿಂಗ್ ಅವರನ್ನು ಮುಲಾಯಂ ಸಿಂಗ್ ಯಾದವ್ ಅವರು ಮತ್ತೆ ಸಮಾಜವಾದಿ ಪಕ್ಷಕ್ಕೆ ಆಹ್ವಾನಿಸಿ ಪಕ್ಷದ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಹುದ್ದೆಯನ್ನು ನೀಡಿದ್ದರು.

ತನ್ನ ಆಪ್ತನನ್ನು ವಜಾಗೊಳಿಸಿರುವುದಕ್ಕೆ ತಿರುಗೇಟು ನೀಡಲು ಮುಂದಾಗಿರುವ ಅಖಿಲೇಶ್, ಸಂಪುಟದಲ್ಲಿರುವ ಸಚಿವರುಗಳಾದ ಓಂಪ್ರಕಾಶ್ ಸಿಂಗ್, ನಾರದಾ ರಾಯ್, ಷಾದಾಬ್ ಪಾತಿಮ್ ಹಾಗೂ ಬಲರಾಮ್ ಯಾದವ್ ಅವರನ್ನು ವಜಾಗೊಳಿಸುವ ಸಾಧ್ಯತೆ ಇದೆ ಎಂದು ವರದಿ ವಿವರಿಸಿದೆ.

No Comments

Leave A Comment