Log In
BREAKING NEWS >
ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ 24-10-2018ನೇ ಬುಧವಾರದ೦ದು ಚ೦ಡಿಕಾ ಹೋಮ ಕಾರ್ಯಕ್ರಮವು ಜರಗಲಿರುತ್ತದೆ.....

ನೃತ್ಯ ಮಾಡುತ್ತಲೇ ವೇದಿಕೆಯಲ್ಲೇ ಹೃದಯಾಘಾತ; ಅಶ್ವಿನಿ ವಿಧಿವಶ

dancerಮುಂಬೈ:ಜನಪ್ರಿಯ ಕ್ಲಾಸಿಕಲ್ ನೃತ್ಯಗಾರ್ತಿ ಅಶ್ವಿನಿ ಎಕ್ಬೋಟೆ (44ವರ್ಷ) ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದ ಸಂದರ್ಭದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶನಿವಾರ ತಡರಾತ್ರಿ ಪುಣೆಯಲ್ಲಿ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಶನಿವಾರ ಪುಣೆಯ ಭಾರತ್ ನಾಟ್ಯಮಂದಿರದಲ್ಲಿ ಅಶ್ವಿನಿ ಅವರು ನೃತ್ಯ ಪ್ರದರ್ಶನ ನೀಡುತ್ತಿದ್ದ ವೇಳೆಯಲ್ಲೇ ಕುಸಿದು ಬಿದ್ದು ಸ್ಟೇಜ್ ನಲ್ಲಿಯೇ ವಿಧಿವಶರಾಗಿರುವುದಾಗಿ ಹೇಳಿದ್ದಾರೆ.

ಕೂಡಲೇ ಅಶ್ವಿನಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದರು, ಆದರೆ ಅಷ್ಟರಲ್ಲೇ ಆಕೆ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆಂದು ಮಾಧ್ಯಮದ ವರದಿ ವಿವರಿಸಿದೆ.

No Comments

Leave A Comment